ಕರಾವಳಿ

ಹರೀಶ್ ಶೇರಿಗಾರ್ ಅವರ “ENGLISH” ತುಳು ಸಿನಿಮಾ : ರಮಣೀಯ ಪರಿಸರಗಳಲ್ಲಿ ಭರದಿಂದ ಸಾಗುತ್ತಿದೆ ಚಿತ್ರೀಕರಣ

Pinterest LinkedIn Tumblr

ಮಂಗಳೂರು, ಜನವರಿ,29: ಅಕ್ಮೆ ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ತಯಾರಾಗುತ್ತಿರುವ ದುಬೈಯ ಖ್ಯಾತ ಉದ್ಯಮಿ ಹಾಗೂ ಕನ್ನಡ ಚಲನಚಿತ್ರ ನಿರ್ಮಾಪರಾದ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ನಿರ್ಮಿಸುತ್ತಿರುವ ಕೆ. ಸೂರಜ್ ಶೆಟ್ಟಿ ನಿರ್ದೇಶನದ “ಇಂಗ್ಲಿಷ್” ತುಳು ಸಿನಿಮಾದ ಚಿತ್ರೀಕರಣವು ನಗರದ ಸುತ್ತಮುತ್ತ ಭರದಿಂದ ಸಾಗುತ್ತಿದೆ.

ಮಾರ್ಚ್ – 22, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ಯಾನ ಮೊದಲಾದ ಕನ್ನಡ ಸಿನಿಮಾಗಳನ್ನು ನಿರ್ಮಿಸಿರುವ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಅವರು ತುಳು ಭಾಷೆಯಲ್ಲಿ ಮೊದಲ ಭಾರಿಗೆ ನಿರ್ಮಿಸುತ್ತಿರುವ ಇಂಗ್ಲೀಷ್ ತುಳು ಸಿನಿಮಾದ ಮಹೂರ್ತಸಮಾರಂಭ ಸೋಮವಾರ ಬೆಳಗ್ಗೆ ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಜರಗಿತು.

ಬಳಿಕ ಮಂಗಳೂರಿನ ಮಣ್ಣಗುಡ್ಡೆ ಸಮೀಪದ ಗಾಂಧೀನಗರದಲ್ಲಿರುವ ಉದ್ಯಮಿ ಶ್ರೀನಿವಾಸ್ ಶೇರಿಗಾರ್ ಹಾಗೂ ಶ್ರೀಮತಿ ಆಶಾ ಶೇರಿಗಾರ್ ದಂಪತಿಗಳ ಪುತ್ರರಾದ ಅಕ್ಷಯ ಶೇರಿಗಾರ್ ಹಾಗೂ ಶಮಂತ್ ಶೇರಿಗಾರ್  ಮಾಲಕತ್ವದ “ಅಜಂತಾ ಕೆಫೆ”ಯಲ್ಲಿ ಮೊದಲ ಹಂತದ ಚಿತ್ರೀಕರಣ ಪ್ರಾರಂಭಗೊಂಡಿದ್ದು, ಇದೀಗ ಮಂಗಳೂರಿನ ಸುತ್ತಮುತ್ತ ಹಾಗೂ ತಣೀರುಬಾವಿ ಪರಿಸರದ ರಮಣೀಯ ಸ್ಥಳಗಳಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಪ್ರಮುಖ ಪಾತ್ರದಲ್ಲಿ ಖ್ಯಾತ ನಟ ಅನಂತ್ ನಾಗ್ :

ಇಂಗ್ಲಿಷ್ ಸಿನಿಮಾದಲ್ಲಿ ಖ್ಯಾತ ನಟ ಅನಂತನಾಗ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಿನಿಮಾಕ್ಕೆ ದ.ಕ.ಜಿಲ್ಲೆ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ.

ಸಿನಿಮಾಕ್ಕೆ ಕೃಷ್ಣ ಸಾರಥಿ ಛಾಯಾಗ್ರಹಣ ಮಾಡಲಿದ್ದಾರೆ. ಸಂಕಲನ: ಮನು ಶೇಡ್‌ಗಾರ್, ಸಂಗೀತ: ಮಣಿಕಾಂತ್ ಕದ್ರಿ, ಸಾಹಿತ್ಯ ಶಶಿರಾಜ್ ಕಾವೂರು, ಅರ್ಜುನ್ ಲೂಯಿಸ್, ಡಿಸೈನ್ ದೇವಿ ರೈ, ಸಿನಿಮಾಕ್ಕೆ ಕತೆ, ಚಿತ್ರಕತೆ, ಸಂಭಾಷಣೆ , ತಾರಾಗಣದಲ್ಲಿ ಪೃಥ್ವಿ ಅಂಬರ್, ನವ್ಯ ಪೂಜಾರಿ, ನವೀನ್‌ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ ವಾಮಂಜೂರು, ವಿಸ್ಮಯ ನಾಯಕ್, ದೀಪಕ್ ರೈ ಪಾಣಾಜೆ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನ ಬೈಲೂರು, ರವಿರಾಮ ಕುಂಜ ಮೊದಲಾದವರು ಇದ್ದಾರೆ.

