ಕರಾವಳಿ

ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರ ‘ರಜತ ಸಂಭ್ರಮ’ಸಮಾರಂಭಕ್ಕೆ ಸರ್ವ ಸಿದ್ಧತೆ : ಐಕಳಬಾವ ದೇವಿಪ್ರಸಾದ್ ಶೆಟ್ಟಿ

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಅವರುಜನವರಿ 19ರಂದು 25 ವರ್ಷ ಪೂರೈಸುತ್ತಿರುವ ಪರ್ವಕಾಲದಲ್ಲಿ ಸಹಕಾರಿ ಕ್ಷೇತ್ರ ಇದೆ. ಸತತ 25ವರ್ಷ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು ದೇಶದಲ್ಲೇ ಪ್ರಥಮವಾಗಿದೆ.

ಈ ಹಿನ್ನೆಲೆಯಲ್ಲಿ ಸಹಕಾರಿ ಕ್ಷೇತ್ರಕ್ಕೆ ಅಪ್ರತಿಮ ಕೊಡುಗೆ ನೀಡಿರುವ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರ ಅಧ್ಯಕ್ಷತೆಯ ರಜತ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಸಹಕಾರಿ ಸಂಸ್ಥೆಗಳು ನಿರ್ಧರಿಸಿದ್ದು, ಈ ರಜತ ಸಂಭ್ರಮದ ಅದ್ದೂರಿಯ ಕಾರ್ಯಕ್ರಮ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಜನವರಿ 19ರಂದುನಡೆಯಲಿದೆ.

ಈ ಸಮಾರಂಭ ಒಂದು ಐತಿಹಾಸಿಕ ದಾಖಲೆಯನ್ನು ನಿರ್ಮಿಸಲಿದೆ. ಸುಮಾರು 2 ಲಕ್ಷ ಜನರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರ ‘ರಜತ ಸಂಭ್ರಮ’ಸಮಾರಂಭದ ಅಭಿನಂದನಾ ಸಮಿತಿಯ‌ಅಧ್ಯಕ್ಷರಾದ ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಬೆಳಪು ಇವರು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ|ಎಂ.ಎನ್.ರಾಜೇಂದ್ರ ಕುಮಾರ್ ಅವರ’ರಜತ ಸಂಭ್ರಮ’ ಹಾಗೂ ನವೋದಯ ಸ್ವ-ಸಹಾಯ ಸಂಘಗಳ ‘ವಿಂಶತಿ’ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ಅವರು ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ.ವೀರೇಂದ್ರ ಹೆಗ್ಗಡೆಯವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅಭಿವಂದನಾ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ ಎಂದು ಹೇಳಿದರು.

