ಕರಾವಳಿ

ನೆಗಡಿ,ಶೀತ,ಗಂಟಲು ಕೆರೆತ ನಿವಾರಣೆಗೆ ಸುಲಭ ಸರಳ ಮನೆಮದ್ದು.

Pinterest LinkedIn Tumblr

ಕಾಳು ಮೆಣಸು ತಿನ್ನಲು ಕಷ್ಟವಾದರೆ, ನಿಂಬೆ ರಸ ಮತ್ತು ಜೇನು ತುಪ್ಪವನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ, ಪ್ರತಿ ಎರಡು ಗಂಟೆಗಳಿಗೊಮ್ಮೆ ಸೇವಿಸಿದರೆ ನೆಗಡಿ ,ಗಂಟಲು ಕೆರೆತ ನಿವಾರಣೆಯಾಗತ್ತದೆ

ಬೆಳ್ಳುಳ್ಳಿಯಲ್ಲಿ ಔಷಧೀಯ ಗುಣವಿರುವುದರಿಂದ ಕೆಲವೊಂದು ರೋಗಗಳಿಗೆ ಮದ್ದಾಗಿ ಬಳಸಬಹುದು. ಬೆಳ್ಳುಳ್ಳಿಯಲ್ಲಿ ಜೀವನಿರೋಧಕಶಕ್ತಿ ಇದ್ದು, ದೇಹದಲ್ಲಿರುವ ಅನಾರೋಗ್ಯಕರ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತದೆ.

ಒಂದು ಎಸಳು ಬೆಳ್ಳುಳ್ಳಿ, ಎರಡು ಲವಂಗ, ಎರಡು ಚಮಚ ನಿಂಬೆ ರಸ, ಒಂದು ಚಮಚ ಜೇನುತುಪ್ಪ, ಅರ್ಧ ಟೀ ಚಮಚ ಕಾಳು ಮೆಣಸಿನ ಪುಡಿಯನ್ನು ಒಟ್ಟಿಗೆ ಬೆರೆಸಿ ಜಗಿದು ತಿಂದರೆ ಶೀತ ಕಡಿಮೆಯಾಗುತ್ತದೆ.ಜೇನು ತುಪ್ಪವು ದೇಹದಲ್ಲಿರುವ ಬ್ಯಾಕ್ಟಿರೀಯಾ ಮತ್ತು ಕೀಟಾಣುಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ.

ಮೇಲಿನ ಎಲ್ಲ ಸಾಮಗ್ರಿಯನ್ನು ಒಂದು ಪಾತ್ರೆಗೆ ಹಾಕಿ ಸ್ವಲ್ಪ ನೀರು ಹಾಕಿ ಕುದಿಸಿ ಕುಡಿದರೆ ತಕ್ಷಣ ಕಡಿಮೆಯಾಗುವುದಲ್ಲದೇ ದೇಹದಲ್ಲಿ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ.ಸಾಧ್ಯವಾದಷ್ಟು ಮನೆಯಲ್ಲಿಯೇ ಕೆಲವು ಮದ್ದು ತಯಾರಿಸಿ ಕುಡಿದರೆ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ.

Comments are closed.