ಕರಾವಳಿ

ಕದ್ರಿ ಠಾಣಾ ವ್ಯಾಪಿಯಲ್ಲಿ ಸುಜುಕಿ ಸ್ಕೂಟರ್ ಕಳವು : ಆಕಾಶಭವನದ ಅಪ್ರಾಪ್ತ ಬಾಲಕನ ಬಂಧನ

Pinterest LinkedIn Tumblr

ಮಂಗಳೂರು ; ಕದ್ರಿ ಪೂರ್ವ ಪೋಲೀಸ್ ಠಾಣೆಯ ವ್ಯಾಪ್ತಿ ವ್ಯಾಪ್ತಿಯಲ್ಲಿ ಸುಜುಕಿ ಎಕ್ಸಿಸ್ ಸ್ಕೂಟರ್ ಕಳ್ಳತನ ಮಾಡಿದ ಆಕಾಶಭವನದ ಅಪ್ರಾಪ್ತ ಬಾಲಕನೊಬ್ಬನನ್ನು ಮಂಗಳೂರು ಕದ್ರಿ ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ,ಸ್ಕೂಟರ್ ಅನ್ನು ವಶಪಡಿಸಿಕೊಂಡಿ ದ್ದಾರೆ.

ಬಾಲಕನು ದ್ವಿಚಕ್ರ ವಾಹನ ಕಳವು ಮಾಡಿ ಮಾರಾಟ ಮಾಡಿ ಸುಲಭದಲ್ಲಿ ಹಣ ಗಳಿಸುವ ಉದ್ದೇಶದಿಂದ ದಿನಾಂಕ: 26-2-2019 ರಂದು ಕದ್ರಿ ಕಂಬಳದ ಕದ್ರಿ ಪಾದೆ ಎಂಬಲ್ಲಿನ ಒಂದು ಮನೆಯ ಅಂಗಳದಲ್ಲಿ ಕೀ ಸಮೇತಾ ಇರಿಸಿದ ಕೆಎ-19-ಇಡ್ಲ್ಯೂ – 0264 ನೇ ಸುಜುಕಿ ಎಕ್ಸಿಸ್ ಸ್ಕೂಟರ ನ್ನು ಕಳವು ಮಾಡಿಕೊಂಡು ಹೋಗಿದ್ದು, ಆತನು ಅದನ್ನು ಮಾರಾಟ ಮಾಡಲು ಮಂಗಳೂರಿಗೆ ತೆಗೆದುಕೊಂಡು ಬಂದ ಸಮಯ ದಿನಾಂಕ: 28-2-2019 ರಂದು ಯೆಯ್ಯಾಡಿ ಶರ್ಬತ್ ಕಟ್ಟೆ ಬಳಿ ಕದ್ರಿ ಪೊಲೀಸರು ಬಂಧಿಸಿದ್ದಾರೆ.

ಕಳವು ಮಾಡಿರುವ ಸುಜುಕಿ ಎಕ್ಸಿಸ್ ನ ಅಂದಾಜು ಮೌಲ್ಯ ರೂ: 44,000 ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ಕೇಂದ್ರ ವಿಭಾಗದ ಎಸಿಪಿ ಬಾಸ್ಕರ ವಕ್ಕಲಿಗ ಅರವರ ನಿರ್ದೇಶನದಂತೆ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ನಿರೀಕ್ಷಕರಾದ ಮಾರುತಿ ಜಿ ನಾಯಕ ಮತ್ತು ಸಿಬ್ಬಂದಿಗಳಾದ ವೆಂಕಟೇಶ್, ಜಯಾನಂದ, ಉಮೇಶ್ ಕೊಟ್ಟಾರಿ, ಗಿರೀಶ್ ಜೋಗಿ, ಪ್ರಶಾಂತ್, ಗಂಗಾಧರ, ರಾಘವೇಂದ್ರ, ಸುರೇಂದ್ರ, ಆನಂದ ರವರು ಬಾಗವಹಿಸಿದ್ದರು.

Comments are closed.