ಕರಾವಳಿ

ಮಂಗಳೂರು ಪೊಲೀಸರಿಂದ ವಾಹನಗಳ ಟಿಂಟ್ ತೆರವು ಕಾರ್ಯಾಚರಣೆ ಆರಂಭ

Pinterest LinkedIn Tumblr

ಮಂಗಳೂರು, ನವೆಂಬರ್.14: ನಗರದಲ್ಲಿ ಕಾನೂನು ಬಾಹಿರವಾಗಿ ವಾಹನಗಳ ಗಾಜಿಗೆ ( ಸನ್ ಫಿಲ್ಮ್) ಟಿಂಟ್ ಬಳಕೆ ಮಾಡಿ ಸಂಚರಿಸುವ ವಾಹನಗಳ ವಿರುದ್ಧ ನಗರ ಸಂಚಾರ ಎಸಿಪಿ ಮತ್ತು ಅಧಿಕಾರಿಗಳ ನೇತ್ರತ್ವದ ತಂಡ ವಿಶೇಷ ಕಾರ್ಯಾಚರಣೆ ನಡೆಸಿ 20ಕ್ಕೂ ಹೆಚ್ಚು ವಾಹನಗಳ ಟಿಂಟ್ ತೆರವು ಮಾಡಿದ್ದಾರೆ.

ವಾಹನಗಳ ಗಾಜುಗಳಿಗೆ ಟಿಂಟ್ ಬಳಕೆ ಮಾಡಿ ಸಂಚರಿಸುವ ವಾಹನಗಳ ಟಿಂಟ್ ಪೇಪರ್ ತೆಗೆದು ಹಾಕುವಂತೆ ಸುಪ್ರೀಂ ಕೋರ್ಟ್ ಅದೇಶ ಹೊರಡಿಸಿದ ಬಳಿಕ ಟಿಂಟ್ ಪೇಪರ್ ಅಳವಡಿಸುವ ಕ್ರಮ ಕಡಿಮೆಯಾಗಿತ್ತು. ಕೋರ್ಟ್ ಆದೇಶವಾಗಿ ವರ್ಷ ಕಳೆದಿದ್ದು, ಇದೀಗ ವಾಹನ ಸವಾರರು ಮತ್ತೆ ಟಿಂಟ್ ಬಳಕೆ ಮಾಡಲು ಆರಂಭ ಮಾಡಿರುವ ಹಿನ್ನೆಲೆಯಲ್ಲಿ ಹಾಗೂ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ನಗರ ಸಂಚಾರ ಅಧಿಕಾರಿ ಮತ್ತು ಸಿಬ್ಬಂದಿ ಸಂಚಾರ ಎಸಿಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಸನ್‌ ಫಿಲ್ಮ್ ಅಳವಡಿಸಿದ ವಾಹನಗಳನ್ನು ವಿಶೇಷ ಕಾರ್ಯಾಚರಣೆ ಟಿಂಟ್ ತೆರವು ಮಾಡಿದ್ದಾರೆ.

ಟಿಂಟ್ ಬಳಕೆ ಮಾಡಿದ ವಾಹನಗಳು ಪತ್ತೆಯಾದರೆ ಈ ಹಿಂದೆ 100 ರೂ. ದಂಡ ವಿಧಿಸಲಾಗುತ್ತಿದೆ. ಆದರೆ ಇತ್ತೀಚಿಗೆ ವಾಹನದಲ್ಲಿ ಟಿಂಟ್ ಬಳಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು. ಈ ಬಗ್ಗೆ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲೂ ಸಾರ್ವಜನಿಕರು ಪ್ರಶ್ನೆ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಂಗಳೂರು ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ವಾಹನಗಳ ಟಿಂಟ್ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.

Comments are closed.