ಬೆಳಿಗ್ಗೆ ನಡೆಯುವ ಅದ್ದೂರಿಯ ಮೆರವಣಿಗೆಯ ಉದ್ಘಾಟನೆಯನ್ನು ಕೇಂದ್ರ ಸರಕಾರದ ಮಂತ್ರಿಗಳಾದ ಶ್ರೀ ಡಿ.ವಿ.ಸದಾನಂದ ಗೌಡ ಅವರು ಉದ್ಘಾಟಿಸಲಿರುವರು. ಆಕರ ಗ್ರ್ರಂಥವನ್ನು ರಾಜ್ಯದ ಉಪಮುಖ್ಯಮಂತ್ರಿಗಳಾದ ಡಾ| ಜಿ.ಪರಮೇಶ್ವರ್ ಅವರು ಬಿಡುಗಡೆ ಮಾಡಲಿರುವರು. ವಿಂಶತಿ ಸ್ಮರಣ ಸಂಚಿಕೆಯನ್ನು ಜಲಸಂಪನ್ಮೂಲ ಸಚಿವರಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ಬಿಡುಗಡೆ ಮಾಡಲಿರುವರು. ಸಹಕಾರ ಮ್ಯೂಸಿಯಂನ್ನು ಸಹಕಾರ ಸಚಿವರಾದ ಶ್ರೀ ಬಂಡೆಪ್ಪ ಕಾಶಂಪೂರ್ ಅವರು ಹಾಗೂ ಸಹಕಾರ ಗ್ರ್ರಂಥಾಲಯವನ್ನು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಂ.ವೀರಪ್ಪ ಮೊಲಿಯವರು ಉದ್ಘಾಟಿಸಲಿರುವರು.’ಬಡವರ ಬಂಧು’ ಫಲಾನುಭವಿಗಳಿಗೆ ಸಾಲ ಪತ್ರದ ವಿತರಣೆಯನ್ನು ಸನ್ಮಾನ್ಯ ಶ್ರೀ ಯು.ಟಿ.ಖಾದರ್, ಮಾನ್ಯ ನಗರಾಭಿವೃದ್ಧಿ ಸಚಿವರು, ಕರ್ನಾಟಕ ಸರಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಇವರು ವಿತರಿಸಲಿರುವರು ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ ಕೆ.ಪ್ರತಾಪ್‌ಚಂದ್ರ ಶೆಟ್ಟಿ, ಮಾನ್ಯ ವಿಧಾನ ಪರಿಷತ್ ಸಭಾಪತಿಗಳು, ಕರ್ನಾಟಕ ವಿಧಾನ ಪರಿಷತ್, ಬೆಂಗಳೂರು, ಸನ್ಮಾನ್ಯ ಡಾ| ಜಯಮಾಲ, ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು,ಕರ್ನಾಟಕ ಸರಕಾರ, ಸನ್ಮಾನ್ಯ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಮಾನ್ಯ ವಿರೋಧ ಪಕ್ಷದ ನಾಯಕರು ಹಾಗೂಶಾಸಕರು, ಕರ್ನಾಟಕ ವಿಧಾನ ಪರಿಷತ್,ಬೆಂಗಳೂರು, ಸನ್ಮಾನ್ಯ ಶ್ರೀ ಆಸ್ಕರ್ ಫೆರ್ನಾಂಡಿಸ್, ಮಾನ್ಯ ಸಂಸದರು ಹಾಗೂ ಮಾಜಿ ಕೇಂದ್ರ ಸಚಿವರು, ನವದೆಹಲಿ, ಸನ್ಮಾನ್ಯ ಶ್ರೀ ನಳಿನ್ ಕುಮಾರ್ ಕಟೀಲ್, ಮಾನ್ಯ ಲೋಕಸಭಾ ಸದಸ್ಯರು, ದಕ್ಷಿಣ ಕನ್ನಡ ಜಿಲ್ಲೆ,ಮಂಗಳೂರು, ಸನ್ಮಾನ್ಯ ಶೋಭಾ ಕರಂದ್ಲಾಜೆ, ಮಾನ್ಯ ಲೋಕಸಭಾ ಸದಸ್ಯರು, ಉಡುಪಿ ಜಿಲ್ಲೆ, ಉಡುಪಿ, ಸನ್ಮಾನ್ಯ ಶ್ರೀ ಬಿ.