ಕರಾವಳಿ

ವಿಎಚ್‌ಪಿ ಮುಖಂಡ ಹರೀಶ್ ಶೆಟ್ಟಿ ಕೊಲೆಯತ್ನ ಪ್ರಕರಣ : ಮತ್ತೆ ಮೂವರ ಸೆರೆ – ಬಂಧಿತರ ಸಂಖ್ಯೆ 6ಕ್ಕೇರಿಕೆ

Pinterest LinkedIn Tumblr

ಮಂಗಳೂರು, ಅಕ್ಟೋಬರ್.08: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಗುರುಪುರ ಸೂರಲ್ಪಾಡಿ ಬಳಿ ವಿಶ್ವಹಿಂದೂ ಪರಿಷದ್ ಅಧ್ಯಕ್ಷರಾದ ಹರೀಶ್ ಶೆಟ್ಟಿಯವರ ಮೇಲೆ ನೆಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಮೂವರು ಆರೋಪಿಗಳನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ರೌಡಿಶೀಟರ್ ಉಳಾಯಿಬೆಟ್ಟು ನಿವಾಸಿ ಮುಹಮ್ಮದ್ ಖಾಲಿದ್(30),ಸೂರಲ್ಪಾಡಿ ನಿವಾಸಿ ಮುಹಮ್ಮದ್ ಶಮೀರ್ (27) ಹಾಗೂ ಕೊಳಂಬೆ ಕಜೆಪದವು ನಿವಾಸಿ ಇಸಾನ್ (21) ಎಂದು ಗುರುತಿಸಲಾಗಿದೆ.

ಹರೀಶ್ ಶೆಟ್ಟಿ

ದಿನಾಂಕ 24.09.2018 ರಂದು ಮಂಗಳೂರು ಹೊರವಲಯದ ಬಜಪೆ ಕೈಕಂಬ ನಿವಾಸಿ ಹರೀಶ್ ಶೆಟ್ಟಿ ಯವರು ಕೈಕಂಬದಿಂದ ತನ್ನ ಕೆಲಸ ಮುಗಿಸಿ ರಾತ್ರಿ ಮನೆಗೆ ತೆರಳುತಿದ್ದ ವೇಳೆ ಸೂರಲ್ಪಾಡಿ ಬಳಿಯಲ್ಲಿ ಮೋಟಾರ್ ಸೈಕಲ್ ನಲ್ಲಿ ಮಾರಾಕಾಯುಧಗಳೊಂದಿಗೆ ಬಂದ ವ್ಯಕ್ತಿಗಳು ಹರೀಶ್ ಶೆಟ್ಟಿಯವರಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದು, ಈ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೇ ಪ್ರಕರಣದಲ್ಲಿ ಅ.2ರಂದು ಶರೀಫ್ (24) ಸಿಫಾಝ್ (26) ಆರಿಫ್ (28) ಎಂಬವರನ್ನು ಬಂಧಿಸಲಾಗಿತ್ತು. ಹರೀಶ್ ಶೆಟ್ಟಿ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಈ ಮೂವರ ಬಂಧನದೊಂದಿಗೆ ಬಂಧಿತರ ಸಂಖ್ಯೆ 6ಕ್ಕೇರಿದೆ.

ಕಾರ್ಯಾಚರಣೆಯಲ್ಲಿ ಬಜಪೆ ಠಾಣಾ ಇನ್‌ಸ್ಪೆಕ್ಟರ್ ಎಸ್.ಪರಶಿವಮೂರ್ತಿ, ಎಸ್‌ಐ ಶಂಕರ ನಾಯರಿ, ಎಎಸ್‌ಐ ರಾಮಚಂದ್ರ, ಹೆಡ್‌ಕಾನ್‌ಸ್ಟೇಬಲ್ ಚಂದ್ರಮೋಹನ್, ರಾಜೇಶ್, ಪ್ರೇಮಾನಂದ, ಶಶಿಧರ್ ಮತ್ತಿತರರು ಭಾಗವಹಿಸಿದ್ದರು.

Comments are closed.