ಕರಾವಳಿ

ಗಂಗೊಳ್ಳಿಯ ಮಹಾಕಾಳಿ ದೇವಸ್ಥಾನ ಜಾತ್ರೆ ಹಿನ್ನಲೆ ಮದ್ಯ ಮಾರಾಟ ನಿಷೇಧ

Pinterest LinkedIn Tumblr

ಉಡುಪಿ: ಜನವರಿ 29 ಮತ್ತು 30 ರಂದು ಗಂಗೊಳ್ಳಿಯಲ್ಲಿ ಮಹಾ ಕಾಳಿ ದೇವಸ್ಥಾನ ವಾರ್ಷಿಕ ಜಾತ್ರೆ ನಡೆಯಲಿರುವ ಸಂದರ್ಭದಲ್ಲಿ ಸಾಂಸ್ಕøತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಇರುವುದರಿಂದ ಹಾಗೂ ಈ ಹಿಂದೆ ಗಲಾಟೆಗಳಾಗಿರುವುದರಿಂದ ಈ ಸಮಯದಲ್ಲಿ ಬಾರ್ ಮತ್ತು ವೈನ್ ಶಾಪ್ಗಳು ಮುಚ್ಚುವಂತೆ ಆದೇಶಿಸಲಾಗಿದೆ.

ಮದ್ಯದಂಗಡಿಗಳು ತೆರೆದಿದ್ದಲ್ಲಿ ಮದ್ಯಪಾನಸಕ್ತರು ಮದ್ಯಪಾನ ಮಾಡಿ ಗಲಭೆ ಮಾಡುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಗಂಗೊಳ್ಳಿ ಪೊಲೀಸ್ ಠಾಣಾ ಸರಹದ್ದಿನ ಗಂಗೊಳ್ಳಿ, ತ್ರಾಸಿ, ಗುಜ್ಜಾಡಿ ಮತ್ತು ಹೊಸಾಡು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ & ರೆಸ್ಟೋರೆಂಟ್ ಮತ್ತು ವೈನ್ ಶಾಪ್ಗಳ ಮದ್ಯ ಮಾರಾಟವನ್ನು ಜನವರಿ 29 ರ ಬೆಳಿಗ್ಗೆ 9 ರಿಂದ 24 ಗಂಟೆಗಳ ಕಾಲ ಅಬಕಾರಿ ಸನ್ನದುಗಳನ್ನು ಮುಚ್ಚಲು ಆದೇಶಿಸಿ, ಗಂಗೊಳ್ಳಿ, ತ್ರಾಸಿ, ಗುಜ್ಜಾಡಿ ಮತ್ತು ಹೊಸಾಡು ಗ್ರಾಮದ ವ್ಯಾಪ್ತಿಯಲ್ಲಿ ಒಣ ದಿನ ಎಂದು ಘೋಷಿಸಿ, ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿರುತ್ತಾರೆ.

Comments are closed.