ಇಂಗ್ಲಿಷ್ ಸಿನಿಮಾದ ಕಥಾ ಸಾರಾಂಶ :

ಹೀರೋ ಮಾಲ್ ಒಂದರಲ್ಲಿ ಗೊಂಬೆ ವೇಷ ಹಾಕಿ ಕುಣಿಯುವ ಕೆಲಸ ಮಾಡುತ್ತಿರುತ್ತಾನೆ. ಅಲ್ಲಿಗೆ ಹೀರೋಯಿನ್ ತನ್ನ ಗೆಳತಿಯ ಜೊತೆ ಬರುತ್ತಿರುತ್ತಾಳೆ. ಹೀರೋಗೆ ಹೀರೋಯಿನ್ ಅನ್ನು ಕಂಡು ಇಷ್ಟವಾಗುತ್ತದೆ. ಒಂದು ದಿನ ಹೀರೋ ಹೀರೋಯಿನ್ ಬಳಿ ತನ್ನ ಪ್ರೀತಿ ವಿಷಯ ತಿಳಿಸುತ್ತಾನೆ. ಹೀರೋಹಿನ್ ಹೀರೋಗೆ ಇಂಗ್ಲಿಷ್ ಬರುವುದಿಲ್ಲವೆಂದು ತಾನು ಮದುವೆ ಆದರೆ ಇಂಗ್ಲಿಷ್ ಗೊತ್ತಿರುವವನನ್ನು ಮಾತ್ರ ಆಗುವುದೆಂದು ನಾಯಕನನ್ನು ನಿರಾಕರಿಸುತ್ತಾಳೆ. ಅಂದಿನಿಂದ ಹೀರೋ ತನ್ನ ಫ್ರೆಂಡ್ಸ್ ಜೊತೆ ಸೇರಿ ಇಂಗ್ಲಿಷ್ ಕಲಿಯಲು ಶುರು ಮಾಡುತ್ತಾನೆ. ಹೀರೋ ಕಷ್ಟಪಟ್ಟು ಇಂಗ್ಲಿಷ್ ಕಲಿಯುವುದನ್ನು ನೋಡಿ ಹೀರೋಹಿನ್‌ಗೆ ಹೀರೋನ ಮೇಲೆ ಇಷ್ಟವಾಗುತ್ತದೆ. ಇಬ್ಬರ ನಡುವೆ ಫ್ರೆಂಡ್‌ಶಿಪ್ ಶುರುವಾಗುತ್ತದೆ. ನಂತರದಲ್ಲಿ ಫ್ರೆಂಡ್‌ಶಿಪ್ ಪ್ರೀತಿಯಲ್ಲಿ ಬದಲಾಗುತ್ತದೆ. ಹೀರೋಹಿನ್ ತನ್ನ ಪ್ರೀತಿಯನ್ನು ಮನೆಯವರಲ್ಲಿ ತಿಳಿಸುತ್ತಾರೆ. ಆದರೆ ಮನೆಯವರು ಹೀರೋನನ್ನು ಒಪ್ಪಿಕೊಳ್ಳುವುದಿಲ್ಲ. ಕೊನೆಗೆ ಹೀರೋ ತನ್ನಂತೆಯೇ ಇತರರಿಗೂ ಇಂಗ್ಲಿಷ್ ಕಲಿಸಬೇಕು ಎನ್ನುವ ಉದ್ದೇಶದಿಂದ ಇಂಗ್ಲಿಷ್ ಸ್ಪೀಕಿಂಗ್ ಕ್ಲಾಸ್ ಅನ್ನು ಪ್ರಾರಂಭಿಸುತ್ತಾನೆ. ಹೀರೋಹಿನ್ ಮನೆಯವರಿಗೆ ಹೀರೋನ ಮೇಲೆ ಹೆಮ್ಮೆಯಾಗುತ್ತದೆ. ಇಬ್ಬರಿಗೂ ಮದುವೆ ಮಾಡಿಸುತ್ತಾರೆ.

__ಸತೀಶ್ ಕಾಪಿಕಾಡ್

Comments are closed.