ಕರಾವಳಿ

ಲಿಂಗತ್ವ ಅಲ್ಪಸಂಖ್ಯಾತರ ವಿರುದ್ಧ ಮಂಡಿಸಿರುವ ಮಸೂದೆ ಹಿಂಪಡೆಯಲು ಆಗ್ರಹಿಸಿ ಮಂಗಳಮುಖಿಯರಿಂದ ಪ್ರತಿಭಟನೆ

Pinterest LinkedIn Tumblr

ಮಂಗಳೂರು, ಡಿಸೆಂಬರ್. 22: ಕೇಂದ್ರ ಸರಕಾರ ಲಿಂಗತ್ವ ಅಲ್ಪಸಂಖ್ಯಾತರ ವಿರುದ್ಧ ಮಂಡಿಸಿರುವ ಮಸೂದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಮಂಗಳ ಮುಖಿಯರು ಶುಕ್ರವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ನವ ಸಹಜ ಸಮುದಾಯ ಸಂಘಟನೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಂಗಳ ಮುಖಿಯರು ರಾಜ್ಯಸಭೆಯಲ್ಲಿ ಟ್ರಾನ್ಸ್ ಬಿಲ್ 2018 ಮಂಡಿಸುವ‌ ಮೂಲಕ ಮಂಗಳ ಮುಖಿಯರ ಮೇಲೆ ಪ್ರಹಾರ ಮಾಡಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಲೈಂಗಿಕ ಅಲ್ಪಸಂಖ್ಯಾತರ ವಿಧೇಯಕ​ ಮಂಗಳಮುಖಿಯರಿಗೆ ಸಮಸ್ಯೆಯಾಗಲಿದೆ. ಹೀಗಾಗಿ ಬಿಲ್​ನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ಪ್ರಮುಖರಾದ ಪ್ರೇಮ ಅವರು, ಲೈಂಗಿಕ ಅಲ್ಪಸಂಖ್ಯಾತರ ವಿಧೇಯಕ​ ​2018ರ ಪ್ರಕಾರ ಮಂಗಳಮುಖಿಯರು ಭಿಕ್ಷಾಟನೆ ಮಾಡುವ ಹಾಗಿಲ್ಲ, ಅವರು ತಂದೆತಾಯಿ ಆಶ್ರಯದಲ್ಲೇ ಇರಬೇಕು. ಆದರೆ ನಾವು ಯಾರ ಹಕ್ಕೂ ಅಲ್ಲ. ಸ್ವತಂತ್ರವಾಗಿ ಜೀವಿಸಬಹುದು. ಈ ಬಿಲ್​ನಿಂದ ನಮಗೆ ಸಮಸ್ಯೆಯಾಗಲಿದೆ. ಯಾವುದೇ ಕಾರಣಕ್ಕೂ ಕೇಂದ್ರ ಸರಕಾರ ಈ ಮಸೂದೆಯನ್ನು ಜಾರಿಗೊಳಿಸಬಾರದು. ಕೂಡಲೇ ಮಸೂದೆ ಹಿಂಪಡೆಯಬೇಕು. ಮಾತ್ರವಲ್ಲದೇ ಮಂಗಳಮುಖಿಯರಿಗೆ ಪರವಾದ ಮಸೂದೆಯನ್ನೇ ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ವಿರುದ್ಧವಾಗಿ ಕೇಂದ್ರ ಸರ್ಕಾರ ಟ್ರಾನ್ಸ್​​ಜೆಂಡರ್ಸ್ ಬಿಲ್ ಅನುಷ್ಠಾನಗೊಳಿಸಿದೆ ಎಂದು ಆರೋಪಿಸಿದ ಮಂಗಳಮುಖಿಯರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರುಈ ವೇಳೆ ಮಂಗಳಮುಖಿಯರಾದ ತ್ರಾಸಿ, ಅರುಂದತಿ, ನಯನ , ನಿಖಿಲ, ನಿಶಾ ಮತ್ತಿತರರು ಉಪಸ್ಥಿತರಿದ್ದರು.

Comments are closed.