ಪ್ರಮುಖ ವರದಿಗಳು

ಸಾಮಾನ್ಯರಂತೆ ಜಾಕೆಟ್ ಖರೀದಿಸಿ, ರುಪೇ ಕಾರ್ಡ್ ನ್ನು ನೀಡಿ ವಹಿವಾಟಿ ನಡೆಸಿದ ಪ್ರಧಾನಿ ಮೋದಿ

Pinterest LinkedIn Tumblr

ಸ್ವದೇಶಿ, ಖಾದಿ ಉತ್ಪನ್ನಗಳನ್ನು, ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಪ್ರಧಾನಿ ನರೇಂದ್ರ ಮೋದಿ ಕೇವಲ ಅದನ್ನು ಮಾತಿನಲ್ಲಿ ಹೇಳದೇ ಕೃತಿಯಲ್ಲೂ ಆಚರಣೆ ಮಾಡಿ ತೋರಿದ್ದಾರೆ.

ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ನಡೆಯುತ್ತಿದ್ದ ಶಾಪಿಂಗ್ ಫೆಸ್ಟಿವಲ್ ಗೂ ಭೇಟಿ ನೀಡಿದ್ದರು. ಈ ವೇಳೆ ಖಾದಿ ಹಾಗೂ ಗ್ರಾಮೋದ್ಯೋಗ ಕೈಗಾರಿಕಾ ಮಂಡಳಿಯ ಸ್ಟಾಲ್ ನಲ್ಲಿ ಪ್ರಧಾನಿ ಸಾಮಾನ್ಯರಂತೆ ಜಾಕೆಟ್ ಖರೀದಿಸಿದರು ಅಷ್ಟೇ ಅಲ್ಲದೇ ರುಪೇ ಕಾರ್ಡ್ ನ್ನು ನೀಡಿ ವಹಿವಾಟನ್ನು ಪೂರ್ಣಗೊಳಿಸಿದ್ದಾರೆ.

ಪ್ರಧಾನಿ ಮೋದಿ ಅವರ ನಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಪ್ರಧಾನಿ ಜಾಕೆಟ್ ಖರೀದಿಸಿ ರುಪೇ ಕಾರ್ಡ್ ನಲ್ಲಿ ವಹಿವಾಟು ನಡೆಸಿರುವ ವಿಡಿಯೋ ವೈರಲ್ ಆಗಿದೆ.

Comments are closed.