ಕರಾವಳಿ

‘ಅಡ್ಯಾರ್ ಹಿಲ್ಸ್’ ಹೋಮ್ ಸ್ಟೇ ಕಟ್ಟಡದಲ್ಲಿ ಜೂಜಾಟ ಆಡುತ್ತಿದ್ದ 21 ಮಂದಿ ಸೆರೆ – ನಗದು ಸಹಿತಾ 86 ಲಕ್ಷ ಮೌಲ್ಯದ ಸೊತ್ತು ವಶ

Pinterest LinkedIn Tumblr

ಮಂಗಳೂರು, ಜನವರಿ.15: ನಗರದ ಹೊರವಲಯದ ಅಡ್ಯಾರ್ ಗ್ರಾಮದ ಸುರೇಶ್ ಶೆಟ್ಟಿ ಎಂಬವರು ಮಾಲಕತ್ವದ ‘ಅಡ್ಯಾರ್ ಹಿಲ್ಸ್’ ಹೋಮ್ ಸ್ಟೇ ಕಟ್ಟಡದಲ್ಲಿ ಜೂಜಾಟ (ಅಂದರ್ ಬಾಹರ್) ಆಡುತ್ತಿದ್ದ ಆರೋಪದಲ್ಲಿ 21 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೆಲ್ವಿನ್‌ವಿಶ್ವಾಸ್ ಡಿಸೋಜ, ಶರತ್‌ಕುಮಾರ್, ಗುರುಪ್ರಸಾದ್, ರಾಜ ಪೂಜಾರಿ, ಮುಹಮ್ಮದ್ ಹನೀಫ್, ಶಿವರಾಜ್, ಅನ್ವರ್, ಆದರ್ಶ, ರಾಧಾಕೃಷ್ಣ ನಾಯರ್, ಅರ್ವಿನ್ ಡಿಸೋಜ, ಮಹಾದೇವಪ್ಪ, ಕುಮಾರನಾಥ ಶೆಟ್ಟಿ, ಆಲ್ವಿನ್ ರಿಚಾರ್ಡ್, ಗಣೇಶ್ ವಿ.ಎಸ್., ಪ್ರೀತಂ ಪ್ರಶಾಂತ್, ಎ.ಬಿ. ಬಶೀರ್, ಸಾವನ್, ನಿತಿನ್ ಡಿಸೋಜ, ಆಬೀದ್ ಹುಸೈನ್, ಡೆಂಝಿಲ್ ವಿಕ್ಸನ್ ಡಿಸೋಜ, ಮುಹಮ್ಮದ್ ಹನೀಫ್ ಬಂಧಿತ ಆರೋಪಿಗಳು.

ದಿನಾಂಕ 14-01-2019 ರಂದು ಮಂಗಳೂರು ನಗರದ ಅಡ್ಯಾರ್ ಗ್ರಾಮದ ಸುರೇಶ್ ಶೆಟ್ಟಿ ಎಂಬವರು ಮಾಲಿಕತ್ವದ ಅಡ್ಯಾರ್ ಹಿಲ್ಸ್ ಎಂಬ ಹೋಮ್ ಸ್ಟೇ ಕಟ್ಟಡದಲ್ಲಿ ಅಂದರ್ ಬಾಹರ್ ಎಂಬ ಜೂಜು ಆಟ ಆಡುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಸಿಸಿಬಿ ಪಿಎಸ್ಐ ಕಬ್ಬಲ್ ರಾಜ್ ಮತ್ತು ಅವರ ತಂಡ ಸ್ಥಳಕ್ಕೆ ದಾಳಿ ನಡೆಸಿ ಜುಗಾರಿ ಆಟ ಅಡುತ್ತಿದ್ದ ಆರೋಪಿಗಳನ್ನು ಬಂಧಿಸಿ, ಆರೋಪಿಗಳ ವಶದಿಂದ ಜೂಜಾಟಕ್ಕೆ ಬಳಸಿದ ನಗದು 18,37,000 ರೂ. ಹಾಗೂ 66,75,000 ರೂ. ಮೌಲ್ಯದ ಎಂಟು ಕಾರು ಮತ್ತು ಆಟೊರಿಕ್ಷಾ ಹಾಗೂ 1,35,700 ರೂ. ಮೌಲ್ಯದ 24 ಮೊಬೈಲ್ ಸೆಟ್‌ಗಳನ್ನು ಸ್ವಾಧಿನಪಡಿಸಿಕೊಂಡಿದ್ದಾರೆ. ಸ್ವಾಧಿನಪಡಿಸಿಕೊಂಡ ಸೊತ್ತುಗಳ ಮೌಲ್ಯ 86,47,700 ರೂ. ಎಂದು ಅಂದಾಜಿಸಲಾಗಿದೆ.

ದಾಳಿ ವೇಳೆ ಹೊಮ್ ಸ್ಟೇ ಮಾಲಕ ಸುರೇಶ್ ಶೆಟ್ಟಿ ಪರಾರಿಯಾಗಿರುತ್ತಾರೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಆರೋಫಿಗಳನ್ನು ಹಾಗೂ ಸೊತ್ತುಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.