ಉಡುಪಿ: ಸ್ಥಳೀಯ ಚುನಾವಣೆ ಪ್ರಚಾರದಲ್ಲಿ ಜಯಮಾಲ ಗಾಳಿ ಎದ್ದಿದೆ. ಜಯಮಾಲಾರಷ್ಟು ಗ್ಲಾಮರ್ ಯಾರಿಗಿದೆ ಹೇಳಿ. ಜಯಮಾಲ ವೆರೀ ಗ್ಲ್ಯಾಮರಸ್ ಡಿಸ್ಟ್ರಿಕ್ಟ್ ಮಿನಿಸ್ಟರ್ ಹೀಗಂತ ಹೇಳಿರೋದು ಉಡುಪಿಯ ಮಾಜಿ ಶಾಸಕ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್.

ಸ್ಥಳೀಯ ಸಂಸ್ಥೆಗಳ ಚುನಾವಣೆ ಸಿದ್ದತೆ ಕುರಿತು ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಧ್ವರಾಜ್, ಚುನಾವಣೆಗೆ ಹೆಚ್ಚು ಓಡಾಟ ನಡೆಸದಿದ್ರೂ ಉಡುಪಿಯಲ್ಲಿ ಜಯಮಾಲಾ ಗಾಳಿ ಎದ್ದಿದೆ. ಒಂದೇ ದಿನದ ಪ್ರಚಾರವೇ ಸಾಕಷ್ಟು ಪರಿಣಾಮ ಬೀರಿದೆ. ಜಯಮಾಲರಿಗೆ ನನಗಿಂತ ಹೆಚ್ಚಾಗಿ ಗ್ಲಾಮರ್ ಇದೆ ಎಂದ್ರು.
ಇನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಅಳಿವು ಉಳಿವಿನ ಪ್ರಶ್ನೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಧ್ವರಾಜ್, ಕಾಂಗ್ರೆಸ್ ಪಕ್ಷ ಆನೆ ಇದ್ದ ಹಾಗೆ, ಆನೆಯ ಚಿತ್ರ ಎಷ್ಟೇ ಚಿಕ್ಕದಾಗಿ ಬರೆದ್ರೂ ಅದು ಆನೆಯೇ. ಸೂರ್ಯ ಚಂದ್ರರಿರುವ ವರೆಗೂ ಕಾಂಗ್ರೆಸ್ ಪಕ್ಷ ಸದೃಢವಾಗಿರತ್ತೆ. ಹಿಂದೂ, ಸನಾತನ ಧರ್ಮ ಹೇಗೆ ಪುರಾತನವೋ ಹಾಗೇ ಕಾಂಗ್ರೆಸ್ ಪಕ್ಷಕ್ಕೂ ಹಾಗೆ ಪ್ರಾಚೀನವಾದ ಪಕ್ಷ. ಕಾಂಗ್ರೆಸ್ ಪಕ್ಷವನ್ನು ಯಾರಿಂದಲೂ ಅಳಿಸಲು ಸಾಧ್ಯವೇ ಇಲ್ಲ .ನಾನು ಬಿಟ್ಟರೂ ಕಾಂಗ್ರೆಸ್ ಪಕ್ಷ ಉಳಿಯುತ್ತದೆ. ಯಾರು ಇಲ್ಲದಿದ್ದರೂ ಕಾಂಗ್ರೆಸ್ ಪಕ್ಷವನ್ನು ಮುಕ್ತ ಮಾಡಲು ಅಸಾಧ್ಯ. ಹಾಗಂತ ನಾನು ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ.
ಚುನಾವಣಾ ವಾತಾವರಣ ಕಾಂಗ್ರೆಸ್ ಪರವಾಗಿದೆ. ಬಿಜೆಪಿ ಶಾಸಕರ ಹಣೆಬರಹ ಏನಂತ ಜನಕ್ಕೆ ಗೊತ್ತಾಗಿದೆ ಎಂದು ಲೇವಡಿ ಮಾಡಿದ್ರು.
Comments are closed.