ಕರಾವಳಿ

ಅಮಿತ್ ಶಾರಿಂದ ನಳಿನ್ ಕುಮಾರ್ ಅವರ ಜನಸೇವೆಯನ್ನು ಬಿಂಬಿಸುವ ‘ಮೋದಿಯ ಹಾದಿಯಲ್ಲಿ 4ನೇ ವರ್ಷ’ ಪುಸ್ತಕ ಬಿಡುಗಡೆ

Pinterest LinkedIn Tumblr

ಮಂಗಳೂರು, ನವೆಂಬರ್.16:ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಭೆಯಲ್ಲಿ ಪಾಲ್ಗೊಳ್ಳಲು ಬುಧವಾರ ಮಂಗಳೂರಿಗೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಗುರುವಾರ ಬೆಳಗ್ಗೆ ಸಂಸದರಾಗಿ ನಳಿನ್ ಕುಮಾರ್ ಅವರ ನಾಲ್ಕು ವರ್ಷಗಳ ಜನಸೇವೆಯನ್ನು ಬಿಂಬಿಸುವ ‘ಮೋದಿಯ ಹಾದಿಯಲ್ಲಿ 4ನೇ ವರ್ಷ’ ಪುಸ್ತಕವನ್ನು ಬಿಡುಗಡೆಗೊಳಿಸಿದರು.

ಬುಧವಾರ ರಾತ್ರಿ 8:30ರ ಸುಮಾರಿಗೆ ಮಂಗಳೂರಿಗೆ ಆಗಮಿಸಿದ ಅಮಿತ್ ಶಾ ನಗರದ ಸಂಘ ನಿಕೇತನದಲ್ಲಿ ನಡೆಯುತ್ತಿರುವ ಆರೆಸ್ಸೆಸ್ ದಕ್ಷಿಣ ಭಾರತ ಮಟ್ಟದ ಬೈಠಕ್‌ನಲ್ಲಿ ಪಾಲ್ಗೊಂಡಿದ್ದರು. ತಡ ರಾತ್ರಿ (ಮುಂಜಾನೆಯವರೆಗೆ) ಎರಡು ಗಂಟೆಯವರೆಗೆ ನಡೆದ ಆರೆಸ್ಸೆಸ್ ಬೈಠಕ್‌ನಲ್ಲಿ ಪಾಲ್ಗೊಂಡಿದ್ದ ಶಾ ಅವರು ಬಳಿಕ ನಗರದ ಓಶಿಯನ್ ಪರ್ಲ್ ಹೋಟೇಲ್‌ನಲ್ಲಿ ಉಳಿದುಕೊಂಡಿದ್ದರು.

ಗುರುವಾರ ಬೆಳಗ್ಗೆ ಓಶಿಯನ್ ಪರ್ಲ್ ಪ್ರಾಂಗಣದಲ್ಲಿ ನಳಿನ್ ಕುಮಾರ್ ಅವರ ನಾಲ್ಕು ವರ್ಷಗಳ ಜನಸೇವೆಯನ್ನು ಬಿಂಬಿಸುವ ‘ಮೋದಿಯ ಹಾದಿಯಲ್ಲಿ 4ನೇ ವರ್ಷ’ ಪುಸ್ತಕವನ್ನು ಬಿಡುಗಡೆಗೊಳಿಸಿದ ಅಮಿತ್ ಶಾ ಅವರು ಮತ್ತೆ ಮತ್ತೆ ಸಂಘ ನಿಕೇತನಕ್ಕೆ ತೆರಳಿದರು.

ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ಮುಖಂಡ ಹರಿಕೃಷ್ಣ ಬಂಟ್ವಾಳ್ ಹಾಗೂ ಮತ್ತಿತ್ತರ ಪ್ರಮುಖರು ಉಪಸ್ಥಿತರಿದ್ದರು. ಪುಸ್ತಕ ಬಿಡುಗಡೆ ಬಳಿಕ ಹೋಟೆಲ್‌ನಿಂದ ಮತ್ತೆ ಸಂಘ ನಿಕೇತನಕ್ಕೆ ತೆರಳಿದ ಅಮಿತ್ ಶಾ ಅಲ್ಲಿ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಜೋಶಿ ಜೊತೆ ಮಾತುಕತೆ ನಡೆಸಿ, ಬಳಿಕ ಅಲ್ಲಿಂದ ದಿಲ್ಲಿಯತ್ತ ಪಯಣ ಆರಂಭಿಸಿದರು.

Comments are closed.