ಕರಾವಳಿ

ಮತದಾದರರು ನನ್ನನ್ನು ಆಶೀರ್ವದಿಸಿದರೆ ಉದ್ಯೋಗ ಸೃಷ್ಟಿ ಜೊತೆಗೆ ಜಿಲ್ಲೆಯಲ್ಲಿ ಸೌಹಾರ್ದತೆ ಬೆಸೆಯುವ ಕಾರ್ಯ ಮಾಡುವೆ : ಮಿಥುನ್ ರೈ

Pinterest LinkedIn Tumblr

ಮಂಗಳೂರು, ಮಾರ್ಚ್ 25 : ದ.ಕ. ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಸೋಮವಾರ ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸುವ ಮೊದಲು ಮಂಗಳೂರಿನ ಪುರಭವನದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ಕಳೆದ 28 ವರ್ಷಗಳಿಂದ ನಮ್ಮ ದ.ಕ.ಜಿಲ್ಲೆಯಲ್ಲಿ ಬಿಜೆಪಿಯ ಸಂಸದರಿದ್ದರೂ ಉದ್ಯೋಗ ಸೃಷ್ಟಿಸುವಲ್ಲಿ‌ ವಿಫಲರಾಗಿದ್ದಾರೆ. ಹೀಗಾಗಿ ಇಲ್ಲಿನ ಯುವಕರು ಉದ್ಯೋಗ ಅರಸಿ ಹೊರ ನಗರ, ರಾಜ್ಯ, ದೇಶಗಳಿಗೆ ಹೋಗುವಂತಾಗಿದೆ ಎಂದು ಆರೋಪಿಸಿದರು.

ತಮ್ಮ ಮಾತನ್ನು ಮುಂದುವರಿಸಿದ ಅವರು, ದ.ಕ.ಜಿಲ್ಲೆ ಸೌಹಾರ್ದತೆಯ ಪ್ರದೇಶವಾಗಿದ್ದು, ದುರದೃಷ್ಟವಶಾತ್ ರಾಜಕೀಯಕ್ಕೋಸ್ಕರ ಇಲ್ಲಿನ ಸೌಹಾರ್ದತೆಗೆ ಧಕ್ಕೆ ತರುವಂತಹ ಕೆಲಸವಾಗುತ್ತಿದೆ. ನನಗೆ ಜಿಲ್ಲೆಯ ಜನತೆ ಆಶೀರ್ವದಿಸಿದರೆ ಉದ್ಯೋಗ ಸೃಷ್ಟಿ ಮಾಡುವುದರೊಂದಿಗೆ ಸೌಹಾರ್ದತೆಯನ್ನು ಬೆಸೆಯುವ ಕಾರ್ಯ ಮಾಡುತ್ತೇನೆ ಎಂದರು.

ಮಾತ್ರವಲ್ಲದೇ ಲೋಕಸಭಾ ಚುನಾವಣೆಯಲ್ಲಿ ತಾವೆಲ್ಲಾ ನನ್ನನ್ನು ಗೆಲ್ಲಿಸಿದರೆ ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆಗೂ ತಡೆ ನೀಡುವ ಕಾರ್ಯ ಮಾಡುವೆ. ಅಲ್ಲದೆ ಇಲ್ಲಿನ ಸಾಂಸ್ಕೃತಿಕ ನಗರಿಯನ್ನಾಗಿ ಮಾಡುವಲ್ಲಿಯೂ ಪ್ರಾಮಾಣಿಕ ಪ್ರಯತ್ನ ಮಾಡುವೆ. ಈ ಎಲ್ಲದಕ್ಕೂ ಮತದಾರರ ಆಶೀರ್ವಾದ ನನಗೆ ಬೇಕು ಎಂದು ಹೇಳಿದರು.

ಇನ್ನು ಯುವಕರಿಗೆ ಅವಕಾಶ ನೀಡಬೇಕೆಂದು ಎಲ್ಲಾ ರಾಷ್ಟ್ರೀಯ ಪಕ್ಷಗಳು ಭಾಷಣಗಳಲ್ಲಿ ಹೇಳುತ್ತವೆ. ಆದರೆ ಕಾಂಗ್ರೆಸ್ ಪಕ್ಷ ಯುವಕರ ಜೊತೆಗಿದೆ, ಯುವಕರಿಗೆ ಮನ್ನಣೆ ನೀಡುತ್ತದೆ ಎನ್ನುವುದಕ್ಕೆ ನನ್ನನ್ನು ಸಂಸದ ಸ್ಥಾನಕ್ಕೆ ಅಧಿಕೃತವಾಗಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದೇ ಸಾಕ್ಷಿ ಎಂದು ಮಿಥುನ್ ರೈ ಹೇಳಿದರು.

ಪುರಭವನ ಪ್ರವೇಶಕ್ಕೂ ಮುನ್ನ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ :

ಪುರಭವನದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಸಮಾವೇಶಕ್ಕೆ ಸಹಸ್ರರಾರು ಕಾರ್ಯಕರತೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದ ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಅಭ್ಯರ್ಥಿ, ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಅವರು ಮೊದಲಿಗೆ ಪುರಭವನದ ಮುಂಭಾಗಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಧಾನ ಪರಿಷತ್ ಸದಸ್ಯ ಮಿಥುನ್ ರೈ ಅವರ ಜೊತೆಗಿದ್ದರು.

ಸಮವೇಶದಲ್ಲಿ ಸಹಸ್ರಾರು ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರಾದ ಜನಾರ್ದನ ಪೂಜಾರಿ, ರಮಾನಾಥ ರೈ, ಯು.ಟಿ.ಖಾದರ್, ಜೆ.ಆರ್.ಲೋಬೋ, ಮೊಯ್ದಿನ್ ಬಾವ, ಅಭಯಚಂದ್ರ ಜೈನ್, ಶಕುಂತಲ ಶೆಟ್ಟಿ, ಹರೀಶ್ ಕುಮಾರ್, ಕೆ.ಎಸ್.ಮಸೂದ್, ಜೆಡಿಎಸ್ ಮುಖಂಡರಾದ ಅಮರನಾಥ ಶೆಟ್ಟಿ, ಮೊಹಮ್ಮದ್ ಕುಂಜ್ಞಿ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

Comments are closed.