ವೈ. ರಾಘವೇಂದ್ರ, ಮಾನ್ಯ ಲೋಕಸಭಾ ಸದಸ್ಯರು, ಶಿವಮೊಗ್ಗ, ಸನ್ಮಾನ್ಯ ಶ್ರೀ ವಿ. ಸುನಿಲ್‌ಕುಮಾರ್, ಮಾನ್ಯ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಶಾಸಕರು, ಕಾರ್ಕಳ ವಿಧಾನಸಭಾ ಕ್ಷೇತ್ರ, ಕಾರ್ಕಳ, ಸನ್ಮಾನ್ಯ ಶ್ರೀ ಮೋಹನ್ ಆಳ್ವ, ಮಾನ್ಯ ಅಧ್ಯಕ್ಷರು, ಆಳ್ವಾಸ್ ವಿದ್ಯಾ ಸಂಸ್ಥೆ, ಮೂಡಬಿದ್ರೆ, ಸನ್ಮಾನ್ಯ ಶ್ರೀ ಎಸ್.ಎಲ್. ಧರ್ಮೇಗೌಡ, ಮಾನ್ಯ ಉಪ ಸಭಾಪತಿಗಳು, ವಿಧಾನ ಪರಿಷತ್, ಕರ್ನಾಟಕ, ಸನ್ಮಾನ್ಯಶ್ರೀ ಐವನ್ ಡಿ’ಸೋಜಾ, ಮಾನ್ಯ ಸಂಸದೀಯ ಕಾರ್ಯದರ್ಶಿ, ಕರ್ನಾಟಕ ಸರಕಾರ ಹಾಗೂ ಶಾಸಕರು, ವಿಧಾನ ಪರಿಷತ್, ಬೆಂಗಳೂರು, ಸನ್ಮಾನ್ಯ ಶ್ರೀ ಕೆ.ಎನ್. ರಾಜಣ್ಣ, ಮಾನ್ಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ನಿ., ಬೆಂಗಳೂರು, ಸನ್ಮಾನ್ಯ ಶ್ರೀ ಕೆ. ಶ್ರೀನಿವಾಸ ಗೌಡ, ಮಾನ್ಯ ಶಾಸಕರು ಹಾಗೂ ಮಾಜಿ ಸಚಿವರು, ಕರ್ನಾಟಕ ಸರಕಾರ, ಸನ್ಮಾನ್ಯ ಶ್ರೀ ಮುರುಗೇಶ್ ನಿರಾಣಿ, ಮಾನ್ಯ ಮಾಜಿ ಸಚಿವರು, ಕರ್ನಾಟಕ ಸರಕಾರ, ಸನ್ಮಾನ್ಯ ಶ್ರೀ ಎಂ.ಕೆ. ಅಯ್ಯಪ್ಪ, ಭಾ. ಆ. ಸೇ., ಮಾನ್ಯ ಸಹಕಾರ ಸಂಘಗಳ ನಿಬಂಧಕರು, ಬೆಂಗಳೂರು, ಸನ್ಮಾನ್ಯ ಶ್ರೀ ಅಂಗಾರ ಎಸ್., ಮಾನ್ಯ ಶಾಸಕರು, ಸುಳ್ಯ ವಿಧಾನಸಭಾ ಕ್ಷೇತ್ರ, ಸುಳ್ಯ, ಸನ್ಮಾನ್ಯ ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಾನ್ಯ ಶಾಸಕರು, ಕುಂದಾಪುರ ವಿಧಾನ ಸಭಾ ಕ್ಷೇತ್ರ, ಸನ್ಮಾನ್ಯ ಶ್ರೀ ಕೆ. ರಘುಪತಿ ಭಟ್,ಮಾನ್ಯ ಶಾಸಕರು, ಉಡುಪಿ ವಿಧಾನಸಭಾ ಕ್ಷೇತ್ರ, ಉಡುಪಿ, ಸನ್ಮಾನ್ಯಶ್ರೀ ಸಂಜೀವ ಮಠಂದೂರು, ಮಾನ್ಯ ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ, ಪುತ್ತೂರು, ಸನ್ಮಾನ್ಯ ಶ್ರೀ ಡಿ. ವೇದವ್ಯಾಸ ಕಾಮತ್, ಮಾನ್ಯ ಶಾಸಕರು, ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ, ಸನ್ಮಾನ್ಯ ಶ್ರೀ ಉಮಾನಾಥ ಎ. ಕೋಟ್ಯಾನ್, ಮಾನ್ಯ ಶಾಸಕರು, ಮೂಡಬಿದ್ರೆ ವಿಧಾನಸಭಾ ಕ್ಷೇತ್ರ, ಮೂಡಬಿದ್ರೆ, ಸನ್ಮಾನ್ಯ ಶ್ರೀ ರಾಜೇಶ್ ನಾಯ್ಕ್ಕ್ ಯು., ಮಾನ್ಯ ಶಾಸಕರು, ಬಂಟ್ವಾಳ ವಿಧಾನ ಸಭಾ ಕ್ಷೇತ್ರ, ಸನ್ಮಾನ್ಯ ಶ್ರೀ ಲಾಲಾಜಿ ಆರ್. ಮೆಂಡನ್, ಮಾನ್ಯ ಶಾಸಕರು, ಕಾಪು ವಿಧಾನಸಭಾ ಕ್ಷೇತ್ರ, ಕಾಪು, ಸನ್ಮಾನ್ಯ ಶ್ರೀ ಬಿ.ಎಂ.