ಕರಾವಳಿ

ಆರೋಗ್ಯಕ್ಕೆ ಅಡ್ಡಪರಿಣಾಮ ಬೀರದೇ, ದೇಹಕ್ಕೆ ಹಿತವಾದ ಎಣ್ಣೆಗಳ ಬಗ್ಗೆ ಒಂದು ನೋಟ.

Pinterest LinkedIn Tumblr

 ಕೆಲವರ್ಷಗಳ ಹಿಂದೆ ಯಾವುದೇ ಅಂಗಡಿಗಳಲ್ಲಿ ಎಣ್ಣೆ ಮಾರಾಟಕ್ಕೆ ಇದ್ದರೆ ಅದು ಅಡುಗೆಗೆ ಎಳ್ಳೆಣ್ಣೆ, ತಲೆಗೆ ಕೊಬ್ರಿ ಎಣ್ಣೆ, ಬಡವರಿಗೆ ಹರಳೆಣ್ಣೆ. ಇಷ್ಟೇ ಆಯ್ಕೆ ಇದ್ದಿತ್ತು. ಒಳ್ಳೆಯ ಎಣ್ಣೆ ಎಂದರೆ ಹೆಚ್ಚಾಗಿ ಸೂರ್ಯಕಾಂತಿ ಎಣ್ಣೆಯೇ ಆಗಿತ್ತು. ಸ್ವಲ್ಪ ಒಳ್ಳೆಯದು ಕೊಡಿ ಎಂದು ಕೇಳಿದವರಿಗೆ ಕೊಂಚ ದುಬಾರಿಯಾದ ಶೇಂಗಾ ಎಣ್ಣೆ ಇರುತ್ತಿದ್ದು. ಇಷ್ಟು ಬಿಟ್ಟರೆ ಬೇರೆ ಆಯ್ಕೆಯೇ ಇರಲಿಲ್ಲ. ಎಣ್ಣೆಯಲ್ಲಿ ಏನಿದೆ ಎಂಬುವುದರ ಬಗ್ಗೆ ಅಂತೂ ಆ ಟಿನ್ನುಗಳಲ್ಲಿ ಯಾವುದೇ ಮಾಹಿತಿ ಇರುತ್ತಿರಲಿಲ್ಲ. ಕಾಲಕ್ರಮೇಣ ಡಾಲ್ಡಾ ಎಂಬ ವನಸ್ಪತಿಗೆ ಹೆಚ್ಚಿನ ಬೇಡಿಕೆ ಬರಲಾರಂಭಿಸಿತು, ಅಗ್ಗ ಎಂಬ ಒಂದೇ ಕಾರಣಕ್ಕೆ ಹೋಟೆಲುಗಳಿಂದ ಹಿಡಿದು ಮನೆಮನೆಗಳಲ್ಲಿ ಇದರ ಬಳಕೆಯಾಗುತ್ತಿತ್ತು. ಆದರೆ ಇತ್ತೀಚೆಗೆ ನಡೆಸಿದ ಸಂಶೋಧನೆಯಲ್ಲಿ ಈ ವನಸ್ಪತಿ ದೇಹಕ್ಕೆ ಎಷ್ಟು ಮಾರಕ ಎಂದು ಖಚಿತಪಡಿಸಿದ ಬಳಿಕ ಮಾರುಕಟ್ಟೆಯಿಂದ ಅದೃಶ್ಯವಾಗಿದೆ

ಅಡುಗೆಗೆ ನಾವು ನಾನಾ ಬಗೆಯ ಎಣ್ಣೆಯನ್ನು ಬಳಸುತ್ತೇವೆ. ಆದರೆ ಅಡುಗೆಗೆ ಬಳಸುವ ಎಣ್ಣೆ ಆರೋಗ್ಯಕರವಾಗಿರಬೇಕು. ಕಲಬೆರಿಕೆಯಾದ ಎಣ್ಣೆ ಬಳಸಬಾರದು ಎಂಬುದು ಅಷ್ಟಾಗಿ ಯಾರಿಗೂ ತಿಳಿದಿರುವುದಿಲ್ಲ. ಅಡುಗೆಗೆ ಎಣ್ಣೆ ಬಳಸಿದ ಕೂಡಲೇ ಕೊಲೆಸ್ಟ್ರಾಲ್ ಜಾಸ್ತಿ ಆಗುವುದಿಲ್ಲ. ಆದರೆ ತುಂಬಾ ಕರಿದ ಪದಾರ್ಥಗಳನ್ನು ತಿನ್ನುತ್ತಾ ಹೋದರೆ ಮಾತ್ರ ಕೊಲೆಸ್ಟ್ರಾಲ್ ಜಾಸ್ತಿಯಾಗುವುದು. ಎಲ್ಲಾ ಅಡುಗೆಗೆ ಒಂದೇ ಬಗೆಯ ಎಣ್ಣೆ ಬಳಸದೇ ಆರೋಗ್ಯಕರ ಎಣ್ಣೆಗಳಲ್ಲಿ 2-3 ಬಗ್ಗೆ ಎಣ್ಣೆ ತಂದು ಬಳಸಿದರೆ ಭಿನ್ನವಾದ ರುಚಿ ಸಿಗುತ್ತದೆ.

