ಕರಾವಳಿ

ಅಕ್ರಮ ಮರಳು ದಾಸ್ತಾನು ಸ್ಥಳಕ್ಕೆ ಪೊಲೀಸರ ದಾಳಿ : 780 ಟನ್ ಮರಳು ವಶ

Pinterest LinkedIn Tumblr

ಮಂಗಳೂರು : ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ವಲಚ್ಚಿಲ್, ಅಡ್ಯಾರ್, ಮತ್ತು ಅರ್ಕುಳಗಳಲ್ಲಿ ಖಾಸಾಗಿ ಸ್ಥಳದಲ್ಲಿ ಸಾಮಾನ್ಯ ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡಿ ಇಟ್ಟಿದ್ದ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿ ಸುಮಾರು 780 ಟನ್ (ಸುಮಾರು 78 ಲೋಡ್) ಮರಳನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ವಲಚ್ಚಿಲ್, ಅಡ್ಯಾರ್, ಮತ್ತು ಅರ್ಕುಳ ಮುಂತಾದ ಸ್ಥಳಗಳಿಗೆ ಮಂಗಳೂರು ದಕ್ಷಿಣ ವಿಭಾಗದ ಎ.ಸಿ.ಪಿ. ರವರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹದಳ ಮತ್ತು ಮಂಗಳೂರು ಗ್ರಾಮಾಂತರ ಠಾಣಾ ಅಧಿಕಾರಿ/ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಅಕ್ರಮ ಮರಳು ದಾಸ್ತಾನು ಅಡ್ಡೆಯನ್ನು ಪತ್ತೆ ಮಾಡಿ ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಕರೆಸಿಕೊಂಡು ಸುಮಾರು 780 ಟನ್ (ಸುಮಾರು 78 ಲೋಡ್) ಮರಳನ್ನು ವಶಪಡಿಸಿಕೊಂಡಿರುತ್ತಾರೆ.

ಸ್ವಾಧೀನಪಡಿಸಿಕೊಂಡಿರುವ ಮರಳಿನ ಅಂದಾಜು ಒಟ್ಟು ಮೌಲ್ಯ ರೂ. 5,00,000/- ಆಗಿರುತ್ತದೆ. ಪತ್ತೆಯಾದ ಅಕ್ರಮ ಮರಳನ್ನು ಯಾರು ಯಾವ ಕಾರಣಕ್ಕಾಗಿ ಕಳವು ಮಾಡಿ ದಾಸ್ತಾನು ಮಾಡಿರುತ್ತಾರೆಯೇ ಎಂಬ ಬಗ್ಗೆ ತಿಳಿದುಕೊಳ್ಳಲು ತನಿಖೆ ಕೈಗೊಳ್ಳಲಾಗಿರುತ್ತದೆ. ಸದ್ರಿ ಮರಳನ್ನು ಮುಂದಿನ ಸೂಕ್ತ ಕ್ರಮಕ್ಕಾಗಿ ಉಪ-ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಂಗಳೂರು ರವರಿಗೆ ಹಸ್ತಾಂತರಿಸಲಾಗಿದೆ.

ಮಂಗಳೂರು ನಗರದ ಪೊಲೀಸ್ ಆಯುಕ್ತರ ನಿರ್ದೇಶನದಂತೆ, ಡಿ.ಸಿ.ಪಿ.(ಅಪರಾಧ ಮತ್ತು ಸಂಚಾರ) ರವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಉಪ-ವಿಭಾಗದ ಎ.ಸಿ.ಪಿ. ಶ್ರೀ ಕೆ.ರಾಮರಾವ್ ರವರು, ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹದಳವರು ಮತ್ತು ಮಂ. ಗ್ರಾಮಾಂತರ ಠಾಣೆಯ ಅಧಿಕಾರಿ/ಸಿಬ್ಬಂದಿಗಳೊಂದಿಗೆ ದಾಳಿ ನಡಸಿ ಈ ಪ್ರಕರಣವನ್ನು ಭೇದಿಸಿದ್ದಾರೆ.

Comments are closed.