ಸುಕುಮಾರ್ ಶೆಟ್ಟಿ, ಮಾನ್ಯ ಶಾಸಕರು, ಬೈಂದೂರು ವಿಧಾನ ಸಭಾ ಕ್ಷೇತ್ರ, ಸನ್ಮಾನ್ಯ ಶ್ರೀ ಹರೀಶ್ ಪೂಂಜ, ಮಾನ್ಯ ಶಾಸಕರು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ, ಬೆಳ್ತಂಗಡಿ, ಸನ್ಮಾನ್ಯ ಡಾ| ಭರತ್ ಶೆಟ್ಟಿ ವೈ., ಮಾನ್ಯ ಶಾಸಕರು, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ, ಸನ್ಮಾನ್ಯ ಶ್ರೀ ಬಿ.ಎಂ. ಫಾರೂಕ್, ಮಾನ್ಯ ಶಾಸಕರು, ವಿಧಾನ ಪರಿಷತ್, ಬೆಂಗಳೂರು, ಸನ್ಮಾನ್ಯ ಶ್ರೀ ಎಸ್.ಎಲ್. ಭೋಜೇಗೌಡ, ಮಾನ್ಯ ಶಾಸಕರು, ವಿಧಾನ ಪರಿಷತ್, ಬೆಂಗಳೂರು, ಸನ್ಮಾನ್ಯ ಶ್ರೀ ಹರೀಶ್ ಕುಮಾರ್, ಮಾನ್ಯ ಶಾಸಕರು, ವಿಧಾನ ಪರಿಷತ್, ಬೆಂಗಳೂರು, ಸನ್ಮಾನ್ಯ ಶ್ರೀಮತಿ ಮೀನಾಕ್ಷಿ ಶಾಂತಿಗೋಡು, ಮಾನ್ಯ ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು, ಸನ್ಮಾನ್ಯ ಶ್ರೀ ಆಯನೂರು ಮಂಜುನಾಥ, ಮಾನ್ಯ ಶಾಸಕರು, ವಿಧಾನ ಪರಿಷತ್, ಬೆಂಗಳೂರು, ಸನ್ಮಾನ್ಯ ಶ್ರೀ ಎನ್. ಗಂಗಣ್ಣ, ಮಾನ್ಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಸನ್ಮಾನ್ಯ ಶ್ರೀ ಭಾಸ್ಕರ ಕೆ., ಮಾನ್ಯ ಮಹಾಪೌರರು, ಮಂಗಳೂರು ಮಹಾನಗರ ಪಾಲಿಕೆ,ಮಂಗಳೂರು, ಸನ್ಮಾನ್ಯ ಶ್ರೀ ಸಸಿಕಾಂತ್ ಸೆಂಥಿಲ್, ಭಾ.ಆ.ಸೇ., ಮಾನ್ಯ ಜಿಲ್ಲಾಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲೆ, ಸನ್ಮಾನ್ಯ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಭಾ. ಆ. ಸೇ.,ಮಾನ್ಯ ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆ, ಸನ್ಮಾನ್ಯ ಶ್ರೀ ಟಿ. ಆರ್. ಸುರೇಶ್, ಭಾ.ಪೊ.ಸೇ., ಮಾನ್ಯ ಪೋಲಿಸ್ ಆಯುಕ್ತರು, ಮಂಗಳೂರು ನಗರ, ಸನ್ಮಾನ್ಯ ಶ್ರೀ ಎಸ್. ಆರ್. ಸತೀಶ್ಚಂದ್ರ, ಮಾನ್ಯ ಅಧ್ಯಕ್ಷರು, ಕ್ಯಾಂಪ್ಕೋ, ಮಂಗಳೂರು, ಸನ್ಮಾನ್ಯ ಶ್ರೀ ಕೊಂಕೋಡಿ ಪದ್ಮನಾಭ, ಮಾನ್ಯ ಹಿರಿಯ ಸಹಕಾರಿಗಳು ಹಾಗೂ ಮಾಜಿ ಅಧ್ಯಕ್ಷರು, ಕ್ಯಾಂಪ್ಕೋ ಮಂಗಳೂರು, ಸನ್ಮಾನ್ಯ ಶ್ರೀ ಕಿಶೋರ್ ಆಳ್ವ, ಮಾನ್ಯ ಜಂಟಿ ಅಧ್ಯಕ್ಷರು, ಯು.ಪಿ.ಸಿ.ಎಲ್., ಅದಾನಿ, ಉಡುಪಿ, ಭಾಗವಹಿಸಲಿರುವರು. ಅಲ್ಲದೆ ಮಾಜಿ ಸಂಸದರು, ಮಾಜಿ ಸಚಿವರು ಹಾಗೂ ಮಾಜಿ ಶಾಸಕರುಗಳು ಈ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿರುವರು.

