ಮಂಗಳೂರು : ಕ್ಷೇತ್ರ ಜನಸಂಪರ್ಕ ಕಾರ್ಯಾಲಯ , ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ, ಮಂಗಳೂರು ಇಲಾಖೆಯು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾವೂರು, ಆಂತರಿಕ ಗುಣಮಟ್ಟ ಭರವಸಾ ಕೋಶ, ವಿದ್ಯಾರ್ಥಿ ಪರಿಷತ್ತು, ಜಾಗೃತಿ ಗ್ರಾಹಕ ವೇದಿಕೆ ಹಾಗೂ ಇಕೋ ಕ್ಲಬ್ ಇವರುಗಳ ಸಹಯೋಗದಲ್ಲಿ ಸ್ವಚ್ಛತೆಯ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಸೆಪ್ಟಂಬರ್ 29 ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾವೂರು ಇಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸ್ವಚ್ಛ ಭಾರತ ಆಭಿಯಾನ ಅಕ್ಟೋಬರ್ 2 ರಂದು ದೇಶದ್ಯಾಂತ ಪ್ರಾರಂಭವಾಯಿತು. ಪ್ರತಿಯೊಬ್ಬ ವ್ಯಕ್ತಿಯು ಪರಿಸರದ ಸ್ವಚ್ಛತೆಯ ಅರಿವು ಬಂದಾಗಲೇ ಸ್ವಚ್ಚ ಭಾರತ ಅಭಿಯಾನ ಸಫಲವಾಗುವುದು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಮಧುಕಿರಣ್ ಇವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಪ್ರಸ್ತಾವಿಕ ನುಡಿಯಲ್ಲಿ ಕೆ.ಪಿ.ರಾಜೀವನ್, ಭಾರತೀಯ ವಾರ್ತಾ ಸೇವೆ, ಉಪನಿರ್ದೇಶಕರು ಇವರು ಸ್ವಷ್ಛತೆಯ ಕಾರ್ಯಕ್ರಮದಿಂದ ಪ್ರತಿಯೊಬ್ಬ ವಿದ್ಯಾರ್ಥಿಯು, ಮಾಹಿತಿ ಹೊಂದುವುದರ ಜೊತೆಗೆ ಅದನ್ನು ಇತರರಿಗೂ ನೀಡಬೇಕೆಂದು ತಿಳಿಸಿದರು. ಸ್ವಚ್ಛತೆಯು ಮೊದಲು ನಮ್ಮ ಹೃದಯದಿಂದ ಮೊದಲು ಪ್ರಾರಂಭವಾಗಬೇಕು. ‘ಸ್ವಚ್ಛ ಮನಸ್ಸು, ಸ್ವಚ್ಛ ಪರಿಸರ’ ವಾಗಬೇಕೆಂದು ತಿಳಿಸಿದರು.
ಸ್ವಚ್ಛತೆಯು ಸಂಸ್ಕøತಿಯ ಭಾಗ ಅದು ಜೀವನದ ಅಂಶವಾಗಬೇಕು, ಸ್ವಚ್ಛತೆಯು ಸಫಲವಾಗಬೇಕಾದರೆ ಮೊದಲು ನಮ್ಮ ಮನಸ್ಸಿನಲ್ಲಿ ಬದಲಾವಣೆಯಾಗಬೇಕು ಪರಿಸರವನ್ನು ಸ್ವಚ್ಛವಾಗಿಡುವುದೇ ನಮ್ಮ ದೇಶಕ್ಕೆ ನೀಡುವ ಕೊಡುಗೆಯಾಗಿದೆ. ನಮ್ಮ ತ್ಯಾಜ್ಯ ಸೂಕ್ತ ವಿಲೇವಾರಿ ಮಾಡುವುದು ನಮ್ಮ ಹೊಣೆಯಾಗಬೇಕೆಂದು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶ್ರೀಮತಿ ಮಂಜುಳಾ, ಜಿಲ್ಲಾಯೋಜನಾ ಸಂಯೋಜಕರು,ಸ್ವಚ್ಛ ಭಾರತ್ ಮಿಷನ್, ದಕ್ಷಿಣ ಕನ್ನಡ ಜಿಲ್ಲೆ ಕಾರ್ಯಕ್ರಮದಲ್ಲಿ ತಿಳಿಸಿದರು.
ಸ್ವಚ್ಛ ಭಾರತ ಅಭಿಯಾನದ ಉದ್ದೇಶ, ಘನ ತ್ಯಾಜ್ಯ ನಿರ್ವಹಣೆ, ಅಭಿಯಾನದಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ತಮ್ಮ ಭಾಷಣದಲ್ಲಿ ತಿಳಿಸಿದರು.
ಡಾ.ಯು. ತಾರಾರಾವ್ , ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆಕಾಲೇಜು ಇವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ, ಸ್ವಚ್ಛ ಭಾರತ ಸುಂದರ ಭಾರತವಾಗುದದರಲ್ಲಿ ವಿದ್ಯಾರ್ಥಿಗಳು,ಯುವಕರ ಪಾತ ಮುಖ್ಯವಾದುದು. ನಮ್ಮ ಮನೆಗಳಲ್ಲಿ ಉತ್ಪತ್ತಿಯಾಗುವ ಕಸಗಳನ್ನು ವಿಂಗಡಣೆ ಮಾಡಿ ಸರಿಯಾದ ರೀತಿಯಲ್ಲಿ ಅವುಗಳನ್ನು ವಿಸರ್ಜಿಸಬೇಕೆಂದು ಕಾರ್ಯಕ್ರಮದಲ್ಲಿ ತಿಳಿಸಿದರು
ಕಾರ್ಯಕ್ರಮದ ಪೂರ್ವಭಾವಿಯಾಗಿ ಸ್ವಚ್ಛ ಭಾರತದ ಕುರಿತು ಚಿತ್ರ ಕಲಾ ಪ್ರದರ್ಶನ, ಚಲನಚಿತ್ರ ಪ್ರದರ್ಶನ, ಛಾಯಾಚಿತ್ರ ಪದರ್ಶನ ಮತ್ತು ಜಾಗೃತಿ ಜಾಥವನ್ನು ನಡೆಸಲಾಯಿತು. ವಿದ್ಯಾರ್ಥಿಗಳನ್ನು ಒಳಗೊಂಡ ಜಾಥ ಕಾವೂರು ಜಂಕ್ಷನ್ ನಿಂದ ಪ್ರಾರಂಭವಾಗಿ ಗಾಂಧಿನಗರದವರೆಗೆ ನಡೆಯಿತು. ಕಾವೂರು ಸಬ್ ಇನ್ಸ್‍ಪೆಕ್ಟರ್ ರೋಜಮ್ಮ ಇವರು ಭಾಗವಹಿಸಿದ್ದರು.
ಸ್ವಚ್ಛ ಭಾರತದ ಅಭಿಯಾನದ ಕುರಿತು ವಿದ್ಯಾರ್ಥಿಗಳಿಗೆ ಹಲವಾರು ಸ್ಛರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನವನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
Comments are closed.