ರಾಷ್ಟ್ರೀಯ

ತಿರುಪತಿ ತಿಮ್ಮಪ್ಪನ ಹುಂಡಿಗೆ ದಿನಕ್ಕೆ ಎಷ್ಟು ಕೋಟಿ ರೂ. ಬೀಳುತ್ತಿದೆ ಗೊತ್ತಾ…?

Pinterest LinkedIn Tumblr

ಜಗತ್ತಿನ ಶ್ರೀಮಂತ ದೇವರುಗಳಲ್ಲೇ ಅಗ್ರಸ್ಥಾನ ತಿರುಪತಿಯ ತಿಮ್ಮಪ್ಪನ ಆದಾಯ. ದಿನಕ್ಕೆ ಕೋಟ್ಯಾಂತರ ರೂ ಆದಾಯವನ್ನ ಈ ದೇವಾಲಯಗಳಿಸುತ್ತಿದೆ. ಅದರಲ್ಲಿಯೂ ದಿನವೊಂದಕ್ಕೆ 4 ಕೋಟಿ ರೂಗಳಿಗೆ ಮಾಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.

ತಿರುಪತಿ ತಿಮ್ಮಪ್ಪ ದರ್ಶನಕ್ಕೆ ಬರುವ ಭಕ್ತರು ಹಾಗೂ ಕಾಣಿಕೆ ಸಂಖ್ಯೆ ಇತ್ತೀಚೆಗೆ ಏರುತ್ತಲೆ ಇದೆ, ಮಂಗಳವಾರ ತಿರುಪತಿ ವೆಂಕಟೇಶ್ವರನ ಹುಂಡಿಯಲ್ಲಿ ದಿನವೊಂದಕ್ಕೆ 4.4 ಕೋಟಿ ರೂ ಹಣ ಹುಂಡಿಯಲ್ಲಿ ಸಂಗ್ರಹವಾಗಿದೆ.

ಇದೇ ತಿಂಗಳ 10ನೇ ತಾರೀಖಿನಂದು 2.90 ಕೋಟಿ ರೂ, 11ನೇ ತಾರೀಖಿನಂದು 1.13 ಕೋಟಿ ರೂ ಹಾಗೂ 12ನೇ ತಾರೀಖಿನಂದು 2.50 ಕೋಟಿ ರೂ ಹಣ ಸಂಗ್ರಹವಾಗಿತ್ತು.

ಕಳೆದ ಜುಲೈ 6ರಂದು ದಿನವೊಂದಕ್ಕೆ 6.28 ಕೋಟಿ ರೂ ಹಣ ಹುಂಡಿಯಲ್ಲಿ ಸಂಗ್ರಹವಾಗುವ ಮೂಲಕ ದಾಖಲೆ ನಿರ್ಮಾಣವಾಗಿತ್ತು.

ಇದಕ್ಕೂ ಮೊದಲು ಶ್ರೀರಾಮನವಮಿಯ ದಿನವಾ ಏಪ್ರಿಲ್ 1ರಂದು ದಿನಕ್ಕೆ 5.73 ಕೋಟಿ ರೂ ಹಣ ಸಂಗ್ರಹವಾಗಿತ್ತು.

ಜನವರಿ 1,2012ರಂದು 4.23 ಕೋಟಿ ರೂ ಸಂಗ್ರಹವಾದ ದಾಖಲೆ ಕೂಡ ಇದೆ. ಮಂಗಳವಾರ 60,907 ಭಕ್ತರು ವೆಂಕಟೇಶ್ವರನ ದರ್ಶನ ಪಡೆದಿದ್ದರು.

Comments are closed.