ಕರಾವಳಿ

ಮಂಗಳೂರಿನ ಪ್ರತಿಷ್ಠಿತ ಹೊಟೇಲ್ ಕೊಠಡಿಯಲ್ಲಿ ಅಗ್ನಿ ದುರಂತ : ಆರು ದಿನಗಳಲ್ಲಿ ಮೂರನೇ ಅಗ್ನಿ ದುರಂತ

Pinterest LinkedIn Tumblr

ಮಂಗಳೂರು, ಮಾರ್ಚ್.26: ಮಂಗಳೂರಿನ ಪ್ರತಿಷ್ಠಿತ ಹೊಟೇಲೊಂದರ ಕೊಠಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಸೋಮವಾರ ಸಂಜೆ ಸಂಭವಿಸಿದೆ. ಈ ಮೂಲಕ ನಗರದಲ್ಲಿ ಕಳೆದ ಆರು ದಿನಗಳ ಅವಧಿಯಲ್ಲಿ ಮೂರು ಅಗ್ನಿ ಅವಘಡ ಸಂಭವಿಸಿದೆ.

ನಗರದ ಫಳ್ನೀರ್ ರೋಡ್‌ನಲ್ಲಿರುವ ಮೋತಿ ಮಹಲ್ ಹೊಟೇಲ್‌ನ ಕೊಠಡಿಯಲ್ಲಿ ಸಂಜೆ ವೇಳೆಗೆ ಈ ಅಗ್ನಿ ದುರಂತ ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಬೆಂಕಿ ಹತ್ತಿಕೊಂಡ ಪರಿಣಾಮ ಕೊಠಡಿಯಲ್ಲಿದ್ದ ಎಸಿ (ಹವಾ ನಿಯಂತ್ರಣ ಯಂತ್ರ), ಟಿವಿ, ಹಾಸಿಗೆ ಹಾಗೂ ಸೊತ್ತುಗಳು ಸುಟ್ಟು ಕರಕಲಾಗಿವೆ. ಕೊಠಡಿಯ ಒಳಗಿನಿಂದ ಹೊಗೆ ಬರುತ್ತಿರುದ್ದುದರಿಂದ ಈ ವಿಷಯ ಸಿಬ್ಬಂದಿಯ ಗಮನಕ್ಕೆ ಬಂದಿದೆ.

ತಕ್ಷಣ ಪಾಂಡೇಶ್ವರ ಅಗ್ನಿ ಶಾಮಕದಳ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ, ಡುಬ್ಲಿಕೇಟ್ ಕೀ ಬಳಸಿ ಕೊಠಡಿ ಒಳಪ್ರವೇಶಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಕೊಠಡಿಯಲ್ಲಿ ಯಾರೂ ಇರದಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.

ನಗರದಲ್ಲಿ ಆರು ದಿನಗಳಲ್ಲಿ ಮೂರು ಅಗ್ನಿ ಅವಘಡ :

ಮಂಗಳೂರು ನಗರ ವ್ಯಾಪ್ತಿಯಲ್ಲಿ ಕಳೆದ ಆರು ದಿನಗಳ ಅವಧಿಯಲ್ಲಿ ಸಂಭವಿಸಿದ ಮೂರನೇ ಅಗ್ನಿ ದುರಂತವಾಗಿದೆ. ಮಾ.21ರಂದು ನಗರದ ಬಿಜೈ ಮಾರುಕಟ್ಟೆ ಸಮೀಪದ ಬಹುಮಹಡಿ ವಸತಿ ಸಮುಚ್ಛಯದ ಏಳನೇ ಮಹಡಿಯಲ್ಲಿದ್ದ ಫ್ಲಾಟೊಂದರಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಮಾ.23ರಂದು ರಾತ್ರಿ ಪಾಂಡೇಶ್ವರದ ದೂಮಪ್ಪ ಕಂಪೌಂಡ್ ನಲ್ಲಿ ಏಳು ಮನಗಳು ಆಕಸ್ಮಿಕ ಬೆಂಕಿ ಅವಘಡದಿಂದ ಹಾನಿಗೀಡಾಗಿತ್ತು. ಇದು ಮೂರನೇ ಅಗ್ನಿ ಅವಘಡವಾಗಿದೆ.

Comments are closed.