ರಾಜ್ಯದ ದೊರೆಯಿಂದ ಸಹಕಾರಿ ಭೂಷಣ ಪ್ರಶಸ್ತಿ ಪ್ರದಾನ:

ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಹಕಾರಿ ತತ್ವದಡಿ ಈ ಮಟ್ಟದಲ್ಲಿ ಸಹಕಾರಿ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಿದ ಡಾ| ಎಂ.ಎನ್. ರಾಜೇಂದ್ರ ಕುಮಾರ್‌ರವರಿಗೆ ಸರಿಸಾಟಿ ಇನ್ನೊಬ್ಬರಿಲ್ಲ. ಸಹಕಾರಿರಂಗದಲ್ಲಿ ಸಾವಿರಾರು ಯುವಕರನ್ನು ಬೆಳೆಸಿದವರು. ಕ್ರೀಡೆ, ವಿದ್ಯೆ, ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಸಹಕಾರದ ಹಸ್ತ ಚಾಚಿದವರು. ಕರ್ನಾಟಕದ ಪ್ರತಿಷ್ಠಿತ ಅಪೆಕ್ಸ್ಸ್ ಬ್ಯಾಂಕಿನ ಅಧ್ಯಕ್ಷರಾಗಿ, ಪ್ರಸ್ತುತ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಅಧ್ಯಕ್ಷರಾಗಿದ್ದಾರೆ. ರಾಷ್ಟ್ರೀಯ ಇಫ್ಕೋ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಹೀಗೆ, ಸಹಕಾರಿ ವ್ಯವಸ್ಥೆಗೆ ಒಂದು ಅಪರೂಪದ ವ್ಯಕ್ತಿತ್ವವನ್ನು ನೀಡಿದ ಇವರು ಕಳೆದ ೨೫ ವರ್ಷಗಳಿಂದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಮಾಡಿರುವ ಸಾಧನೆಯ ಹಿನ್ನೋಟವನ್ನು ಕಂಡರೆ ನಮ್ಮ ಬ್ಯಾಂಕಿನ ಶಕ್ತಿಯಾಗಿ ಅವರು ರೂಪುಗೊಂಡಿದ್ದಾರೆ. ಅವರ ಚಿಂತನೆ, ದೂರದೃಷ್ಠಿತ್ವ ಸಹಕಾರಿ ಬ್ಯಾಂಕ್ ಪ್ರತಿಯೊಬ್ಬ ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪುವಂತಾಗಬೇಕು, ಅವರು ಕಾಣುವ ಬದುಕಿನ ಕನಸಿಗೆ ತಣ್ಣೀರೆರಚಬಾರದು, ಯುವಕರು, ಮಹಿಳೆಯರು ಸ್ವಾವಲಂಬಿಗಳಾಗಬೇಕೆಂಬ ಯೋಜನೆಗಳೊಂದಿಗೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕನ್ನು ಯಶಸ್ಸಿನ ತುತ್ತ ತುದಿಗೇರಿಸಲು ಡಾ| ಎಂ.ಎನ್. ರಾಜೇಂದ್ರ ಕುಮಾರ್‌ರವರ ಪರಿಶ್ರಮ ಸಹಕಾರಿ ರಂಗದಲ್ಲಿ ಅನನ್ಯವಾಗಿದೆ. ಇಂತಹ ಮೇರು ವ್ಯಕ್ತಿತ್ವದ ಸಹಕಾರಿ ರತ್ನ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ರಜತ ಸಂಭ್ರಮದ ಅಭಿವಂದನಾ ಕಾರ್ಯಕ್ರಮದಲ್ಲಿ ಸಹಕಾರಿ ಭೂಷಣ ಪ್ರಶಸ್ತಿಯನ್ನು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಹೆಚ್. ಡಿ. ಕುಮಾರಸ್ವಾಮಿ ಪ್ರದಾನ ಮಾಡಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಅಭಿವಂದನಾ ಕಾರ್ಯಕ್ರಮ ನೆರವೇರಿಸಲಿರುವರು.

