UAE

ದುಬೈಯಲ್ಲಿ ಪದ್ಮಶಾಲಿ ಸಮುದಾಯದವರಿಂದ ಸತ್ಯನಾರಾಯಣ ಪೂಜೆ

Pinterest LinkedIn Tumblr

ದುಬೈ: ಯುಎಇ ಪದ್ಮಶಾಲಿ ಸಮುದಾಯವು ತನ್ನ 15 ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಪದ್ಮಶಾಲಿ ಸಮಾಜದ ಅಧ್ಯಕ್ಷರಾದ ರಘುರಾಮ್ ಶೆಟ್ಟಿಗಾರ್, ಕುಕ್ಕಿಕಟ್ಟೆ ಇವರ ನೇತೃತ್ವದಲ್ಲಿ ಸತ್ಯನಾರಾಯಣ ಪೂಜಾ ಕೈಂಕರ್ಯವನ್ನು ಬಹಳ ಅದ್ದೂರಿಯಾಗಿ ಭಕ್ತಿ ಶ್ರದ್ಧೆಗಳಿಂದ ಅಕ್ಟೋಬರ್ 20 ರಂದು ದುಬೈಯ ಸಿಂಧಿ ಸರೆಮೋನಿಯಲ್ ಸೆಂಟರ್ ನಲ್ಲಿ ನೆರವೇರಿತು.

ಈ ಕಾರ್ಯಕ್ರಮವು ಬೆಳಿಗ್ಗೆ 10.00 ಗಂಟೆಗೆ ಸಂಕಲ್ಪ, ಕಲಶ ಪ್ರತಿಷ್ಠಾಪನೆ ಹಾಗು ಮಹಿಳಾ ಸದಸ್ಯರಿಂದ ದೀಪ ಬೆಳಗಿಸುವುದರೊಂದಿಗೆ ಪ್ರಾರಂಭವಾಯಿತು. ಪದ್ಮಶಾಲಿಗಳ ಪರವಾಗಿ ಸತೀಶ್ ಶೆಟ್ಟಿಗಾರ್ ಮತ್ತು ಅನುಷ ಸತೀಶ್ ಶೆಟ್ಟಿಗಾರ್ ದಂಪತಿಗಳು ಪೂಜೆಗೆ ಕುಳಿತುಕೊಂಡಿದ್ದರು. ಪುರೋಹಿತರಾದ ರಘುರಾಜ್ ಭಟ್ ಅವರು ಪೂಜೆಯನ್ನು ನೆರವೇರಿಸಿದರು.

ಮನೋಹ‌ರ್ ಶೆಟ್ಟಿಗಾರ್‌ರವರ ನೇತ್ರತ್ವದ ಭಜನಾ ತಂಡವು ಭಜನಾ ಕಾರ್ಯಕ್ರಮವನ್ನು ಬಹಳ ಸುಮಧುರವಾಗಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಘದ ಸ್ಥಾಪಕ ಅಧ್ಯಕ್ಷರಾದ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭದ ಅಧ್ಯಕ್ಷರಾಗಿ ಸರ್ವಾನು ಮತದಿಂದ ಚುನಾಯಿತರಾಗಿರುವ ಶ್ರೀ ರವಿ ಶೆಟ್ಟಿಗಾರರು ಭಾಗವಹಿಸದ್ದರು. ಅವರು ತಮ್ಮ ಭಾಷಣದಲ್ಲಿ ತಮ್ಮ ಯಶಸ್ಸಿಗೆ ಯುಎಇ ಪದ್ಮಶಾಲಿ ಸಮುದಾಯ ಇದರ ಸಾಮಾಜಿಕ ಚಟುವಟಿಕೆಗಳು ಹಾಗು ಅದರಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರು ಮತ್ತು ಸದಸ್ಯರ ಶ್ರಮ ಬಹಳಷ್ಟಿದೆ ಎಂದು ಹೇಳಿದರು. ತನಗೆ ಶುಭಕೋರಿದ ಎಲ್ಲಾ ಸದಸ್ಯರಿಗೆ ಹಾಗೂ ಅತಿಥಿಗಳಿಗೆ ಧನ್ಯವಾದಗಳನ್ನು ಸಮರ್ಪಿಸಿದರು. ರವಿ ಶೆಟ್ಟಿಗಾರರನ್ನು ಅಭಿನಂದಿಸಿ ಮಾತನಾಡಿದ ಅಧ್ಯಕ್ಷರಾದ ರಘುರಾಮ್ ಶೆಟ್ಟಿಗಾರರು ಮುಂದಿನ ದಿನಗಳಲ್ಲಿಯೂ ಯುಎಇಯ ಪದ್ಮಶಾಲಿ ಸಮಾಜದ ಸಹಕಾರವು ನಿಮ್ಮೊಡನೆ ಇರಲಿದೆ ಎಂದು ತಿಳಿಸಿದರು. ಇಂದಿನ ಸತ್ಯನಾರಾಯಣ ಪೂಜೆಯು ಯುಎಇಯಲ್ಲಿ ನೆಲೆಸಿರುವ ಪದ್ಮಶಾಲಿ ಯುವ ಪೀಳಿಗೆಗೆ ಮತ್ತು ಮಕ್ಕಳಿಗೆ ಸನಾತನ ಧರ್ಮದ ಆಚರಣೆಯ ಬಗ್ಗೆ ತಿಳುವಳಿಕೆ ಮೂಡಿಸಲು ಅತ್ಯಂತ ಮಹತ್ವದ್ದಾಗಿದೆ, ಇದರಿಂದ ಅವರು ಆಧ್ಯಾತ್ಮಿಕ ಚಟಿವಟಿಕೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಲು ಸಹಾಯವಾಗುತ್ತದೆ ಎಂದು ಹೇಳಿದರು. ಕೀರ್ತಿ ಕುಮಾರ್ ರವರು ಧನ್ಯವಾದವನ್ನು ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ಯುಎಇಯಲ್ಲಿರುವ ವಿವಿಧ ಸಂಘ ಸಂಸ್ಥೆಗಳ ಅದ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಮಹನೀಯರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.

ಕಾರ್ಯಕಾರಿ ಸಮಿತಿಯ ಸದಸ್ಯರಾದ ವರದ್ ರಾಜ್ ಶೆಟ್ಟಿಗಾರ್, ಶ್ರೀಮತಿ ಅರುಂಧತಿ ಮನೋಹರ್, ಕೀರ್ತಿ ಕುಮಾರ್, ಮನಿಷ್ ಪದ್ಮಶಾಲಿ, ಅರವಿಂದ್ ಶೆಟ್ಟಿಗಾರ್, ಅವಿನ್ ಶೆಟ್ಟಿಗಾರ್ ಹಾಗೂ ಪುರಂದರ ಶೆಟ್ಟಿಗಾರರು ವಿವಿಧ ಕಾರ್ಯಕರ್ತರ ತಂಡಗಳ ನೇತ್ರತ್ವವನ್ನು ವಹಿಸಿ ಕಾರ್ಯಕ್ರಮವು ಶಿಸ್ತು ಬದ್ಧವಾಗಿ ನಡೆಸಲು ಸಹಕರಿಸಿದರು.

Comments are closed.