ಕರಾವಳಿ

ಜನಮನಸೂರೆಗೊಂಡ ಹೊನಲು ಬೆಳಕಿನ ಮಂಗಳೂರು ಕಂಬಳೋತ್ಸವ : ಗೋಲ್ಡ್‌ಫಿಂಚ್ ಸಿಟಿಗೆ ಹರಿದು ಬಂದ ಜನ ಸಾಗಾರ

Pinterest LinkedIn Tumblr

ಮಹಾನಗರ : ಬಿಜೆಪಿ ಮುಖಂಡ ಹಾಗೂ ತಲಪಾಡಿ ದೊಡ್ಡಮನೆಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಾರಥ್ಯದಲ್ಲಿ ನಗರದ ಬಂಗ್ರ ಕೂಳೂರು ಗೋಲ್ಡ್‌ಫಿಂಚ್ ಸಿಟಿಯ ರಾಮ-ಲಕ್ಷ್ಮಣ ಜೋಡುಕರೆಯಲ್ಲಿ ರವಿವಾರ ನಡೆದ ಎರಡನೇ ವರ್ಷದ ಹೊನಲು ಬೆಳಕಿನ ಮಂಗಳೂರು ಕಂಬಳೋತ್ಸವ ಮಂಗಳೂರಿನ ಜನತೆಯ ಹಬ್ಬವಾಗಿ ಪರಿವರ್ತನೆಗೊಂಡು ಮನಸೂರೆಗೊಂಡಿತು.

ತಲಪಾಡಿ ದೊಡ್ಡಮನೆ ಕ್ಯಾ| ಬೃಜೇಶ್‌ ಚೌಟ ಅವರ ಸಾರಥ್ಯದಲ್ಲಿ ಗೌರವಾಧ್ಯಕ್ಷ ಎಂಆರ್‌ಜಿ ಗ್ರೂಪ್‌ನ ಸಿಎಂಡಿ ಕೆ. ಪ್ರಕಾಶ್‌ ಶೆಟ್ಟಿ ಅವರ ಗೋಲ್ಡ್‌ಫಿಂಚ್ ಸಿಟಿಯಲ್ಲಿ ಆಯೋಜಿಸಲಾದ ಮಂಗಳೂರಿನಲ್ಲಿ ನಡೆಯುವ ಏಕೈಕ ರಾಮ-ಲಕ್ಷಣ ಜೋಡುಕರೆ ಕಂಬಳೋತ್ಸವಕ್ಕೆ ರವಿವಾರ ಬೆಳಗ್ಗೆ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯ ಆಧ್ಯಕ್ಷ ಚಿತ್ತರಂಜನ್‌ ಅವರು ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ರಾಮ-ಲಕ್ಷ್ಮಣ ಜೋಡುಕರೆಯಲ್ಲಿ ತುಳುನಾಡಿನ ಜಾನಪದ ಕ್ರೀಡೆ ಕಂಬಳ ಕಳೆದ ಎರಡು ವರ್ಷಗಳಿಂದ ಕ್ಯಾ| ಬ್ರಿಜೇಶ್‌ ಚೌಟ ಅವರ ಮುಂದಾಳತ್ವದಲ್ಲಿ ಯಶಸ್ವಿಯಾಗಿ ಆಯೋಜನೆಗೊಳ್ಳುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೋಣಗಳು ಈ ಕಂಬಳದಲ್ಲಿ ಭಾಗವಹಿಸುತ್ತಿವೆ ಶ್ಲಾಘನೆ ವ್ಯಕ್ತಪಡಿಸಿದರಲ್ಲದೇ ಕಂಬಳಕ್ಕೆ ಶುಭ ಹಾರೈಸಿದರು.

