ಪ್ರಮುಖ ವರದಿಗಳು

ಒಡಿಶಾ ಸಿಎಂ ಸಹೋದರಿ ಗೀತಾ ಮೆಹ್ತಾ ಪದ್ಮಶ್ರೀ ಪ್ರಶಸ್ತಿ ನಿರಾಕರಿಸಿದ್ದೇಕೆ ಗೊತ್ತಾ?

Pinterest LinkedIn Tumblr

ನವದೆಹಲಿ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್​ ಸೋದರಿ ಗೀತಾ ಮೆಹ್ತಾ ಅವರಿಗೆ ಗಣರಾಜ್ಯೋತ್ಸವದ ಹಿಂದಿನ ದಿನವಾದ ಶುಕ್ರವಾರ ಕೇಂದ್ರ ಸರ್ಕಾರ ಘೋಷಿಸಿದ್ದು ಓ ಪದ್ಮಶ್ರೀ ಪ್ರಶಸ್ತಿ ಗೌರವವನ್ನು ಸ್ವೀಕರಿಸಲು ಮೆಹ್ತಾ ನಿರಾಕರಿಸಿದ್ದಾರೆ. ಗೀತಾ ಮೆಹ್ತಾ ಅವರಿಗೆ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ಘೋಷಿಸಲಾಗಿತ್ತು.

ಈ ಕುರಿತು ನ್ಯೂಯಾರ್ಕ್‌ನಿಂದಲೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪ್ರಶಸ್ತಿಯನ್ನು ಸ್ವೀಕರಿಸಲು ಇದು ಸರಿಯಾದ ಸಮಯವಲ್ಲವಾಗಿರುವುದರಿಂದ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿರುವುದಾಗಿ ಸ್ಥಳೀಯ ವೆಬ್‌ಸೈಟ್‌ವೊಂದು ವರದಿ ಮಾಡಿದೆ.

ಭಾರತ ಸರ್ಕಾರ ನನ್ನನ್ನು ಪ್ರತಿಷ್ಠಿತ ಪ್ರಶಸ್ತಿಗೆ ಅರ್ಹ ಎಂದು ಭಾವಿಸಿ ಪ್ರಶಸ್ತಿಯನ್ನು ಘೋಷಿಸಿರುವುದನ್ನು ನಾನು ಗೌರವಿಸುತ್ತೇನೆ. ಆದರೆ, ದೊಡ್ಡ ವಿಷಾದವೆಂದರೆ ಸಾರ್ವತ್ರಿಕ ಚುನಾವಣೆ ಹೊಸ್ತಿಲಲ್ಲಿ ಈ ಪ್ರಶಸ್ತಿ ದೊರಕಿರುವುದರಿಂದ ನಾನು ಇದನ್ನು ತಿರಸ್ಕರಿಸಬೇಕು ಎಂದು ಭಾವಿಸುತ್ತೇನೆ ಮತ್ತು ಈ ಪ್ರಶಸ್ತಿಯನ್ನು ಸ್ವೀಕರಿಸಲು ಈ ಸಮಯ ಸೂಕ್ತವಲ್ಲ. ಮುಂದಿನ ದಿನಗಳಲ್ಲಿ ಇದು ಸರ್ಕಾರ ಮತ್ತು ನನ್ನನ್ನು ಮುಜುಗರಕ್ಕೀಡುಮಾಡಬಹುದು. ಹೀಗಾಗಿ ನಾನು ಈ ಗೌರವವನ್ನು ನಿರಾಕರಿಸುತ್ತಿದ್ದೇನೆ. ಇದಕ್ಕಾಗಿ ವಿಷಾದಿಸುತ್ತೇನೆ ಎಂದು ಗೀತಾ ಮೆಹ್ತಾ ತಿಳಿಸಿದ್ದಾರೆ.

Comments are closed.