ಕರಾವಳಿ

ದೇಹದಲ್ಲಿ ರಕ್ತ ಹೀನತೆ ಸಮಸ್ಯೆ ಇದ್ದರೆ ಸೋಯಾಬಿನ್ ಬೀಜ ಉತ್ತಮ ಪರಿಹಾರ

Pinterest LinkedIn Tumblr

ಸೋಯಾಬಿನ್ ಬೀಜ ಎಷ್ಟು ರುಚಿಕರವಾಗಿದೆಯೋ ಅದರ ಜೊತೆಗೆ ಆರೋಗ್ಯಕ್ಕೂ ಉತ್ತಮ. ಒಂದು ಕಪ್ ಚಿಕನ್ ನಲ್ಲಿ 43.3 ಗ್ರಾಂನಷ್ಟು ಪ್ರೋಟೀನ್​ ಇರುತ್ತದೆಯಂತೆ ಆದರೆ ಒಂದು ಕಪ್ ಸೋಯಾಬಿನ್ ಬೀಜದಲ್ಲಿ 68 ಗ್ರಾಂ ಪ್ರೋಟೀನ್​ ಇರುತ್ತದೆ. ಇದರಿಂದ ಬೇರೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ.

ಸೋಯಾಬಿನ್ ಸೇವನೆ ಮಾಡಿದರೆ ಶರೀರದಲ್ಲಿ ರಕ್ತ ಹೀನತೆ ಸಮಸ್ಯೆ ಇದ್ದರೆ ಅದು ನಿವಾರಣೆಯಾಗುತ್ತದೆ.
ಸೋಯಾಬಿನ್ ಸೇವನೆ ಮಾಡಿದರೆ ಹೃದಯದ ಅರೋಗ್ಯ ಸಹ ಉತ್ತಮವಾಗಿರುತ್ತದೆ. ಇದರಲ್ಲಿರುವ ಲೆಸಿತಿನ್ ಹೆಸರಿನ ಪದಾರ್ಥ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯ ಆರೋಗ್ಯದಿಂದಿರಲು ಸಹಾಯ ಮಾಡುತ್ತದೆ.
ಮಹಿಳೆಯರಲ್ಲಿ ಕಾಡುವಂತಹ ಮೇನ್ಸ್ಟ್ರುವೇಶನ್ ಸಮಸ್ಯೆ ನಿವಾರಣೆಯಾಗಲು, ಮೂಳೆಗಳ ನೋವು ನಿವಾರಣೆಯಾಗಲು, ಸೋಯಾಬಿನ್ ಮುಖ್ಯ ಪಾತ್ರ ವಹಿಸುತ್ತದೆ. ಇದಲ್ಲದೆ ಮೂಳೆಗಳು ಸ್ಟ್ರಾಂಗ್ ಆಗಲು, ಮಧುಮೇಹ ಸಮಸ್ಯೆ ನಿವಾರಣೆ ಮಾಡಲು ಇದು ಸಹಾಯ ಮಾಡುತ್ತದೆ.
ಸೋಯಾ ಸೇವನೆಯು ರಕ್ತದ ಹೆಚ್ಚಾಗಲು ಸಹಾಯ ಪ್ರಯೋಜನಕಾರಿಯಾಗಿದೆ
ಸೋಯಾ ಬೀನ್ಸ್ ಕಾಳಿನಲ್ಲಿ ಕ್ಯಾಲ್ಸಿಯಂ, ಐರನ್, ಸೋಡಿಯಂ, ಮೆಗ್ನೀಷಿಯಂ, ವಿಟಮಿನ್ ಸಿ, ವಿಟಮಿನ್ ಬಿ6, ಅಂಶಗಳಿದ್ದು ಮೈಗ್ರೇನ್, ಕಿಡ್ನಿ ತೊಂದರೆ, ಖಿನ್ನತೆ, ಅಜೀರ್ಣ ಇವುಗಳ ತೊಂದರೆಯಿಂದ ಮುಕ್ತರಾಗಬಹುದು.
ಸೋಯಾಬೀನ್ ಹಾಲನ್ನು ಉಪಯೋಗಿಸಿದರೆ ದೇಹದ ಮೂಳೆಗಳು ಶಕ್ತಿಯುತವಾಗುತ್ತವೆ. ಚರ್ಮ, ಕೂದಲು ಬೆಳವಣಿಗೆಗೆ ಈ ಹಾಲು ಸಹಕಾರಿಯಾಗಿದೆ.

Comments are closed.