ನವೋದಯ ಸ್ವ-ಸಹಾಯ ಸಂಘಗಳ ‘ವಿಂಶತಿ’

ನವೋದಯ ಸ್ವ-ಸಹಾಯ ಸಂಘಗಳ ಯೋಜನೆ ಜಾರಿಗೆ ಬಂದು ಇಪ್ಪತ್ತು ವರ್ಷಗಳು ತುಂಬುವ ಪರ್ವಕಾಲದಲ್ಲಿ ವಿಂಶತಿ ಸಮಾರಂಭ ನಡೆಯುತ್ತಿದೆ. ಡಾ| ಎಂ.ಎನ್. ರಾಜೇಂದ್ರ ಕುಮಾರ್‌ರವರ ಮನಸ್ಸಿಗೆ ಹೊಳೆದ ಕ್ರಾಂತಿಕಾರಿ ಕಲ್ಪನೆ ಈ ‘ನವೋದಯಸ್ವ-ಸಹಾಯ ಸಂಘ’ ಯೋಜನೆ. ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡಿದಾಗ ಮಾತ್ರ ಬಡತನ ನಿರ್ಮೂಲನೆ ಸಾಧ್ಯವೆಂಬುವುದನ್ನು ಅರಿತುಕೊಂಡು ಕಳೆದ 20 ವರ್ಷಗಳ ಹಿಂದೆ ಕೆಲವೊಂದು ಸಮಾನ ಮನಸ್ಕರನ್ನು ಸೇರಿಸಿಕೊಂಡು, ನವೋದಯ ಸ್ವ-ಸಹಾಯ ಸಂಘದ ಬಗ್ಗೆ ಚಿಂತನೆ ನಡೆಸಿ ಯೋಜನೆ ರೂಪಿಸಿದರು. ಇದು ಮುಖ್ಯವಾಗಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ನಾಂದಿಯಾಯಿತು. ಸ್ವತಂತ್ರವಾಗಿ ಕಾರ್ಯಾಚರಿಸಲು ಸಹಾಯವಾಯಿತು. ಇದರಿಂದಾಗಿ ಗೃಹಿಣಿಯರು ಆರ್ಥಿಕ ಸ್ವಾವಲಂಬಿಗಳಾಗಿ ಗೌರವದ ಬದುಕಿಗೆ ನವೋದಯ ಯೋಜನೆ ಕೊಂಡಿಯಾಯಿತು. ಇದೀಗ ರಾಜ್ಯದ ೫ ಜಿಲ್ಲೆಗಳಲ್ಲಿ 35,000ಕ್ಕೂ ಹೆಚ್ಚು ನವೋದಯ ಸ್ವ-ಸಹಾಯ ಸಂಘಗಳು ರಚನೆಗೊಂಡು ಸುಮಾರು ೩.೫೦ ಲಕ್ಷ ಜನರು ಸದಸ್ಯರಾಗಿರುವುದು ಹೆಮ್ಮೆಯ ವಿಚಾರ.

ರಜತ ಸಂಭ್ರಮದ ಕಾರ್ಯಕ್ರಮದ ಜೊತೆಗೆ ನವೋದಯ ಸ್ವ-ಸಹಾಯ ಸಂಘಗಳ ವಿಂಶತಿ ಕಾರ್ಯಕ್ರಮ ನಡೆಯುವುದು ಕೂಡಾ ಒಂದು ಸುಯೋಗ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು ಜಿಲ್ಲೆಗಳಿಂದ ಸಹಕಾರಿಗಳು, ನವೋದಯ ಸ್ವ-ಸಹಾಯ ಸಂಘದ ಸದಸ್ಯರು ಸಹಿತ 2 ಲಕ್ಷಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸಹಕಾರಿ ಮ್ಯೂಸಿಯಂ:

ರಜತ ಸಂಭ್ರಮವನ್ನು ಅವಿಸ್ಮರಣೀಯವಾಗಿಸಲು ಶಾಶ್ವತ ಸಹಕಾರಿ ಮ್ಯೂಸಿಯಂ ಸ್ಥಾಪಿಸಲಾಗುವುದು. ಮೊಳಹಳ್ಳಿ ಶಿವರಾವ್ ಅವರಿಂದ ಆರಂಭಗೊಂಡು ಇದುವರೆಗಿನ ಸಹಕಾರಿ ಕ್ಷೇತ್ರದ ಎಲ್ಲ ಬೆಳವಣಿಗೆಯನ್ನು ಈ ಮ್ಯೂಸಿಯಂನಲ್ಲಿ ದಾಖಲಿಸಲಾಗುವುದು. ಮ್ಯೂಸಿಯಂ ಸ್ಥಾಪನೆಗೆ ತಜ್ಞರ ಸಮಿತಿ ರಚಿಸಿ, ಈಗಾಗಲೇ ಇದರ ಕಾರ್ಯ ನಡೆಯುತ್ತಿದ್ದು, ರಜತ ಸಂಭ್ರಮದ ಪರ್ವಕಾಲದಲ್ಲಿ ಇದು ಉದ್ಘಾಟನೆಗೊಳ್ಳಲಿದೆ.

