ಕರಾವಳಿ

ಹಸಿವು ಮುಕ್ತ ರಾಜ್ಯದ ಕನಸು ಇಂದಿರಾ ಕ್ಯಾಂಟೀನ್ : ಕ್ಯಾಂಟೀನ್ ಉದ್ಘಾಟಿಸಿ ಡಾ.ಜಯಮಾಲಾ

Pinterest LinkedIn Tumblr

ಕುಂದಾಪುರ: ಹಸಿವು ಮುಕ್ತ ರಾಜ್ಯದ ಕನಸಿಗೆ ಇಂದಿರಾ ಕ್ಯಾಂಟೀನ್ ಮುಕ್ತವಾಗಿದೆ. ರಾಜ್ಯದಲ್ಲಿ ಅತ್ಯಂತ ಯಶಸ್ವಿ ಯೋಜನೆಯಾಗದ್ದು, ಸಿದ್ದರಾಮಯ್ಯ ಕನಸು ಸಾಕಾರಗೊಳ್ಳುತ್ತಿದೆ. ಯಾರೂ ಕೂಡಾ ಬಡತನದಿಂದ ನೆರಳಬಾರದು ಎಂಬ ಯೋಜನೆ ಉದ್ದೇಶವಾಗಿದ್ದು, ಯಾರೊಬ್ಬರೂ ಹಸಿವಿಂದ ಬಳಲಬಾರದು ಎನ್ನೋದೇ ಇಂದಿರಾ ಕ್ಯಾಂಟೀನ್ ಉದ್ದೇಶ. ಬೇರೆ ಬೇರೆಕಡೆಯಿಂದ ಬರುವವರಿಗೆ ಎಲ್ಲಾ ವರ್ಗದವರ ಗಮನದಲ್ಲಿಟ್ಟು ಕೈಗೆಟಕು ದರದಲ್ಲಿ ಆಹಾರ ಪೂರೈಸುವ ಮೂಲಕ ಸರ್ಕಾರ ಮಹತ್ವಾಂಕ್ಷೆಗೆ ಯೋಜನೆಗೆ ಚಾಲನೆ ನೀಡುತ್ತಿರುವುದು ಅತ್ಯಂತ ಹೆಮ್ಮ ಹಾಗೂ ಖುಷಿ ವಿಷಯ…ಇಂದಿರಾ ಕ್ಯಾಂಟೀನ್ ಕುರಿತು ಹೀಗೆ ಅಭಿಪ್ರಾಯ ವ್ಯಕ್ತ ಪಡಿಸಿದವರು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ.

ಕುಂದಾಪುರ ಶಾಸ್ತ್ರಿ ವೃತ್ತದ ಬಳಿ ಬುಧವಾರ ಜಿಲ್ಲಾಡಳಿತ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಪುರಸಭೆ ಆಶ್ರಯದಲ್ಲಿ ಆರಂಭವಾದ ಇಂದಿರಾ ಕ್ಯಾಂಟೀನ್ ಹಾಗೂ ಕಟ್ಟಡ ಉದ್ಘಾಟಿಸಿ, ಐದು ರೂ.ಗೆ ತಿಂಡಿ ಹತ್ತು ರೂ.ಗೆ ಊಟ ನೀಡುವುದಷ್ಟೇ ಅಲ್ಲಾ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗೂ ಇಂದಿರಾ ಕ್ಯಾಂಟೀನ್ ತನ್ನದೇ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.1.40 ಲಕ್ಷ ಜನರು ಇಂದಿರಾ ಕ್ಯಾಂಟೀನ್ ಫಲಾನುಭವಿಗಳ ಪಟ್ಟಿಯಲ್ಲಿದ್ದು, ಶುಚಿ ಹಾಗೂ ರುಚಿಗೆ, ತಾಜಾ ಬಿಸಿ ಬಿಸಿ ಆಹಾರಕ್ಕೆ ಆಧ್ಯತೆ ನೀಡಲಾಗುತ್ತದೆ.ಆಯಾ ಭಾಗಕ್ಕೆ ಪೂರಕ ಆಹಾರ ತಯಾರಿಕೆಗೆ ಪ್ರಧಾನತೆ ಕೊಡಲಾಗುತ್ತದೆ.ಜಿಲ್ಲೆಯಲ್ಲಿ ನಾಲ್ಕು ಇಂದಿರಾ ಕ್ಯಾಂಟೀನ್ ಆರಂಭಿಸಲಾಗುತ್ತಿದ್ದು, ಅಗತ್ಯತೆ ಬಿದ್ದರೆ ಮತ್ತಷ್ಟು ಕ್ಯಾಂಟೀನ್ ಆರಂಭಸಲು ಹಿಂಜರಿಯುವುದಿಲ್ಲ.ಆಸ್ಪತ್ರೆ ಪ್ರದೇಶದಲ್ಲಿ ಮೋಬೈಲ್ ಕ್ಯಾಂಟೀನ್ ಕೂಡಾ ಆರಂಭಿಸುವ ಬಗ್ಗೆ ಚಿಂತನೆ ಮಾಡಲಾಗುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಉಡುಪಿ ಜಿಲ್ಲಾದಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್, ಕುಂದಾಪುರ ಉಪವಿಭಾಗಾದಕಾರಿ ಟ.ಭೂಬಾಲನ್, ತಾಪಂ ಇ‌ಒ ಕಿರಣ್ ಫೆಡ್ನೇಕರ್, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಎಚ್.ಎಸ್.ಅರುಣಪ್ರಭ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ವಿಕಾಸ್ ಹೆಗ್ಡೆ, ಪುರಸಭೆ ಸದಸ್ಯರಾದ ಚಂದ್ರಶೇಖರ ಖಾರ್ವಿ, ಶ್ರೀಧರ ಶೇರೆಗಾರ್, ದೇವಕಿ ಸಣ್ಣಯ್ಯ, ಅಬು ಮೊಹಮ್ಮದ್, ತಾಪಂ ಸದಸ್ಯ ಜ್ಯೋತಿ ಪುತ್ರನ್, ಮಾಜಿ ಪುರಸಭೆ ಅಧ್ಯಕ್ಷ ವಸಂತಿ ಮೋಹನ ಸಾರಂಗ, ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಮಾಜಿ ಸದಸ್ಯರಾದ ಪುಷ್ಪಾ ಶೇಟ್, ಶಕುಂತಲಾ ಗುಲ್ವಾಡಿ ಮಾಣಿಗೋಪಾಲ ಪೂಜಾರಿ ಮುಂತಾದವರು ಇದ್ದರು.

Comments are closed.