ಮಂಗಳೂರು : ಮೂವರು ಅಂತಾರ್‌ರಾಜ್ಯ ಕಳ್ಳರನ್ನು ಬಂಧಿಸಿರುವ ನಗರದ ಪಾಂಡೇಶ್ವರ ಪೊಲೀಸರು ಸುಮಾರು 4,40,000/ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ನಿವಾಸಿ ಅನಿಲ್ ಕುಮಾರ್(28), ಬೋಳಿಯಾರ್ ಗ್ರಾಮದ ವಿರೇಂದ್ರಶೆಟ್ಟಿ(46) ಹಾಗೂ ಮಂಗಳೂರು ಕಸಬಾ ಬೆಂಗ್ರೆಯ ಅಬ್ದುಲ್ ರಹೀಂ @ ಚಪ್ಪೆ ತಣ್ಣಿ ರಹೀಂ (42) ಎಂದು ಗುರುತಿಸಲಾಗಿದೆ.
ಕೇರಳರಾಜ್ಯದ ಕೊಯಿಲಾಂಡಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಕನ್ನಕಳವು ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಕೇರಳದ ರಾಜ್ಯದ ಕೊಯಿಲಾಂಡಿಯಲ್ಲಿರುವ ಮನೆಯಿಂದ ಕಳವು ಮಾಡಿದ ಚಿನ್ನಾಭರಣಗಳನ್ನು, ಕೇರಳ ರಾಜ್ಯದ ಕೊಯಿಲಾಂಡಿಯ ಇನ್ನೊಂದು ಮನೆಯಿಂದ ಕಳವು ಮಾಡಿದ ಸೋನಿ ಕಂಪನಿಯ ಟಿವಿ ಮತ್ತು ಮಂಗಳೂರಿನ ಕುಲಶೇಖರದಲ್ಲಿರುವ ಮನೆಯಿಂದ ಕಳವು ಮಾಡಿದ ಓನೀಡಾ ಕಂಪನಿಯ ಟಿವಿ ಮತ್ತು ತಾಮ್ರದ ಹಂಡೆ ಒಟ್ಟು ಸುಮಾರು 4,40,000/-ಮೌಲ್ಯದ ಸೊತ್ತುಗಳನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಸೊತ್ತುಗಳ ವಿವರ : ಸುಮಾರು 136 ಗ್ರಾಂ ತೂಕದ ಚಿನ್ನಾಭರಣ ಹಾಗೂ ಚಿನ್ನದ ಗಟ್ಟಿ, ಟಿವಿ-2 ಹಾಗೂ ತಾಮ್ರದ ಹಂಡೆ, ಅಂದಾಜು ಒಟ್ಟು 4,40,000/- ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಬಂಧಿತ ಆರೋಪಿಗಳ ಮೇಲೆ ಈ ಮೊದಲು ದಾಖಲಾದ ಪ್ರಕರಣಗಳ ವಿವರ : ಆರೋಪಿಗಳ ಪೈಕಿ ಅನಿಲ್ ಕುಮಾರ್ ಎಂಬಾತನ ಮೇಲೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ 3 ಕಳ್ಳತನ ಪ್ರಕರಣ, ಉಡುಪಿ ನಗರ ಠಾಣೆಯಲ್ಲಿ 2 ಕಳ್ಳತನ ಪ್ರಕರಣ, ಕ್ಯಾಲಿಕಟ್ ಮೆಡಿಕಲ್ ಕಾಲೇಜು ಪೊಲೀಸ್ ಠಾಣೆಯಲ್ಲಿ 3 ಕಳ್ಳತನ ಪ್ರಕರಣ, ಕ್ಯಾಲಿಕಟ್ಪೊಪೊಲೀಸ್ ಠಾಣೆಯಲ್ಲಿ 01 ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಗಳ ಪೈಕಿ ವಿರೇಂದ್ರಶೆಟ್ಟಿ ಎಂಬಾತನ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 1 ದರೋಡೆ ಪ್ರಕರಣ, ಬಂಟ್ವಾಳ ಪೊಲೀಸ್ ಠಾಣೆಯಲ್ಲಿ 1 ದರೋಡೆ ಪ್ರಕರಣ, ಕೊಣಾಜೆ ಪೊಲೀಸ್ ಠಾಣೆಯಲ್ಲಿ 01 ಕೊಲೆಯತ್ನ ಪ್ರಕರಣ, ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ 01 ದರೋಡೆ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಗಳ ಪೈಕಿ .ಅಬ್ದುಲ್ ರಹೀಂ, @ ಚಪ್ಪೆ ತಣ್ಣಿ ರಹೀಂ, ಎಂಬಾತನ ಮೇಲೆ ಉತ್ತರ ಪೊಲೀಸ್ ಠಾಣೆಯಲ್ಲಿ 2 ಕೊಲೆಯತ್ನ ಪ್ರಕರಣ , ಬರ್ಕೆ ಪೊಲೀಸ್ ಠಾಣೆ, ಪಣಂಬೂರು ಪೊಲೀಸ್ ಠಾಣೆ, ಕರಾವಳಿ ಕಾವಲುಪಡೆ ಪೊಲೀಸ್ ಠಾಣೆ, ಮಂಗಳೂರು ಪೂರ್ವ ಪೊಲೀಸ್ ಠಾಣೆ ತಲಾ ಒಂದೊಂದು ಗಾಂಜಾ ಪ್ರಕರಣ ದಾಖಲಾಗಿರುತ್ತದೆ, ಈತನು ಮೇಲೆ 2017 ನೇ ಸಾಲಿನಲ್ಲಿ ಗೂಂಡಾಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್, ಐಪಿಎಸ್. ರವರ ನಿರ್ದೇಶನದಲ್ಲಿ ಉಪ ಪೊಲೀಸ್ ಆಯುಕ್ತರಾದ (ಕಾನೂನು ಮತ್ತು ಸುವ್ಯವಸ್ಥೆ) ಹನುಮಂತರಾಯ, ಐಪಿಎಸ್ ಉಪ ಪೊಲೀಸ್ ಆಯುಕ್ತರಾದ (ಅಪರಾಧ ಮತ್ತು ಸಂಚಾರ) ಶ್ರೀಮತಿ ಉಮಾಪ್ರಶಾಂತ್, ಮಂಗಳೂರು ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಸುಧೀರ್ ಹೆಗ್ಡೆರವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಕುಮಾರ್ ಆರಾಧ್ಯ ರವರ ನಿರ್ದೇಶನದಂತೆ ನಡೆದ ಪತ್ತೆ ಕಾರ್ಯಾಚರಣೆ ಯಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪನಿರೀಕ್ಷಕರಾದ ಮಂಜುಳಾ.ಎಲ್ ರವರು ಠಾಣಾ ಸಿಬ್ಬಂದಿಗಳು ಸಹಕರಿಸಿರುತ್ತಾರೆ.
Comments are closed.