ಕರಾವಳಿ

ಪೇಜಾವರ ಶ್ರೀಗಳಿಗೆ ಅರಳು-ಮರುಳು ಎಂದ ಮಟ್ಟುಗೆ ಓವೈಸಿ ದೊಡ್ಡವರು: ಕೋಟ ಶ್ರೀನಿವಾಸ್ ಪೂಜಾರಿ

Pinterest LinkedIn Tumblr

ಉಡುಪಿ: ಅಖಂಡ ಹಿಂದೂ ಧರ್ಮದ ಶ್ರೇಷ್ಠ ಸನ್ಯಾಸಿ, ಅವರು ದೀಕ್ಷೆ ಸ್ವೀಕರಿಸಿ 80 ವರ್ಷಗಳು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಸ್ವತಃ ರಾಷ್ಟ್ರಪತಿಗಳೇ ಉಡುಪಿಗೆ ಬಂದು ಗೌರವಿಸುತ್ತಿದ್ದಾರೆ. ಮಹಾನ್ ವ್ಯಕ್ತಿಗಳ ಬಗ್ಗೆ ಈ ರೀತಿ ಮಾತನಾಡುವುದು ಸರಿ ಅಲ್ಲವೆಂದು ಪೇಜಾವರ ಶ್ರೀಗಳಿಗೆ ಅರಳು-ಮರಳು ಎಂದು ಅಮೀನ್‌ ಮಟ್ಟು ಹೇಳಿಕೆಯನ್ನು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಖಂಡಿಸಿದ್ದಾರೆ.

ದಿನೇಶ್ ಅಮೀನ್ ಮಟ್ಟು ಅವರು ನೀಡಿರುವ ಹೇಳಿಕೆಯಿಂದ ಇಡೀ ಹಿಂದೂ ಧರ್ಮಕ್ಕೆ ನೋವಾಗಿದೆ ಎಂದು ಕೋಟ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬಹುಶಃ ಇಡೀ ದೇಶದ ಪೊಲೀಸ್ ವ್ಯವಸ್ಥೆಯನ್ನು 15 ನಿಮಿಷಗಳ ಕಾಲ ಸ್ಥಗಿತಗೊಳಿಸಿ, ಇಡೀ ಹಿಂದೂ ಧರ್ಮವನ್ನೇ ಮುಗಿಸುತ್ತೇನೆ ಎಂದ ಅಸಾದುದ್ದೀನ್ ಓವೈಸಿಯಂತಹವರು ದಿನೇಶ್ ಅಮೀನ್ ಮಟ್ಟು ಅವರಿಗೆ ಬಹಳ ದೊಡ್ಡ ವ್ಯಕ್ತಿಯಾಗಿರಬೇಕು. ಆದ್ದರಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಪೂಜಾರಿ ಟೀಕಿಸಿದರು.

Comments are closed.