ಕುಂದಾಪುರ/ತಮಿಳುನಾಡು: ತಮಿಳುನಾಡಿನ ನಮಕ್ಕಲ್ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕುಂದಾಪುರದ ಪ್ರಸಿದ್ಧ ಶ್ರೀ ದುರ್ಗಾಂಬಾ ಟ್ರಾವೆಲ್ಸ್ ಮಾಲಿಕ ಸುನೀಲ್ ಚಾತ್ರ (41) ವಿಧಿವಶರಾದ ಬಗ್ಗೆ ವರದಿಯಾಗಿದೆ.

ಇಂದು ಕಾರ್ಯವೊಂದರ ನಿಮಿತ್ತ ತಮಿಳುನಾಡಿಗೆ ಸಾಗಿದ್ದ ಅವರು ಪಜೆರೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ದಾರುಣ ಘಟನೆ ನಡೆದಿದೆ. ಸುಮಾರು ಮೂರು ಗಂಟೆ ಹೊತ್ತಿಗೆ ಈ ಅಪಘಾತ ನಡೆದಿದ್ದು ಚಾಲಕ ಕೂಡ ಗಾಯಗೊಂಡಿದ್ದಾನೆ ಎನ್ನಲಾಗಿದೆ. ಸುನಿಲ್ ಚಾತ್ರ ಶ್ರೀ ದುರ್ಗಾಂಬಾ ಟ್ರಾವೆಲ್ಸ್ ಆಡಳಿತ ಪಾಲುದಾರರಾಗಿದ್ದು ತಂದೆಯ ಮಾಲೀಕತ್ವದ ಈ ಟ್ರಾವೆಲ್ಸ್ ಅನ್ನು ಸಹೋದರನೊಂದಿಗೆ ನೋಡಿಕೊಳ್ಳುತ್ತಿದ್ದರು. ಮೃತ ಸುನೀಲ್ ಚಾತ್ರರು ವಿವಾಹಿತರಾಗಿದ್ದು. ಅವರ ಮೃತದೇಹ ಭಾನುವಾರದಂದು ಕುಂದಾಪುರ ತಲುಪಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.
ಅಂತರಾಜ್ಯ ಮಟ್ಟದಲ್ಲಿಯೂ ಬಸ್ ಸಂಪರ್ಕ ಸೇವೆ ಸಾಧಿಸಿದ್ದರು. ಕುಂದಾಪುರದ ಕುಗ್ರಾಮಗಳಿಗೂ ನಿತ್ಯ ಬಸ್ ಸಂಪರ್ಕ ವ್ಯವಸ್ಥೆ ಕಲ್ಪಿಸಿದ್ದ ಶ್ರೀ ದುರ್ಗಾಂಬಾ ಜನಮನ್ನಣೆಗೆ ಪಾತ್ರವಾಗಿದ್ದು ಮಾತ್ರವಲ್ಲದೇ ರಾಜ್ಯದ ವಿವಿಧ ನಗರಗಳಿಗೂ ಬಸ್ ಸಂಪರ್ಕ ಕಲ್ಪಿಸಿದೆ.
Comments are closed.