ಕರಾವಳಿ

ತೆಂಕನಿಡಿಯೂರು ಕಾಲೇಜು : ಎಂ.ಕಾಂ. ವಿಭಾಗಕ್ಕೆ ಮೂರು ರ್ಯಾಂಕ್

Pinterest LinkedIn Tumblr

ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯದ ಮೇ 2018 ನೇ ಸಾಲಿನ ಸ್ನಾತಕೋತ್ತರ ಪದವಿಗಾಗಿ ನಡೆಸಿದ ಪರೀಕ್ಷೆಯಲ್ಲಿ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎಂ.ಕಾಂ. ವಿಭಾಗದಲ್ಲಿ 3 ರ್ಯಾಂಕ್‍ಗಳನ್ನು  ಸುಮಾ (ಪ್ರಥಮ ರ್ಯಾಂಕ್), ಸ್ಮಿತಾ ಭಟ್ (ನಾಲ್ಕನೇ ರ್ಯಾಂಕ್) ಹಾಗೂ ಶ್ರೇಯಾ ಶೆಟ್ಟಿ (ಎಂಟನೇ ರ್ಯಾಂಕ್) ಪಡೆದಿರುತ್ತಾರೆ.

ಇವರಿಗೆ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ರಘುಪತಿ ಭಟ್ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು, ಕಾಲೇಜು ಪ್ರಾಂಶುಪಾಲರು, ವಿಭಾಗ ಮುಖ್ಯಸ್ಥರು ಹಾಗೂ ವೃಂದ, ಬೋಧಕ/ಬೋಧಕೇತರರು, ವಿದ್ಯಾರ್ಥಿಗಳು, ರಕ್ಷಕ-ಶಿಕ್ಷಕ ಸಂಘ, ಹಳೆ ವಿದ್ಯಾರ್ಥಿಗಳು, ಅಭಿನಂದನೆ ಸಲ್ಲಿಸಿರುತ್ತಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Comments are closed.