ಕರಾವಳಿ

ದುಬೈನಲ್ಲಿ ಪತ್ತೆಯಾದರೆ ನಾಪತ್ತೆಯಾಗಿದ್ದ ಮಲ್ಪೆಯ ಮೀನುಗಾರರು?

Pinterest LinkedIn Tumblr

ಉಡುಪಿ: ಮಲ್ಪೆಯ ಕಡಲ ಬಂದರಿನಿಂದ ನಾಪತ್ತೆಯಾಗಿದ್ದ 7 ಮೀನುಗಾರರು ದುಬೈನಲ್ಲಿ ಪತ್ತೆಯಾಗಿರುವ ಮಾಹಿತಿ ಲಭಿಸಿದೆ ಎಂದು ಬಿಜೆಪಿ ಸಂಸದೆ, ರಾಷ್ಟ್ರೀಯ ವಕ್ತಾರೆ ಮೀನಾಕ್ಷಿ ಲೇಖಿ ತಿಳಿಸಿದ್ದಾರೆ.

ನಮೋ ಭಾರತ್ ಸಂಘಟನೆಯಿಂದ ಪಾಂಚಜನ್ಯ ಸಮಾವೇಶ ವೇಳೆ ಭಾಷಣ ಮಾಡಿದ ಸಂದರ್ಭದಲ್ಲಿ ಹೇಳಿಕೆ ನೀಡಿದ್ದು, ದುಬೈನಲ್ಲಿ ಕೆಲ ಮೀನುಗಾರರ ಪತ್ತೆಯಾಗಿರುವ ಬಗ್ಗೆ ಕೆಲ ಮಾಧ್ಯಮಗಳು ವರದಿ ಮಾಡಿದೆ. ಈ ವರದಿಯಗಳ ಅನ್ವಯ ಪತ್ತೆಯಾದ ಮೀನುಗಾರರು ಮಲ್ಪೆಯ 7 ಮೀನುಗಾರರ ಎಂಬುವುದರ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದರು. ಒಂದೊಮ್ಮೆ ಹೌದಾದರೆ ಸರ್ಕಾರ ಅವರನ್ನು ವಾಪಸ್ ಕರೆತರಲು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಡಿಸೆಂಬರ್ 15 ರಂದು ಮಲ್ಪೆಯಿಂದ ಮಹಾರಾಷ್ಟ್ರದ ರತ್ನಗಿರಿಗೆ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಎನ್ನುವ ಬೋಟ್ ಸಮೇತ ಅದರಲ್ಲಿದ್ದ ರಾಜ್ಯದ 7 ಮೀನುಗಾರರು ನಾಪತ್ತೆಯಾಗಿದ್ದು ಮೂರು ತಿಂಗಳು ಕಳೆಯುತ್ತಾ ಬಂದರೂ ಕೂಡ ಇನ್ನೂ ಮೀನುಗಾಗರರ ಮಾಹಿತಿ ಸಿಕ್ಕಿಲ್ಲ.

Comments are closed.