ಅಡುಗೆಗೆ ಸೂಕ್ತವಾದ ಆರೋಗ್ಯಕರ ಎಣ್ಣೆಗಳ ಬಗ್ಗೆ ತಿಳಿಯೋಣ:
* ಸೂರ್ಯಕಾಂತಿ ಎಣ್ಣೆ: ಅಡುಗೆಗೆ ಅತ್ಯಧಿಕ ಬಳಸುವ ಎಣ್ಣೆ ಅಂದರೆ ಸೂರ್ಯಕಾಂತಿ ಎಣ್ಣೆ, ಇದರಲ್ಲಿ linoleic ಆಸಿಡ್ ಅಂಶ ಇದ್ದು ಕೆಟ್ಟ ಕೊಲೆಸ್ಟ್ರಾಲ್ ಅಂಶ ತುಂಬಾ ಕಡಿಮೆ ಇದೆ. ಈ ಎಣ್ಣೆಯನ್ನು ಬೇಕಾದರೆ ಪಾಮೋಯಿಲ್ ಎಣ್ಣೆ ಜೊತೆ ಮಿಶ್ರ ಮಾಡಿ ಅಡುಗೆಗೆ ಬಳಸಬಹುದು.

*ತುಪ್ಪ: ಶುದ್ಧ ತುಪ್ಪದಲ್ಲಿ ಕೊಬ್ಬಿನಂಶ ಮತ್ತು ಕೊಲೆಸ್ಟ್ರಾಲ್ ಅಂಶ ಅಧಿಕವಿದ್ದರೂ ಆರೋಗ್ಯಕ್ಕೆ ಒಳ್ಳೆಯದು. ಏಕೆಂದರೆ ಶುದ್ಧ ತುಪ್ಪ ಕೆಲ ಔಷಧೀಯ ಗುಣಗಳನ್ನು ಹೊಂದಿದೆ. ಈ ತುಪ್ಪನನ್ನು ಮಿತಿಮೀರಿ ಬಳಸದೆ ಕೆಲವೊಂದು ಆಹಾರಕ್ಕಷ್ಟೇ ಬಳಸಿ.

* ತೆಂಗಿನೆಣ್ಣೆ: ಕೇರಳಕ್ಕೆ ಹೋದರೆ ಪ್ರತಿಯೊಂದು ತಿಂಡಿ ಮತ್ತು ಅಡುಗೆ ಪದಾರ್ಥಗಳನ್ನು ತೆಂಗಿನೆಣ್ಣೆಯಿಂದಲೇ ತಯಾರಿಸುತ್ತಾರೆ. ತೆಂಗಿನೆಣ್ಣೆ ಕೊಲೆಸ್ಟ್ರಾಲ್ ಅಂಶ ಹೊಂದಿರುವುದಿಲ್ಲ. ಆದರೇ ಇದರಲ್ಲಿ ಕೊಬ್ಬಿನಂಶ (saturated fats) ಇದೆ.

* ಕಡಲೆ ಎಣ್ಣೆ: ಇದರಲ್ಲಿ ಕೊಲೆಸ್ಟ್ರಾಲ್ ಕಡಿಮೆ ಪ್ರಮಾಣದಲ್ಲಿ ಇದ್ದು, ಹೃದಯದ ಸ್ವಾಸ್ಥ್ಯ ಹೆಚ್ಚಿಸುಲ್ಲಿ ಈ ಎಣ್ಣೆ ತುಂಬಾ ಸಹಕಾರಿಯಾಗಿದೆ. ಆದರೆ ಕಡಲೆ ಎಣ್ಣೆ ಕೊಳ್ಳುವಾಗ ಉತ್ತಮ ಬ್ರ್ಯಾಂಡ್ ನ ಎಣ್ಣೆ ನೋಡಿ ಕೊಂಡುಕೊಳ್ಳುವುದು ಒಳ್ಳೆಯದು. ಫ್ರೈ, ಗ್ರಿಲ್ ಮಾಡುವಾಗ ಈ ಎಣ್ಣೆ ಬಳಸಿದರೆ ಒಳ್ಳೆಯದು.

*ಸಾಸಿವೆ ಎಣ್ಣೆ: ಕೆಲವೊಂದು ಅಡುಗೆಗಳನ್ನು ತಯಾರಿಸುವಾಗ ಸಾಸಿವೆ ಎಣ್ಣೆ ಬಳಸಲಾಗುವುದು. ಆದರೆ ಈ ಎಣ್ಣೆಯನ್ನು ಮಿತಿಮೀರಿ ಬಳಸದಿರುವುದು ಒಳ್ಳೆಯದು.

*ರೈಸ್ ಬ್ರಾನ್ ಎಣ್ಣೆ: ಈ ಎಣ್ಣೆಯಲ್ಲಿ ಕೊಲೆಸ್ಟ್ರಾಲ್ ಅಂಶ ಕಡಿಮೆ ಇದ್ದು ವಿಟಮಿನ್ ಇ ಅಂಶ ಮತ್ತು antoxidant ಅಧಿಕವಾಗಿರುವುದರಿಂದ ತ್ವಚೆಗೆ ಒಳ್ಳೆಯದು. ಪದಾರ್ಥಗಳನ್ನು ಕರಿಯಲು ಈ ಎಣ್ಣೆ ಬಳಸುವುದು ಒಳ್ಳೆಯದು.

*ಆಲೀವ್ ಎಣ್ಣೆ: ಈ ಎಣ್ಣೆ ಅಡುಗೆಗೆ ಬಳಸುವುದಾದರೆ ತುಂಬಾ ಬಿಸಿ ಮಾಡಬೇಡಿ, ಇದು ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಹೋಗಲಾಡಿಸಿ ದೇಹದ ಆರೋಗ್ಯ ಹೆಚ್ಚಿಸುವಲ್ಲಿ ತುಂಬಾ ಸಹಕಾರಿಯಾಗಿದೆ.

Comments are closed.