ಕರಾವಳಿ

ಹಿರಿಯ ವಿದ್ವಾಂಸ ಪ್ರಸನ್ನ ಹೆಗ್ಗೊಡು ಸಹಿತಾ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಸಂದೇಶ ಪ್ರಶಸ್ತಿ’ಪ್ರದಾನ

Pinterest LinkedIn Tumblr

ಮಂಗಳೂರು, ಜನವರಿ. 23: ಕರ್ನಾಟಕ ಪ್ರಾಂತೀಯ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯ ಆಶ್ರಯದಲ್ಲಿರುವ ಸಂದೇಶ ಸಂಸ್ಕೃತಿ ಹಾಗೂ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಸಂದೇಶ ಪ್ರಶಸ್ತಿ’ಪ್ರದಾನ ಸಮಾರಂಭ ಮಂಗಳವಾರ ನಂತೂರಿನ ಸಂದೇಶ ಪ್ರತಿಷ್ಠಾನ ಆವರಣದಲ್ಲಿ ಜರಗಿತು.

ಬಳ್ಳಾರಿ ಧರ್ಮಪ್ರಾಂತದ ಧರ್ಮಾಧ್ಯಕ್ಷರು ಹಾಗೂ ಸಂದೇಶ ಪ್ರತಿಷ್ಠಾನದ ಅಧ್ಯಕ್ಷ ಅ.ವಂ.ಹೆನ್ರಿ ಡಿಸೋಜ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಧರ್ಮಾಧ್ಯಕ್ಷರಾದ ಅ.ವಂ.ಪೀಟರ್ ಪಾವ್ಲ್ ಸಲ್ಡಾನ್ಹಾ ಮುಖ್ಯ ಅತಿಥಿಗಳಾಗಿದ್ದರು.

ಸಂದೇಶ ಪ್ರಶಸ್ತಿ ಪುರಸ್ಕೃತರು : ‘ಸಂದೇಶ ಪ್ರಶಸ್ತಿ’ಪ್ರದಾನ ಸಮಾರಂಭದಲ್ಲಿ ಪ್ರಸನ್ನ ಹೆಗ್ಗೊಡು- ಸಂದೇಶ ಸಾಹಿತ್ಯ ಪ್ರಶಸ್ತಿ, ಮಂಜಮ್ಮ ಜೋಗತಿ- ಸಂದೇಶ ಕಲಾ ಪ್ರಶಸ್ತಿ, ಬಿ.ಎಂ.ಹನೀಫ್ – ಸಂದೇಶ ಮಾಧ್ಯಮ ಪ್ರಶಸ್ತಿ, ಬಿ.ಎಂ.ರೋಹಿಣಿ- ಸಂದೇಶ ಶಿಕ್ಷಣ ಪ್ರಶಸ್ತಿ, ವಂ.ಬೆನ್ ಬ್ರಿಟ್ಟೊ ಪ್ರಭು -ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ, ವಂ.ಟೆಜಿ ಥೋಮಸ್ ನಿರ್ದೇಶಕರು ಸ್ನೇಹಸದನ್ ಹಾಗೂ ಭ.ಜಾನ್ಸಿ ನಿರ್ದೇಶಕರು ಜೀವದಾನ್ ಸಂಸ್ಥೆ- ಸಂದೇಶ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಂದೇಶ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ನಾ.ಡಿಸೋಜ ಪ್ರಸ್ತಾವಿಸಿದರು. ಸಂದೇಶ ಪ್ರತಿಷ್ಠಾನದ ವಿಶ್ವಸ್ತರಾದ ರೊಯ್ ಕ್ಯಾಸ್ಟಲಿನೋ, ಕಾನ್ಸೆಪ್ಟಾ ಆಳ್ವ, ಚಂದ್ರಕಲಾ ನಂದಾವರ ಮತ್ತಿತರರು ಉಪಸ್ಥಿತರಿದ್ದರು. ಸಂದೇಶ ಪ್ರತಿಷ್ಠಾನದ ನಿರ್ದೇಶಕ ವಂ.ನೆಲ್ಸನ್ ಪ್ರಕಾಶ್ ದಲ್ಮೇದ ಸ್ವಾಗತಿಸಿದರು. ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments are closed.