ಕರಾವಳಿ

ರೂ.8 ಲಕ್ಷ ರೂಪಾಯಿ ವೆಚ್ಚದಲ್ಲಿ ಗ್ರಂಥಾಲಯಕ್ಕೆ ಶಾಸಕ ವೇದವ್ಯಾಸ್ ಕಾಮತ್‌ರಿಂದ ಗುದ್ದಲಿಪೂಜೆ

Pinterest LinkedIn Tumblr

ಮಂಗಳೂರು : ಸಾರ್ವಜನಿಕ ಗ್ರಂಥಾಲಯ ಇಲಾಖೆಯ 98 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ನೂತನ ಗ್ರಂಥಾಲಯಕ್ಕೆ ಶಾಸಕ ವೇದವ್ಯಾಸ್ ಕಾಮತ್ ಅವರು ಬಾವುಟಗುಡ್ಡೆಯಲ್ಲಿ ಗುದ್ದಲಿಪೂಜೆ ನಡೆಸಿದರು.

ನಾಳೆಯಿಂದ ಕಟ್ಟಡದ ಕಾಮಗಾರಿ ಪ್ರಾರಂಭವಾಗಲಿದೆ. ಸದ್ಯ ಈಗಿರುವ ಗ್ರಂಥಾಲಯದಲ್ಲಿ ನಿತ್ಯ ನಾಲ್ನೂರಕ್ಕೂ ಅಧಿಕ ಜನ ವಾಚನಕ್ಕಾಗಿ ಬರುತಿದ್ದಾರೆ.ನೂತನವಾಗಿ ನಿರ್ಮಾಣಗೊಳ್ಳುವ ಕಟ್ಟಡವು ಸುಸಜ್ಜಿತವಾಗಿರಲಿದ್ದು ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದರು.

ಈ ಸಂಧರ್ಭದಲ್ಲಿ ಮ.ನ.ಪಾಲಿಕೆ ಸದಸ್ಯರಾದ ಎ.ಸಿ. ವಿನಯ್ ರಾಜ್,ಪೂರ್ಣಿಮಾ,ನಗರ ಕೇಂದ್ರ ಗ್ರಂಥಾಲಯ ಉಪನಿರ್ದೇಶಕರಾದ ರಾಘವೇಂದ್ರ ಕೆ.ವಿ,ಗ್ರಂಥಾಲಯ ಅಧಿಕಾರಿ ಮಮತಾ ರೈ,ಮನಪಾ ಮಾಜಿ ಸದಸ್ಯರಾದ ರಂಗನಾಥ ಕಿಣಿ,ಪ್ರೇಮಚಂದ್ರ,ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವಸಂತ್ ಜೆ ಪೂಜಾರಿ,ಮತ್ತು ರಶೀದ್ ಬೋಳಾರ, ಡಾ.ಇಸ್ಮಾಯಿಲ್,ಲಕ್ಷ್ಮಣ ಭಟ್,ದಯಾನಂದ ಉಪಸ್ಥಿತರಿದ್ದರು.

Comments are closed.