ರಾಷ್ಟ್ರೀಯ

ಮೊಬೈಲ್‌ನಲ್ಲಿ ನೀಲಿಚಿತ್ರ ವೀಕ್ಷಿಸಿ 5ರ ಬಾಲೆಯ ಮೇಲೆ 12ರ ಬಾಲಕನಿಂದ ಅತ್ಯಾಚಾರ

Pinterest LinkedIn Tumblr


ಬರೇಲಿ: 12 ವರ್ಷದ ಬಾಲಕನೊಬ್ಬ ತನ್ನ ನೆರೆಮನೆ ನಿವಾಸಿಯಾಗಿರುವ 5 ವರ್ಷದ ಬಾಲಕಿಯ ಮೇಲೆ ಆತ್ಯಾಚಾರ ಎಸಗಿದ ಬೆಚ್ಚಿಬೀಳಿಸುವ ಪ್ರಕರಣ ಉತ್ತರ ಪ್ರದೇಶದಲ್ಲಿ ನಡೆದಿದೆ.

ದೇವರಾನಿಯಾ ಪೊಲೀಸ್ ಠಾಣೆ ವ್ಯಾಪ್ತಿಯಡಿ ಬರುವ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಹೇಳಿರುವ ಪ್ರಕಾರ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದ ಬಾಲಕ ಅತ್ಯಾಚಾರ ಎಸಗಿದ್ದಾನೆ. ದುಷ್ಕೃತ್ಯ ನಡೆದಾಗ ಎರಡು ಕುಟುಂಬದ ಸದಸ್ಯರು ಮನೆಯಲ್ಲಿರಲಿಲ್ಲ ಎಂದು ತಿಳಿದುಬಂದಿದೆ.

ಶುಕ್ರವಾರ ಬಾಲಕಿ ನಡೆದ ಘಟನೆಯನ್ನು ತಾಯಿ ವಿವರಿಸಿದ್ದಾಳೆ. ಬಳಿಕ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಪೋಕ್ಸೋ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು, ಕೃತ್ಯ ನಡೆದಿರುವುದು ಸಾಬೀತಾಗಿದೆ.

ಚಾಕಲೇಟು ಕೊಡಿಸುವ ನೆಪದಲ್ಲಿ ಬಾಲಕಿಯನ್ನು ಕರೆದೊಯ್ದ ಬಾಲಕ ಈ ಕೃತ್ಯವನ್ನೆಸಗಿದ್ದಾನೆ. ಪ್ರಕರಣ ಬೆಳಕಿಗೆ ಬಂದ ಮೇಲೆ ಸಂತ್ರಸ್ತೆಯ ತಾಯಿ ಮತ್ತು ನೆರೆಹೊರೆಯವರು ಬಾಲಕನ ಮನೆಗೆ ಹೋದಾಗ ಆತ ಅಲ್ಲಿಂದ ಪರಾರಿಯಾಗಿದ್ದ. ಆತನನ್ನು ವಶಕ್ಕೆ ತೆಗೆದುಕೊಂಡು ಬಾಲಾಪರಾಧಿ ಸುಧಾರಣಾಗೃಹಕ್ಕೆ ಕಳುಹಿಸಲಾಗಿದೆ. ತನ್ನ ಸ್ನೇಹಿತರ ಮತ್ತು ಸಂಬಂಧಿಗಳ ಮೊಬೈಲ್‌ನಲ್ಲಿ ನೀಲಿಚಿತ್ರ ವೀಕ್ಷಿಸುತ್ತಿದ್ದ ಆತ, ಅದರ ಪ್ರಭಾವಕ್ಕೊಳಗಾಗಿ ಹೀಗೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.