ಕರಾವಳಿ

ವಿದ್ಯಾರ್ಥಿನಿಯಿಂದ ಖೈದಿಗೆ ಗಾಂಜಾ ಪೂರೈಕೆ ಪ್ರಕರಣ : ಲವ್ ಜಿಹಾದ್ ಶಂಕೆ ವ್ಯಕ್ತಪಡಿಸಿರುವ ಬಜರಂಗದಳ

Pinterest LinkedIn Tumblr

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಜೈಲಿನಲ್ಲಿರುವ ಮುಸ್ತಫಾ ಎಂಬವನಿಗೆ ಗಾಂಜಾ ಪೂರೈಕೆ ಮಾಡುವ ಸಂಧರ್ಭದಲ್ಲಿ ಪೋಲೀಸರ ಕೈಗೆ ಸಿಕ್ಕಿಬಿದ್ದ ಈ ಪ್ರಕರಣದ ಹಿಂದೆ ಲವ್ ಜಿಹಾದ್ ನ ಶಂಕೆಯನ್ನು ಬಜರಂಗದಳ ವ್ಯಕ್ತಪಡಿಸಿದೆ.

ಪ್ರೀತಿ ಪ್ರೇಮಕ್ಕೆ ಬಲಿಯಾಗಿ ಈ ಹುಡುಗಿ ಮುಸ್ತಾಫಾನ ಮೋಸದ ಬಲೆಗೆ ಬಿದ್ದು ಅವನ ಬ್ಲಾಕ್ ಮೇಲ್ ಗೆ ಹೆದರಿ ಈ ಜಾಲಕ್ಕೆ ಬಲಿಯಾಗಿರಬಹುದು. ಈ ಲವ್ ಜಿಹಾದಿನಿಂದಾಗಿ ಹಲವು ಹಿಂದು ಹುಡಿಗಿಯರು ಡ್ರಗ್ ಮಾಫಿಯಾ, ಸೆಕ್ಸ್ ಮಾಫಿಯಾ, ಭಯೋದ್ಪಾದನಾ ಚಟುವಟಿಕೆಗಳಿಗೆ ಬಲಿಯಾದ ಉಧಾಹರಣೆಗಳಿವೆ.

ಎರಡು ಕೊಲೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗೆ ಗಾಂಜಾ ಪೂರೈಸುವಂತಹ ಹೇಯ ಕೃತ್ಯಕ್ಕೆ ಓರ್ವ ಸ್ನಾತಕೋತರ ವಿದ್ಯಾರ್ಥಿನಿ ಬಲಿಯಾಗಬೇಕಾದರೆ ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರ ಇರಬಹುದೆಂದು ಬಜರಂಗದಳ ಭಾವಿಸುತ್ತದೆ, ಈ ಪ್ರಕರಣವು ಅತ್ಯಂತ ಕಳವಳಕಾರಿಯಾಗಿದೆ ಆದುದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ತನಿಖೆ ನಡೆಸಬೇಕೆಂದು ಬಜರಂಗದಳ ಆಗ್ರಹಿಸುತ್ತದೆ ಎಂದು ಬಜರಂಗದಳವು ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

Comments are closed.