ಕರಾವಳಿ

ಕುಂದಾಪುರ: ಜಪ್ತಿಯ ಡೇರಿಗೆ ಹಾಲು ಕೊಂಡೊಯ್ಯುತ್ತಿದ್ದಾಗ ಅಚಾನಕ್ ಚಿರತೆ ದಾಳಿ; ಮಹಿಳೆಗೆ ಗಾಯ

Pinterest LinkedIn Tumblr

ಕುಂದಾಪುರ: ನಸುಕಿನ ವೇಳೆ ಹಾಲು ಡೇರಿಗೆ ಹಾಲು ಕೊಡಲು ತೆರಳುತ್ತಿದ್ದ ಮಹಿಳೆಯ ಮೇಲೆ ಚಿರತೆ ದಾಳಿ ನಡೆಸಿದ್ದು ಮಹಿಳೆಗೆ ಗಂಭೀರವಾದ ಘಟನೆ ಕುಂದಾಪುರ ತಾಲೂಕಿನ ಜಪ್ತಿ ಎಂಬಲ್ಲಿ ಸೋಮವಾರ ನಡೆದಿದೆ.

ಇಲ್ಲಿನ ಮಹಿಳೆಗೆ ಚಿರತೆ ದಾಳಿಯಿಂದ ಗಾಯಗಳಾಗಿದೆ. ಹುಣ್ಸೆಕಟ್ಟೆಯ ಮನೆಯಿಂದ ಹಾಲು ತೆಗೆದುಕೊಂಡು ಹೋಗುತ್ತಿದ್ದಾಗ ಸಮೀಪದ ಹಾಡಿಯಿಂದ ಹಾರಿದ ಚಿರತೆ ಮಹಿಳೆ ಮೇಲೆ ದಾಳಿ ನಡೆಸಿದ್ದು ಇದರಿಂದಾಗಿ ಮುಖ, ಹಣೆ, ಕುತ್ತಿಗೆ ಹಾಗೂ ಕಿವಿ, ಕೈ ಭಾಗಕ್ಕೆ ಗಾಯಗಳಾಗಿದೆ. ಕೂಡಲೇ ಸ್ಥಳೀಯರು ಅವರನ್ನು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಈ ಭಾಗದಲ್ಲಿ ಚಿರತೆ ಓಡಾಡ ಇದೇ ಮೊದಲು ಎನ್ನಲಾಗುತ್ತಿದ್ದು ಸ್ಥಳಕ್ಕೆ ಅರಣ್ಯ ಇಲಾಖೆಯ ಕುಂದಾಪುರ ಆರ್.ಎಫ್.ಒ ಪ್ರಭಾಕರ್ ಕುಲಾಲ್, ಉಪವಲಯ ಅರಣ್ಯಾಧಿಕಾರಿ ಉದಯ್ ಮೊದಲಾದವರು ಭೇಟಿ ನೀಡಿದ್ದಾರೆ.

ಸೆರೆಗಾಗಿ ಬೋನು…
ಇನ್ನು ಚಿರತೆ ಪ್ರತ್ಯಕ್ಷವಾಗಿದ್ದಲ್ಲದೇ ಜನರ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಈ ಭಾಗದ ಜನರು ಆತಂಕಕ್ಕೊಳಗಾಗಿದ್ದಾರೆ. ಚಿರತೆ ಸೆರೆಗೆ ಆ ಭಾಗದಲ್ಲಿ ಬೋನಿಟ್ಟು ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ‘ಕನ್ನಡಿಗ ವರ್ಲ್ಡ್’ಗೆ ಮಾಹಿತಿ ನೀಡಿದ್ದಾರೆ.

Comments are closed.