ಕರಾವಳಿ

ತಣ್ಣೀರು ಬಾವಿ ಗ್ಯಾಂಗ್ ರೇಪ್ ಪ್ರಕರಣ : ನಾಲ್ವರ ಬಂಧನ – ಇನ್ನುಳಿದವರಿಗಾಗಿ ವ್ಯಾಪಕ ಶೋಧ

Pinterest LinkedIn Tumblr

ಮಂಗಳೂರು, ನವೆಂಬರ್.27: ನಗರದ ಹೊರವಲಯ ತೋಟ ಬೆಂಗ್ರೆಯಲ್ಲಿ ಇತ್ತೀಚೆಗೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಮಂಗಳೂರಿನ ತಣ್ಣೀರು ಬಾವಿ ಸಮೀಪದ ಸ್ಯಾಂಡ್ ಪಿಟ್ ಬೆಂಗ್ರೆ ನಿವಾಸಿ ಅಮರನಾಥ ಎಂಬವರ ಪುತ್ರ ಪ್ರಜ್ವಲ್ ಸುವರ್ಣ ಯಾನೆ ಪ್ರಜ್ವಲ್ (25), ಸುರೇಂದ್ರ ಶ್ರೀಯಾನ್ ಎಂಬವರ ಪುತ್ರ ಅರುಣ್ ಯಾನೆ ಅರುಣ್ ಅಮೀನ್ 26 ) , ತೋಟ ಬೆಂಗ್ರೆ ನಿವಾಸಿ ಚಂದ್ರಶೇಖರ ಸಾಲಿಯಾನ್ ಎಂಬವರ ಪುತ್ರ ಆದಿತ್ಯ ಸಾಲಿಯಾನ್ ಯಾನೆ ಆದಿ(25) ಹಾಗೂ ತಣ್ಣೀರು ಬಾವಿ ಸಮೀಪದ ತೋಟ ಬೆಂಗ್ರೆ ರಿಫಾಯಿ ಮೊಯಿದ್ದೀನ್ ಮಸೀದಿ ಬಳಿ ನಿವಾಸಿ ಮೊಹಮ್ಮದ್ ಚಯ್ಯ ಯಾನೆ ಕೋಕ್ಕಿಂಗ್ ಚಯ್ಯ ಎಂಬವರ ಪುತ್ರ ಅಬ್ದುಲ್ ರಿಯಾಝ್ ಯಾನೆ ರಿಯಾಝ್ ಯಾನೆ ಪಿಟ್ಟೆ (35 ) ಎಂದು ಗುರುತಿಸಲಾಗಿದೆ.

ದಿನಾಂಕ: 18-11-2018ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಳಿವೆ ಬಾಗಿಲ ಬಳಿಯ ತೋಟ ಬೆಂಗ್ರೆ ಸಮುದ್ರ ತೀರಕ್ಕೆ ವಿಹಾರಕ್ಕೆ ಬಂದಿದ್ದ ಯುವಜೋಡಿಯನ್ನು ಅಡ್ಡಗಟ್ಟಿ ಬೆದರಿಸಿದ ಅಪರಿಚಿತ ದುಷ್ಕರ್ಮಿಗಳ ತಂಡವೊಂದು ಹುಡುಗಿಯನ್ನು ಬಲವಂತದಿಂದ ಎಳೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರವೆಸಗಿದ್ದು, ಈ ಬಗ್ಗೆ ಮಂಗಳೂರು ಮಹಿಳಾ ಠಾಣೆಯಲ್ಲಿ 7 ಜನ ಆರೋಪಿಗಳ ವಿರುದ್ದ ಠಾಣಾ ಅ.ಕ್ರ 60/2018 ಕಲಂ 376(ಡಿ), 323, 504, 506 ಐಪಿಸಿ ಯಂತೆ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಆರೋಪಿಗಳ ಪತ್ತೆಗಾಗಿ ಪಣಂಬೂರು ಇನ್ ಪೆಕ್ಟರ್ ರಫೀಕ್ ಕೆ.ಎಂ ಮತ್ತು ಮಂಗಳೂರು ಉತ್ತರ ಉಪ-ವಿಭಾಗದ ರೌಡಿ ನಿಗ್ರಹ ದಳದ ವಿಶೇಷ ತಂಡವನ್ನು ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ನಗರದ ಪೊಲೀಸು ಆಯುಕ್ತರಾದ ಟಿ. ಆರ್ ಸುರೇಶ್ ಐ.ಪಿ.ಎಸ್ ಇವರ ನಿರ್ದೇಶನದಂತೆ ಮಂಗಳೂರು ನಗರ ಪೊಲೀಸ್ ಉಪ-ಆಯುಕ್ತರುಗಳಾದ ಹನುಮಂತರಾಯ, ಐ.ಪಿ.ಎಸ್(ಕಾ.ಸು) ಮತ್ತು ಶ್ರೀಮತಿ ಉಮಾ ಪ್ರಶಾಂತ್ (ಅಪರಾಧ ಮತ್ತು ಸಂಚಾರ) ಇವರ ಮಾರ್ಗದರ್ಶನದಂತೆ ಮಂಗಳೂರು ಸಂಚಾರ ಉಪ-ವಿಭಾಗ ಸಹಾಯಕ ಪೊಲೀಸ್ ಆಯುಕ್ತರಾದ ಮಂಜುನಾಥ ಶೆಟ್ಟಿ ಇವರ ನೇತೃತ್ವ್ವದಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ಪಣಂಬೂರು ಠಾಣಾ ಪೊಲೀಸು ನಿರೀಕ್ಷಕರಾದ ರಫೀಕ್.ಕೆ.ಎಮ್, ಮಂಗಳೂರು ಮಹಿಳಾ ಠಾಣಾ ಪಿಐ ಶ್ರೀಮತಿ ಕಲಾವತಿ, ಪಣಂಬೂರು ಠಾಣಾ ಪಿ.ಎಸ್.ಐ(ಕಾ.ಸು) ಉಮೇಶ್ ಕುಮಾರ್.ಎಂ.ಎನ್ ಹಾಗೂ ಮಂಗಳೂರು ನಗರ ಉತ್ತರ ಉಪ-ವಿಭಾಗ ರೌಡಿ ನಿಗ್ರಹ ದಳದ ಅಧಿಕಾರಿ/ ಸಿಬ್ಬಂದಿಗಳಾದ ಎ.ಎಸ್.ಐ ಮೊಹಮ್ಮದ್, ಕುಶಲ ಮಣಿಯಾಣಿ, ವಿಜಯ ಕಾಂಚನ್ ಸತೀಶ್.ಎಂ, ಶರಣ್ ಕಾಳಿ ಮತ್ತು ಪಣಂಬೂರು ಪೊಲೀಸ್ ಠಾಣಾ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿರುತ್ತಾರೆ.

Comments are closed.