ಮನೋರಂಜನೆ

#Metoo: ಬಾಲಿವುಡ್ ನಟ ಅಲೋಕ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

Pinterest LinkedIn Tumblr

ಮುಂಬೈ: ಬಾಲಿವುಡ್ ನಲ್ಲಿ ಅತ್ಯಂತ ಸಭ್ಯ ಹಾಗೂ ಸಂಸ್ಕಾರಿ ನಟ ಎಂದೇ ಖ್ಯಾತಿಪಡೆದಿರುವ ಅಲೋಕ್ ನಾಥ್ ವಿರುದ್ಧ ಐಸಿಪಿ ಸೆಕ್ಷನ್ 376ರ ಅಡಿಯಲ್ಲಿ ಮುಂಬೈ ಪೊಲೀಸರು ಅತ್ಯಾಚಾರ ಪ್ರಕರಣವೊಂದನ್ನು ಬುಧವಾರ ದಾಖಲಿಸಿದ್ದಾರೆ.

20 ವರ್ಷಗಳ ಹಿಂದೆ ಅಲೋಕ್ ನಾಥ್ ಅವರು ನನ್ನ ಮೇಲೆ ಅತ್ಯಾಚಾರ ಮಾಡಿದ್ದರು ಎಂದು ಲೇಖಕಿ ಹಾಗೂ ನಿರ್ಮಾಪಕಿ ವಿಂತಾ ನಂದಾ ಅವರು ಈ ಹಿಂದೆ ಆರೋಪ ಮಾಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ವಿಂತಾ ನಂದಾ ಅವರು, ಈ ಸಂದರ್ಭಕ್ಕಾಗಿ ನಾನು 19 ವರ್ಷಗಳ ಕಾಲ ಕಾಯಬೇಕಾಯಿತು. 1990ರ ದಶಕದ ಖ್ಯಾತ ಸಂಸ್ಕಾರಿ ಮತ್ತು ಸುವಿಖ್ಯಾತ ಟಿವಿ ನಟನಿಂದ ನನ್ನ ಮೇಲೆ 2 ದಶಕಗಳ ಹಿಂದೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಹೇಳಿಕೊಂಡಿದ್ದರು. ವಿಂತಾ ನಂದಾ ಅವರ ಈ ಆರೋಪ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು.

ಬಳಿಕ ಅಲೋಕ್ ನಾಥ್ ಅವರು ವಿಂತಾ ನಂದಾ ಅವರಿಗೆ ಮಾನನಷ್ಟ ಮೊಕದ್ದಮೆ ದಾಖಲಿಸಿ, ನೋಟಿಸ್ ಜಾರಿ ಮಾಡಿದ್ದರು.

Comments are closed.