ಕರಾವಳಿ

ಸಂದೇಶ ಪ್ರಶಸ್ತಿ ಪ್ರಕಟ : ಐವರು ಸಾಧಕರಿಗೆ ಸಂದೇಶ ಪ್ರಶಸ್ತಿ : ಸ್ನೆಹಸದನ್ ಮತ್ತು ಜೀವದಾನ್‌ಗೆ ಸಂದೇಶ ವಿಶೇಷ ಪ್ರಶಸ್ತಿ

Pinterest LinkedIn Tumblr

ಮಂಗಳೂರು, ಡಿಸೆಂಬರ್,05 : ಸಂದೇಶ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಪ್ರಸಕ್ತ ಸಾಲಿನ ‘ಸಂದೇಶ ಪ್ರಶಸ್ತಿ 2019’ಕ್ಕೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಐವರನ್ನು ಆಯ್ಕೆ ಮಾಡಲಾಗಿದ್ದು, ಆಯ್ಕೆಯಾಗಿರುವವರ ವಿವರವನ್ನು ಖ್ಯಾತ ಸಾಹಿತಿ, ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ನಾ.ಡಿಸೋಜ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾ.ಡಿಸೋಜ ಅವರು, ಪ್ರಸಕ್ತ ಸಾಲಿನ ‘ಸಂದೇಶ ಪ್ರಶಸ್ತಿ 2019’ಕ್ಕೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಐವರನ್ನು ಆಯ್ಕೆ ಮಾಡಲಾಗಿದ್ದು, ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿಗೆ ಗಾಂಧಿವಾದಿ ಎಂದೇ ಖ್ಯಾತರಾದ ನಾಟಕಕಾರ, ಕಾದಂಬರಿಕಾರ, ರಂಗ ನಿರ್ದೇಶಕ‌ ಪ್ರಸನ್ನ ಹೆಗ್ಗೋಡು ಆಯ್ಕೆಯಾಗಿದ್ದಾರೆ. ಸಂದೇಶ ಮಾಧ್ಯಮ ಪ್ರಶಸ್ತಿಗೆ ದಿನಪತ್ರಿಕೆಯಯ ಸಹ ಸಂಪಾದಕ ಬಿ.ಎಂ.ಹನೀಫ್ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

ಸಂದೇಶ ಶಿಕ್ಷಣ ಪ್ರಶಸ್ತಿಗೆ ನಿವೃತ್ತ ಶಿಕ್ಷಕಿ ಮಂಗಳೂರಿನ ಬಿ.ಎಂ.ರೋಹಿಣಿ ಆಯ್ಕೆಯಾದರೆ, ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿಗೆ ಬೆನ್ ಬ್ರಿಟ್ಟೋ ಆಯ್ಕೆಗೊಂಡಿದ್ದು, ಸಂದೇಶ ಕಲಾ ಪ್ರಶಸ್ತಿಗೆ ಮಂಜಮ್ಮ ಜೋಗತಿ ಹಾಗೂ ಸಂದೇಶ ವಿಶೇಷ ಪ್ರಶಸ್ತಿಗೆ ಸ್ನೇಹ ಸದನ್ ಹಾಗೂ ಜೀವದಾನ್ ಎಚ್ ಐವಿ ಪುನರ್ವಸತಿ ಕೇಂದ್ರಗಳು ಆಯ್ಕೆಯಾಗಿದೆ ಎಂದು ಅವರು ಹೇಳಿದರು.

ಜನವರಿ 22ರಂದು ಪ್ರಶಸ್ತಿ ಪ್ರದಾನ:

ಮಂಗಳೂರಿನ ಸಂದೇಶ ಪ್ರತಿಷ್ಠಾನದಲ್ಲಿ 2019ರ ಜನವರಿ 22ರಂದು ಸಂಜೆ 5:30ಕ್ಕೆ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ,’ಸಂದೇಶ ಪ್ರಶಸ್ತಿ 2019’ಕ್ಕೆ ಅಯ್ಕೆಯಾದವರಿಗೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ನಾ.ಡಿಸೋಜ ಹೇಳಿದರು.

