ಕರಾವಳಿ

ವಿದ್ಯುತ್ ಅವಘಢ : ಮನೆಗೆ ಬೆಂಕಿ ತಗುಲಿ ಮಲಗಿದ್ದ ಮಹಿಳೆ ಸಜೀವ ದಹನ

Pinterest LinkedIn Tumblr

ಬಂಟ್ವಾಳ, ಅಕ್ಟೋಬರ್. 28: ಆಕಸ್ಮಿಕವಾಗಿ ಮನೆಗೆ ಬೆಂಕಿ ತಗುಲಿ ಮನೆಯೊಳಗೆ ಮಲಗಿದ್ದ ಮಹಿಳೆಯೊಬ್ಬರು ಸಜೀವವಾಗಿ ದಹನಗೊಂಡ ಘಟನೆ ಬಂಟ್ವಾಳ ತಾಲೂಕಿನ ಕಾವಳ ಮೂಡೂರು ಎಂಬಲ್ಲಿ ಶನಿವಾರ ರಾತ್ರಿ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಆಕಸ್ಮಿಕ ವಿದ್ಯುತ್ ಅವಘಢದಿಂದ ಬೆಂಕಿ ತಗುಲಿ ಸಜೀವವಾಗಿ ದಹನಗೊಂಡ ಮೃತ ಮಹಿಳೆಯನ್ನು ಕಾವಳ ಮೂಡುರು ನಿವಾಸಿ ರೇವತಿ (40) ಎಂದು ಗುರುತಿಸಲಾಗಿದೆ.

ಕಾವಳ ಮೂಡೂರು ಸಮೀಪದ ಮನೆಯೊಂದರಲ್ಲಿ ತನ್ನ ತಾಯಿ ಜೊತೆಗೆ ವಾಸವಿದ್ದ ರೇವತಿ ಮನೆಯಲ್ಲಿ ಮಲಗಿದ್ದ ವೇಳೆ ವಿದ್ಯುತ್ ಅವಘಢದಿಂದ ಉಂಟಾದ ಬೆಂಕಿಯೂ ಮನೆಯೊಳಗೆ ರಾಶಿ ಹಾಕಿದ್ದ ಕಟ್ಟಿಗೆಗೆ ತಗಲಿದ್ದು, ಪರಿಣಾಮ ಹತ್ತಿರದಲ್ಲಿಯೇ ಮಲಗಿದ್ದ ರೇವತಿ ಅವರಿಗೂ ಬೆಂಕಿ ತಗುಲಿ ಸುಟ್ಟು ಕರಕಲಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಪುಂಜಾಲಕಟ್ಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.