ಮೇಯರ್‌ ಭಾಸ್ಕರ್‌, ವಿಧಾನಪರಿಷತ್‌ ಮಾಜಿ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌, ಕುಳೂರು ಬೀಡಿನ ವಜ್ರ ಕರ್ಣಂತಾಯ ಬಳ್ಳಾಲ್‌, ಬಾರ್ಕೂರು ಕಚ್ಚಾರು ಮಾಲ್ತಿದೇವಿ ದೇವಸ್ಥಾನದ ಉಪಾಧ್ಯಕ್ಷ ಶಿವಪ್ಪ ನಂತೂರು, ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಪಿ.ಆರ್‌.ಶೆಟ್ಟಿ , ಮೂಡುಬಿದಿರೆ ಜೈನ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ| ಕೆ.ಗುಣಪಾಲ ಕಡಂಬ ಅತಿಥಿಯಾಗಿದ್ದರು. ಜಿಲ್ಲಾ ಬಿಜೆಪಿ ಕೋಶಾಧಿಕಾರಿ ಸಂಜಯ ಪ್ರಭು, ಕಂಬಳ ಸಮಿತಿಯ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.

ರಾಷ್ಟ್ರೀಯ ಹೆದ್ದಾರಿ 66ಕ್ಕೆ ತಾಗಿ ಕೊಂಡಿರುವ ಬಂಗ್ರಕುಳೂರಿನ ಗೋಲ್ಡ್‌ಪಿಂಚ್ ಸಿಟಿಯ ಅತ್ಯಂತ ವಿಶಾಲ ಪ್ರದೇಶದಲ್ಲಿ ರಾಮ -ಲಕ್ಷ್ಮಣ ಹೆಸರಿನಲ್ಲಿ ಜೋಡುಕರೆಯನ್ನು ಸುವ್ಯವಸ್ಥಿತವಾಗಿ ಮತ್ತು ಸುಸಜ್ಜಿತವಾಗಿ ನಿರ್ಮಿಸಲಾಗಿತ್ತು. ಕಂಬಳ ಸಮಿತಿಯ ಅಧ್ಯಕ್ಷ ಕ್ಯಾ| ಬೃಜೇಶ್‌ ಚೌಟ ಅವರು ಕೋಣಗಳ ಯಜಮಾನರುಗಳನ್ನು ವಿದ್ಯುಕ್ತವಾಗಿ ಸ್ವಾಗತಿಸಿದರು.

ಅವಿಭಜಿತ ದಕ್ಷಿಣ ಕನ್ನಡ ಸಹಿತ ವಿವಿಧೆಡೆಗಳಿಂದ ನೇಗಿಲು ಹಿರಿಯ ಮತ್ತು ಕಿರಿಯ, ಹಗ್ಗ ಹಿರಿಯ ಮತ್ತು ಕಿರಿಯ, ಕನೆ ಹಲಗೆ, ಅಡ್ಡ ಹಲಗೆ ಸೇರಿ ವಿವಿಧ ವಿಭಾಗಗಳಲ್ಲಿ 100ಕ್ಕೂ ಅಧಿಕ ಕಂಬಳ ಕೋಣಗಳ ಜೋಡಿಗಳು ಭಾಗವಹಿಸಿದ್ದವು.

ಚಿನ್ನದ ಬಹುಮಾನ : ಕನೆ ಹಲಗೆ ವಿಭಾಗದಲ್ಲಿ ನಿಗದಿತ ನಿಶಾನೆಗೆ ನೀರು ಹಾಯಿಸಿದ ಕೋಣಗಳಿಗೆ ಪ್ರಥಮ ಎರಡು ಪವನು, ದ್ವಿತೀಯ ಒಂದು ಪವನು, ಹಗ್ಗ ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥ‌ಮ ಎರಡು ಪವನು, ದ್ವಿತೀಯ ಒಂದು ಪವನು, ಅಡ್ಡ ಹಲಗೆ ಹಗ್ಗ, ನೇಗಿಲು, ಕಿರಿಯ ವಿಭಾಗದಲ್ಲಿ ಪ್ರಥಮ ಒಂದು ಪವನು, ದ್ವಿತೀಯ ಅರ್ಧ ಪವನು ಚಿನ್ನ ಬಹುಮಾನ ನೀಡಲಾಗುತ್ತಿದೆ. ನಿಖರ ಫ‌ಲಿತಾಂಶ ಪಡೆಯಲು ಲೇಸರ್‌ ಬೀಂ ನೆಟ್ ವರ್ಕ್‌ ಸಿಸ್ಟಂ, ವೀಡಿಯೋ ದಾಖಲೀಕಣ, ಚಿತ್ರೀಕರಣ ವ್ಯವಸ್ಥೆ ಮಾಡಲಾಗಿತ್ತು.

Comments are closed.