ಕರಾವಳಿ

ಟಿಪ್ಪು ಬಗ್ಗೆ ಮಾತನಾಡಿದವರನ್ನು ಬಂಧಿಸುವ ಸರಕಾರ ಹಿಂದೂ ಧರ್ಮದ ಬಗ್ಗೆ ಟೀಕಿಸುವವರನ್ನು ಯಾಕೆ ಬಂಧಿಸಿಲ್ಲ :ಶಾಸಕ ಸಿ.ಟಿ.ರವಿ ಕಿಡಿ

Pinterest LinkedIn Tumblr

ಮಂಗಳೂರು, ನವೆಂಬರ್ .15: ರಾಜ್ಯದ ಸಮ್ಮಿಶ್ರ ಸರಕಾರ ಟಿಪ್ಪು ಕುರಿತು ಸಂತೋಷ್ ತಮ್ಮಯ್ಯ ಗೋಣಿಗೊಪ್ಪದಲ್ಲಿ ನೀಡಿದ ಹೇಳಿಕೆ ಆರೋಪದಲ್ಲಿ ಮಧ್ಯರಾತ್ರಿ ಅವರನ್ನು ಬಂಧಿಸುವ ಮೂಲಕ ತನ್ನ ಸಾಮರ್ಥ್ಯ ತೋರಿದೆ. ಆದರೆ ರಾಮನ ಬಗ್ಗೆ, ಹಿಂದೂ ಧರ್ಮದ ಬಗ್ಗೆ ಟೀಕಿಸಿದ್ದವರನ್ನು ಯಾಕೆ ಬಂಧಿಸಿಲ್ಲ ಎಂದು ಶಾಸಕ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಇಂತಹ ವಿಚಾರದಲ್ಲಿ ರಾಜ್ಯದ ಸಮ್ಮಿಶ್ರ ಸರಕಾರ ಇಬ್ಬಗೆ ನೀತಿ ಅನುಸರಿಸುತ್ತಿದೆ. ಸಂತೋಷ್ ಬಂಧನವನ್ನು ಬಿಜೆಪಿ ಖಂಡಿಸುತ್ತದೆ. ಸಮ್ಮಿಶ್ರ ಸರಕಾರ ಸಿಸಿಬಿ- ಸಿಒಡಿಗಳನ್ನು ಕೂಡಾ ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿದರು.

ಯುಪಿಎ ಸರಕಾರವಿದ್ದಾಗ ದೇಶದಲ್ಲಿ ಶೇ. 36 ಶೌಚಾಲಯ‌ ನಿರ್ಮಾಣವಾಗಿತ್ತು. ಆದರೆ,‌ ಎನ್‌ಡಿಎ ಸರಕಾರದ ಮೂಲಕ ಶೇ. 96 ರಷ್ಟು ಶೌಚಾಲಯ ನಿರ್ಮಾಣವಾಗಿದೆ. ಕಾಂಗ್ರೆಸ್ ಸರಕಾರವಿದ್ದಾಗ 3.43 ಕೋಟಿ ಬೋಗಸ್ ಎಲ್‌ಪಿಜಿ ಕನೆಕ್ಷನ್ ಪತ್ತೆಯಾಗಿತ್ತು. ಆದರೆ, ಬಿಜೆಪಿ ಸರಕಾರದಲ್ಲಿ 11 ಕೋಟಿ ಎಲ್‌ಪಿಜಿ ಕನೆಕ್ಷನ್ ಪೈಕಿ ಬಡವರಿಗೆ 5 ಲಕ್ಷ ಉಚಿತ ಎಲ್‌ಪಿಜಿ ಸಂಪರ್ಕ ನೀಡಲಾಗಿದೆ ಎಂದು ಸಿ.ಟಿ.ರವಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ಮುಖಂಡರಾದ ಪ್ರತಾಪ್‌ ಸಿಂಹ ನಾಯಕ್, ಬ್ರಿಜೇಶ್ ಚೌಟ ಮೊದಲಾದವರು ಉಪಸ್ಥಿತರಿದ್ದರು.

Comments are closed.