ಕರಾವಳಿ

ನಾಳೆ ಅಬ್ಬಕ್ಕ ಉತ್ಸವಕ್ಕೆ ಚಾಲನೆ : ಶೃಂಗಾರಗೊಂಡಿದೆ ಉಳ್ಳಾಲ ಕಡಲ ತೀರ – ಮಹಿಳೆಯರ ತ್ರೋ ಬಾಲ್, ಆಹಾರೋತ್ಸವ, ದೋಣಿ ಸ್ಪರ್ಧೆ. ಈಜು ಸ್ಪರ್ಧೆ, ಬಲೆ ಬೀಸಿ ಮೀನು ಹಿಡಿಯುವ ಸ್ಪರ್ಧೆ ಉತ್ಸವದ ವಿಶೇಷ ಆಕರ್ಷಣೆಗೆಳು.

Pinterest LinkedIn Tumblr

ಮಹಿಳೆಯರ ತ್ರೋ ಬಾಲ್, ಆಹಾರೋತ್ಸವ, ದೋಣಿ ಸ್ಪರ್ಧೆ. ಈಜು ಸ್ಪರ್ಧೆ, ಸಾಂಪ್ರದಾಯಿಕ ಬಲೆ ಬೀಸಿ ಮೀನು ಹಿಡಿಯುವ ಸ್ಪರ್ಧೆ ಉತ್ಸವದ ವಿಶೇಷ ಆಕರ್ಷಣೆಗೆಳು.

ಮಂಗಳೂರು ಮಾರ್ಚ್. 01 : ಉಳ್ಳಾಲ ಕಡಲ ತೀರದ ವೇದಿಕೆಯಲ್ಲಿ ಮಾರ್ಚ್ 2 ಮತ್ತು 3ರಂದು ನಡೆಯಲಿರುವ ಅಬ್ಬಕ್ಕ ಉತ್ಸವದ ಸಿದ್ಧತೆಗಳು ಪೂರ್ಣಗೊಂಡಿದ್ದು, ಹಂತಿಮ ಹಂತದ ಸಿದ್ಧತೆಗಳನ್ನು ಉತ್ಸವದ ನೋಡಲ್ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಡಾ ಸೆಲ್ವಮಣಿ ಆರ್ ಅವರು ಇತರ ಅಧಿಕಾರಿಗಳೊಂದಿಗೆ ಇಂದು ವೀಕ್ಷಿಸಿದರು.

ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅವರು ಮಾರ್ಚ್ 2 ರಂದು ಅಪರಾಹ್ನ 3.30 ಕ್ಕೆ ಭಾರತ್ ಪ್ರೌಢಶಾಲೆ ಉಳ್ಳಾಲದಿಂದ ಆಕರ್ಷಣೀಯ ಮೆರವಣಿಗೆಗೆ ಚಾಲನೆ ನೀಡುವರು.

ಸಂಜೆ 5 ಗಂಟೆಗೆ ಉಳ್ಳಾಲ ಕಡಲ ತೀರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅಬ್ಬಕ್ಕ ಉತ್ಸವ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಅಬ್ಬಕ್ಕ ಉತ್ಸವದಲ್ಲಿ ಎರಡು ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರಗೋಷ್ಠಿ ಮತ್ತು ಬಹು ಭಾಷಾ ಕವಿಗೋಷ್ಠಿ ನಡೆಯಲಿದೆ.

ಉತ್ಸವದ ಪ್ರಯುಕ್ತ ನಡೆಯುವ ಸ್ಪರ್ಧೆಗಳು : ಮಾರ್ಚ್ 2 ರಂದು ಬೆಳಿಗ್ಗೆ 7 ಗಂಟೆಗೆ ರಾಜ್ಯಮಟ್ಟದ ಪುರುಷ ಹಾಗೂ ಮಹಿಳೆಯರಿಗೆ ಮುಕ್ತ ಹಾಫ್ ಮ್ಯಾರಥಾನ್ ಸ್ಪರ್ಧೆ ನಡೆಯಲಿದ್ದು, ಉಳ್ಳಾಲ ಅಬ್ಬಕ್ಕ ಸರ್ಕಲ್‍ನಿಂದ ಪ್ರಾರಂಭಗೊಳಿಸಿ ಮಂಗಳೂರು ವಿಶ್ವವಿದ್ಯಾಲಯ ಕೊಣಾಜೆ ಮೈದಾನದಲ್ಲಿ ಮ್ಯಾರಾಥಾನ್ ಮುಕ್ತಾಯಗೊಳ್ಳಲಿದೆ. ಪೂರ್ವಾಹ್ನ 9 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲೆಯ ಫ್ರೌಢಶಾಲಾ ಬಾಲಕರಿಗೆ ಫುಟ್‍ಬಾಲ್ ಪಂದ್ಯಾಟ ಭಾರತ್ ಪ್ರೌಢಶಾಲಾ ಮೈದಾನ ಉಳ್ಳಾಲ, ಇಲ್ಲಿ ನಡೆಯಲಿದೆ.

ಮಹಿಳೆಯರ ತ್ರೋ ಬಾಲ್, ಆಹಾರೋತ್ಸವ, ದೋಣಿ ಸ್ಪರ್ಧೆ. ಈಜು ಸ್ಪರ್ಧೆ, ಸಾಂಪ್ರದಾಯಿಕ ಬಲೆ ಬೀಸಿ ಮೀನು ಹಿಡಿಯುವ ಸ್ಪರ್ಧೆ ಉತ್ಸವದ ವಿಶೇಷ ಆಕರ್ಷಣೆಗೆಳು.

ಮಾರ್ಚ್ 3 ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಅಬ್ಬಕ್ಕ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. 2018-19 ರ ಅಬ್ಬಕ್ಕ ಪ್ರಶಸ್ತಿ ಪುರಸ್ಕೃತರು ಡಾ. ಸಂದ್ಯಾ ಎಸ್. ಪೈ ಸಾಹಿತ್ಯ ಕ್ಷೇತ್ರ, ಮತ್ತು ಉರ್ಮಿಳಾ ರಮೇಶ್ ಕುಮಾರ್ ಸಾಹಿತ್ಯೇತ್ತರ ಕ್ಷೇತ್ರ ಅವರ ಸಾಧನೆ ಮತ್ತು ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

Comments are closed.