ಸ್ನೇಹ ಸದನ್ ಎಚ್ ಐವಿ ಪುನರ್ವಸತಿ ಕೇಂದ್ರ

ಜೀವದಾನ್ ಎಚ್ ಐವಿ ಪುನರ್ವಸತಿ ಕೇಂದ್ರ

ಪ್ರಸಕ್ತ ಸಾಲಿನ ‘ಸಂದೇಶ ಪ್ರಶಸ್ತಿಗೆ ಅಯ್ಕೆಯಾಗಿರುವವರ ವಿವರ :

ಸಂದೇಶ ಶಿಕ್ಷಣ ಪ್ರಶಸ್ತಿ 2019 : ಶ್ರೀಮತಿ ಬಿಂ. ಎಮ್. ರೋಹಿಣಿ, ಕುಡುಪು, ಮಂಗಳೂರು. ಹಿಂದಿ ಪ್ರವೀಣೆ, ಕನ್ನಡ ಎಂ. ಎ. ಶಿಕ್ಷಕಿಯಾಗಿ 30 ವರ್ಷಗಳ ಸೇವೆ. ಪ್ರವ್ರತಿ: ಬರಹ, ಸಂಶೋಧನೆ, ಅಧ್ಯಯನ.
ಪ್ರಶಸ್ತಿಗಳು: ಸ್ರೀ ಸಂವೇದನೆ ಕ್ರತಿಗೆ ಕನ್ನಡ ಸಾಹಿತ್ಯ ಪ್ರಶಸ್ತಿ 1005, ಸ್ರೀ ಶಿಕ್ಷಣ ಸಂಸ್ಕ್ರತಿ ಕ್ರತಿಗೆ ದಕ್ಷಿಣ ಕನ್ನಡ ಜಿಲ್ಲಾಸಾಹಿತ್ಯ ಸಮ್ಮೇಳನದಲ್ಲಿ ಶ್ರಷ್ಟ ಕ್ರತಿ ಪ್ರಶಸ್ತಿ 2002. ಗೌರವಗಳು: ವೀರರಾಣಿ ಅಬ್ಬಕ್ಕ ಪ್ರಶಸ್ತಿ 2016 – ಕರ್ನಾಟಕ ಸರಕಾರ, ಕನ್ನಡ ಸಂಸ್ಕ್ರತಿ ಇಲಾಖೆಯ ಗೌರವ ಸನ್ಮಾನ 2015

ಸಂದೇಶ ಮಾಧ್ಯಮ ಪ್ರಶಸ್ತಿ 2019 : ಶ್ರೀ ಬಿ.ಎಮ್. ಹನೀಫ್, ಪತ್ರಕರ್ತರಾಗಿ ಅನುಭವ,ಕನ್ನಡ ಪತ್ರಿಕೋದ್ಯಮ:34 ವರ್ಷಗಳ ಅನುಭವ. ಈಗ ಬೆಂಗಳೂರಿನಲ್ಲಿ ಪ್ರಜಾವಾಣಿ ಪತ್ರಿಕೆಯ ಸಹಸಂಪಾದಕ (ಅಸೋಸಿಯೇಟ್ ಎಡಿಟರ್) ಆಗಿ ಕೆಲಸ. “ಮುಂಗಾರು” ದಿನಪತ್ರಿಕೆಯಲ್ಲಿ ಉಪಸಂಪಾದಕ/ ಸಹಾಯಕ ಸುದ್ದಿ ಸಂಪಾದಕ. 8 ವರ್ಷಗಳ ಕಾಲ “ಸುಧಾ” ವಾರಪತ್ರಿಕೆಯ ಸಹಾಯಕ ಸಂಪಾದಕ/ ಮುಖ್ಯಸ್ಥಡಿರು. 2017ರಲ್ಲಿ ನಡೆದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡ ಸಿನಿಮಾ ವಿಭಾಗದ ಜ್ಯೂರಿ. ಬೆಂಗಳೂರು ದೂರದರ್ಶನದಲ್ಲಿ 3ವರ್ಷ ಚಲನಚಿತ್ರ ಆಯ್ಕೆ ಸಮಿತಿ ಸದಸ್ಯರು. ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿ ನಿರ್ದೇಶನದ ಸಿನಿಮಾ “ಹಸೀನಾ”ದ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಈ ಸಿನಿಮಾಕ್ಕೆ ಅತ್ಯುತ್ತಮ ಚಿತ್ರ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಗಳು: ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ -2013, ಗದಗದ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಮಾಧ್ಯಮ ಮಂದಾರ ಪ್ರಶಸ್ತಿ

ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ 2019 :

ವಂದನೀಯ ಬೆನ್ ಬ್ರಿಟ್ಟೊ , ಕಾಪುಚಿನ್ ಮೇಳದ ಧರ್ಮಗುರುಗಳು,ಮಂಗಳೂರು. ಶಿಕ್ಷಣ ಕ್ಷೇತ್ರದಲ್ಲಿ ವಿವಿಧ ಸಂಸ್ಥೆಗಳ ನೀರ್ದೇಶಕರಾಗಿ ಸೇವೆ, ವಿವಿಧ ಚರ್ಚುಗಳಲ್ಲಿ ಸೇವೆ. ಪಾಶ್ಚ್ಯಾತ್ಯಾ ಸಂಗೀತದಲ್ಲಿ ವಿಶೇಷ ಪರಿಣತಿ. ಫಾದರ್ ಬ್ರೆನ್ 39 ಧಾರ್ಮಿಕ ಹಾಡುಗಳು ಕೊಂಕಣಿ, ಪಾಶ್ಚ್ಯಾತ್ಯ, ಲಾಟಿನ್ ಭಾಷೆಗಳ 39 ಧಾರ್ಮಿಕ ಹಾಡುಗಳು, ಜನ್ಮದಿನ, ಬೆಳ್ಳಿಹಬ್ಬ, ಸುವರ್ಣ ಮಹೋತ್ಸವ ಇಂತಹ ವಿವಿಧ ಸಂಧರ್ಭಗಳಿಗೆ ಶುಭಾಶಯ ಕೋರುವ ಹಲವಾರು ಗೀತೆಗಳನ್ನು ರಚಿಸಿದ್ದಾರೆ ಹಾಗೂ ಹಾಡಿದ್ದಾರೆ. ಫಾದರ್ ಬೆನ್ ಇತರರು ರಚಿಸಿದ ಹಲವಾರು ಧನಿ ಸುರುಳಿಯಲ್ಲಿ ಹಾಡಿದ್ದಾರೆ ಇಂದಿಗೂ ಹಾಡುತ್ತಾ ಇದ್ದಾರೆ.

ಸಂದೇಶ ಕಲಾ ಪ್ರಶಸ್ತಿ 2019 : ಶ್ರೀಮತಿ ಮಂಜಮ್ಮ ಜೋಗತಿ, ಬಳ್ಳಾರಿ ಜಿಲ್ಲೆಯ ಕಂಪ್ಲಿ. ಈಗ ವಾಸವಿರುವುದು ಹೊಸಪೇಟೆ ತಾಲ್ಲೂಕಿನ ಗೊಲ್ಲರಹಳ್ಳಿ. ಭಿಕ್ಷಾಟನೆ ಮಾಡುತ್ತ ಜೋಗತಿ ನೃತ್ಯವನ್ನು ಕಲಿತರು. ಬಹಳ ಶ್ರಮ ಹಾಗೂ ಶ್ರದ್ಧೆಯಿಂದ ಕಲಿತ ಕಲೆ ಈ ಮಂಜಮ್ಮಳನ್ನು ದೊಡ್ಡ ಕಲಾವಿದೆಯನ್ನಾಗಿ ಮಾಡಿದೆ. ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯೆಯಾಗುವಷ್ಟು ಬೆಳೆಸಿದೆ. ನಾಡಿನ ಉದ್ದಗಲಕ್ಕೂ ನಾಟಕ ಹಾಗೂ ಜೋಗತಿ ನೃತ್ಯ ಪ್ರದರ್ಶನ ನೀಡಿ ಹಲವಾರು ಪ್ರತಿಷ್ಠಿತ ಗೌರವ ಪುರಸ್ಕಾರಗಳನ್ನು ಪಡೆದಿದ್ದಾರೆ. 2010ಲ್ಲಿ ರಾಜ್ಯೋತ್ಸವ ಪ್ರಶಸ್ತಿ.

ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ 2019 : ಶ್ರೀ ಪ್ರಸನ್ನ ಹೆಗ್ಗೊಡ್, ಹೆಗ್ಗೋಡಿನ ಗಾಂಧಿ ಎಂದೇ ಖ್ಯಾತರಾಗಿರುವ ನಾಟಕಕಾರ, ಕಾದಂಬರಿಕಾರ, ಕವಿ ಹಾಗೂ ನಿರ್ದೇಶಕ, ರಂಗಭೂಮಿಯಲ್ಲಿ ಬಹು ದೊಡ್ಡ ಹೆಸರು. ಕರ್ನಾಟಕದ ಹೆಗ್ಗೋಡಿನಲ್ಲಿ ಸಮುದಾಯ ಎಂಬ ನಾಟಕ ಸಂಸ್ಥೆಯನ್ನು ಹುಟ್ಟು ಹಾಕಿದರು. ತುಘಲಕ್, ಗಾಂಧಿ ಮುಂತಾದ ನಾಟಕಗಳನ್ನು ನಿರ್ದೇಶಿಸಿದರು. ರಾಜಕೀಯ ಪ್ರಜ್ಞೆಯುಳ್ಳ ಬೀದಿ ನಾಟಕಗಳು. ಕವಿಗಳೂ, ಕಾದಂಬರಿಕಾರ, ಅನೇಕಾನೇಕ ಗೌರವ ಪ್ರಶಸ್ತಿಗಳು.

ಸಂದೇಶ ವಿಶೇಷ ಪ್ರಶಸ್ತಿ 2019 : ಸ್ನೆಹಸದನ್ ಮತ್ತು ಜೀವದಾನ್, ಹೆಚ್.ಐ.ವಿ/ ಏಡ್ಸ್ ಸೆವಾ ಮತ್ತು ಪುನರ್ವತಿ ಕೇಂದ್ರಗಳು.
ಸ್ನೆಹಸದನ್‌ಸಂಸ್ಥೆ ಕಮೀಲಿಯನ್ ಧಾರ್ಮಿಕಗುರುಗಳು ನಡೆಸುತ್ತಾರೆ.ನಿರ್ದೇಶಕರು: ವಂ| ಟೆಜಿ ಥೊಮಸ್ ಎಮ್.ಐ. ಸ್ಥಾಪನೆ: 2000. ಕಿರಿಯ ಮಕ್ಕಳಿಗೆ, ಗಂಡು ಮಕ್ಕಳಿಗೆ ಹಾಗೂ ಗಂಡಸರಿಗೆ ಸೆವೆ ಮತ್ತು ಪುನರ್ವತಿ. ಜೀವದಾನ್ ಸಂಸ್ಥೆ ಕಮೀಲಿಯನ್ ಧಾರ್ಮಿಕ ಭಗಿನಿಯರು ನಡೆಸುತ್ತಾರೆ.

ನಿರ್ದೇಶಕಿ: ಭ| ಜಾನ್ಸಿ ಡಿ.ಎಸ್.ಸಿ.ಸ್ಥಾಪನೆ: 2004 ಹೆಣ್ಣು ಮಕ್ಕಳಿಗೆ ಹಾಗೂ ಸ್ರೀಯರಿಗೆ ಸೆವೆ ಮತ್ತು ಪುನರ್ವತಿ. ಎರಡೂ ಸಂಸ್ಥೆಗಳು ಒಟ್ಟಿಗೆ 4500ಕ್ಕು ಮಿಕ್ಕಿ ಹೆಚ್.ಐ.ವಿ/ ಏಡ್ಸ್ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಪ್ರಸ್ತುತ 38ಗಂಡು ಮಕ್ಕಳು, 10 ಗಂಡಸರು, 20 ಮಕ್ಕಳು, 27ಹೆಣ್ಣುಮಕ್ಕಳು, 25 ಸ್ರೀಯರು ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯ ಹಾಗೂ ಹೊರರಾಜ್ಯಗಳಿಂದ ಹೆಚ್.ಐ.ವಿ/ ಏಡ್ಸ್ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ.

Comments are closed.