ರಜತ ಸಂಭ್ರಮ ಕಾರ್ಯಕ್ರಮದ ಪೂರ್ವದಲ್ಲಿ ಜಿಲ್ಲೆಯ ಸಹಕಾರಿಗಳ ಸಭೆಯಲ್ಲಿ ಚರ್ಚಿಸಿದಂತೆ, ಸಹಕಾರಿ ಆಸ್ಪತ್ರೆ, ಸಹಕಾರಿ ಕ್ಷೇತ್ರದ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿ, ಸಹಕಾರಿ ಐಟಿ ಕೇಂದ್ರ ಸ್ಥಾಪನೆ ಮುಂತಾದ ಸಲಹೆಗಳಿಗೆ ಸ್ಪಂದಿಸಲಾಗಿದ್ದು, ಇವುಗಳನ್ನು ಕಾರ್ಯಗತಗೊಳಿಸುವ ಬಗ್ಗೆ ಚಿಂತನೆ ನಡೆದಿದೆ.

ಸಹಕಾರಿ ಗ್ರಂಥಾಲಯ:

ರಾಜ್ಯದಲ್ಲಿ ಸಹಕಾರಿ ಕ್ಷೇತ್ರದ ಹುಟ್ಟು, ಬೆಳವಣಿಗೆಯ ಬಗ್ಗೆ ಸಹಕಾರಿ ಗ್ರಂಥಗಳನ್ನು ಸಂಗ್ರಹಿಸಿ ಗ್ರಂಥಾಲಯವನ್ನು ತೆರೆಯುವ ಸೂಚನೆ ರಜತ ಸಂಭ್ರಮ ಸಮಿತಿಗೆ ಬಂದಿದ್ದು, ಇದನ್ನು ಕಾರ್ಯಗತಗೊಳಿಸಿ, ಬ್ಯಾಂಕಿನ ಹಳೆಯ ಕಟ್ಟಡದ‌ಐದನೇ ಮಹಡಿಯಲ್ಲಿ ಸಹಕಾರಿ ಗ್ರಂಥಾಲಯರಜತ ಸಂಭ್ರಮದಂದುಲೋಕಾರ್ಪಣೆಗೊಳ್ಳಲಿದೆ.

ವಿಚಾರಗೋಷ್ಠಿ:

ರಜತ ಸಂಭ್ರಮದ ಅಂಗವಾಗಿ, ಜನವರಿ ೧೮ರಂದು ವಿಚಾರಗೋಷ್ಠಿ ಎಸ್‌ಸಿಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಲಿದೆ. ಗೋಷ್ಠಿ- 1: ‘ಸಹಕಾರ ಕ್ಷೇತ್ರ ಅಂದು-ಇಂದು-ಮುಂದು’ ಗೋಷ್ಠಿ 2: ‘ಸಹಕಾರ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳು ಹಾಗೂ ಪರಿಹಾರೋಪಾ ಯಗಳು’ ಎಂಬ ವಿಚಾರದ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ. ಈ ವಿಚಾರಗೋಷ್ಠಿಯಲ್ಲಿ ಸಹಕಾರ ಕ್ಷೇತ್ರದ ಹಿರಿಯ ಮುತ್ಸದ್ದಿಗಳು ಹಾಗೂ ಹಿರಿಯ ಇಲಾಖಾ ಅಧಿಕಾರಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿರುವರು ಎಂದು ದೇವಿಪ್ರಸಾದ್ ಶೆಟ್ಟಿ ಅವರು ಕಾರ್ಯಕ್ರಮದ ಸಂಪೂರ್ಣ ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ರಜತ ಸಂಭ್ರಮ ಅಭಿನಂದನಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಬ್ಯಾಂಕಿನ ನಿರ್ದೇಶಕರು ಉಪಸ್ಥಿತರಿದ್ದರು.

Comments are closed.