ಕರಾವಳಿ

ಯು.ಎ.ಇ ಕರೆನ್ಸಿ ದಿರಮ್ ನೋಟುಗಳನ್ನು ತೋರಿಸಿ ಜನರನ್ನು ವಂಚಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Pinterest LinkedIn Tumblr

ಮಂಗಳೂರು : ಯು.ಎ.ಇ. ರಾಷ್ಟ್ರದ ಕರೆನ್ಸಿಯಾದ ದಿರಮ್ ನೋಟುಗಳನ್ನು ತೋರಿಸಿ ಜನರನ್ನು ವಂಚನೆಗೆ ಯತ್ನಿಸಿದ ಆರೋಪದಲ್ಲಿ ಇಬ್ಬರನ್ನು ಮಂಗಳೂರು ಉತ್ತರ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಪಶ್ಚಿಮ ಬಂಗಾಳದ ಹವ್ರಾ ಜಿಲ್ಲೆಯ ಮೋರಿಗ್ರಾಮ್ ನಿವಾಸಿ ಮುಹಮ್ಮದ್ ಸಲೀಂ (33)ಹಾಗೂ ಪಶ್ಚಿಮ ಬಂಗಾಳದ ಹವ್ರಾ ಜಿಲ್ಲೆಯ ಮೂಡಿ ಗ್ರಾಮ ನಿವಾಸಿ ನಸ್ರುಲ್ ಇಸ್ಲಾಂ (56) ಎಂದು ಗುರುತಿಸಲಾಗಿದೆ.

ಜ.16ರಂದು ಇಬ್ರಾಹೀಂ ಅಲೀಲ್ ಎಂಬವರಿಗೆ ಯುಎಇ ದಿರಮ್ ನೋಟುಗಳನ್ನು ನೀಡುವುದಾಗಿ ನಂಬಿಸಿ ಆರೋಪಿಗಳು ನಗರದ ರಾಮಕಾಂತಿ ಚಿತ್ರಮಂದಿರ ಬಳಿ ಬರಹೇಳಿದ್ದರು. ನಿಗದಿತ ಸ್ಥಳಕ್ಕಾಗಮಿಸಿದ ಆರೋಪಿಗಳು, ‘ಸುಮಾರು 7 ಲಕ್ಷ ರೂ. ನೋಟುಗಳು ಇವೆ’ ಎಂದು ಹಳೇ ದಿನ ಪತ್ರಿಕೆಗಳ ಬಂಡಲ್‌ಗಳಿಗೆ ಮೇಲ್ಭಾಗದಲ್ಲಿ ಏಳು ದಿರಮ್ ನೋಟುಗಳನ್ನು ಸುತ್ತಿ ತೋರಿಸಿ ವಂಚಿಸಲು ಮುಂದಾಗಿದ್ದರು. ಈ ವೇಳೆ ಇಬ್ರಾಹೀಂ ಖಲೀಲ್ ಸಂಶಯಗೊಂಡು ವಿಚಾರಿಸಿದಾಗ, ಆರೋಪಿಗಳು ಸ್ಥಳದಿಂದ ಸೊತ್ತು ಸಮೇತ ಪರಾರಿಯಾಗಿದ್ದರು. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಂಗಳೂರು ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಭಾಸ್ಕರ್ ಒಕ್ಕಲಿಗ ಮಾರ್ಗದರ್ಶನದಲ್ಲಿ ನಡೆದ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಪಿಎಸ್ಐ ಕಬ್ಬಳ ರಾಜ್ ಮತ್ತು ಸಿಬ್ಬಂದಿಗಳಾದ ಶ್ರೀ ಶೀನಪ್ಪ ಪೂಜಾರಿ, ಮಣಿ,ಆಶೀತ್ ಭಾಗವಹಿಸಿರುತ್ತಾರೆ.

Comments are closed.