ಕರಾವಳಿ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನಾಳೆ ಮಂಗಳೂರಿಗೆ..

Pinterest LinkedIn Tumblr

ಮಂಗಳೂರು, ಮಾರ್ಚ್.02 : ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ನಾಳೆ ( ಮಾರ್ಚ್.3) ಮಂಗಳೂರಿಗೆ ಭೇಟಿ ನೀಡಲಿರುವರು.

ಮಹಾತ್ಮ ಗಾಂಧಿ ಶಾಂತಿ-ಸೌಹಾರ್ದ ವೇದಿಕೆಯಿಂದ ಮಾ.3ರಂದು ನಗರದ ಪುರಭವನದಲ್ಲಿ ನಡೆಯಲಿರುವ ದಿ.ಕುರ್ನಾಡು (ಪುಲ್ಲು) ರಾಮಯ್ಯ ನಾಯ್ಕ ಮತ್ತು ದಿ.ಮಹೀಮ್ ಹೆಗ್ಡೆ ಅವರ ‘ನೆನಪು’ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭಾಗವಹಿಸಲಿದ್ದಾರೆ.

ಎಚ್.ಡಿ.ದೇವೇಗೌಡ

ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮಹಾತ್ಮ ಗಾಂಧಿ ಶಾಂತಿ-ಸೌಹಾರ್ದ ವೇದಿಕೆಯ ಸ್ಥಾಪಕ ಅಧ್ಯಕ್ಷ ರವಿಶಂಕರ್ ಶೆಟ್ಟಿ ಅವರು, ಶಾಂತಿ, ಸೌಹಾರ್ದ, ಸಹಬಾಳ್ವೆಯ ತತ್ವದಡಿ 2006ರಲ್ಲಿ ವೇದಿಕೆ ಆರಂಭಿಸಲಾಗಿದ್ದು ದಿ.ಎಂ.ಪಿ.ಪ್ರಕಾಶ್, ದಿ.ಕೆ.ಎನ್.ರಾಜಪ್ಪ, ದಿ.ಡಾ.ಎಜಾಸುದ್ದೀನ್ ಹಾಗೂ ರೆ.ಫಾ.ಫಾಸ್ಡಿನ್ ಲೋಬೋ ಮಹಾಪೋಷಕರಾಗಿದ್ದರು. ಈ ಸಂಘಟನೆಯಲ್ಲಿ ರಾಮಯ್ಯ ನಾಯ್ಕಿ ಬಳಿಕ ವಸಂತ ಬಂಗೇರ ಅಧ್ಯಕ್ಷರಾಗಿದ್ದರು. ಸಮಾಜಕ್ಕಾಗಿ ಸೇವೆ ಸಲ್ಲಿಸಿದ ಅವರನ್ನು ನೆನಪಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ರಾಮಯ್ಯ ನಾಯ್ಕ ಒಡನಾಡಿಯಾಗಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ವೇದಿಕೆಯಲ್ಲಿ ಇರುವ ಎಲ್ಲರೂ ಒಂದೊಂದು ಪಕ್ಷದಲ್ಲಿದ್ದು ಹೆಚ್ಚಿನವರು ಕಾಂಗ್ರೆಸ್ ಪಕ್ಷದಲ್ಲಿದ್ದರೂ ವೇದಿಕೆಗೆ ರಾಜಕೀಯ ತಂದಿಲ್ಲ ಎಂದು ತಿಳಿಸಿದರು.

ಈ ವೇಳೆ ಫಾರೂಕ್ ಉಳ್ಳಾಲ್, ಸುರೇಶ್‌ಚಂದ್ರ ಶೆಟ್ಟಿ, ದಿನೇಶ್ ಕುಂಪಲ, ಶ್ರೀನಿವಾಸ ಶೆಟ್ಟಿ ಪುಲ್ಲು, ನಝೀರ್ ಉಳ್ಳಾಲ್, ಯೋಗೀಶ್ ಶೆಟ್ಟಿ ಜೆಪ್ಪು ಮುಂತಾದವರು ಉಪಸ್ಥಿತರಿದ್ದರು.

Comments are closed.