ರಾಷ್ಟ್ರೀಯ

ಕೇರಳ: ಪ್ರವಾಹ ಸಂತ್ರಸ್ತರ ಮನೆ ಸ್ವಚ್ಛಗೊಳಿಸಲು 15-20 ಸಾವಿರ!

Pinterest LinkedIn Tumblr


ತಿರುವನಂತಪುರ: ಪ್ರವಾಹದಿಂದ ಕಂಗೆಟ್ಟ ಕೇರಳದ ಸಂತ್ರಸ್ತರಿಗೆ ಮನೆ ಸ್ವಚ್ಛಗೊಳಿಸಲು ದಿನಕ್ಕೆ 1,000 ರೂ. ಬಾವಿ ಸ್ವಚ್ಛಗೊಳಿಸಲು 3,000 ರೂ.ಗಳ ವರೆಗೆ ಕೇಳುತ್ತಿದ್ದಾರೆ! ಒಟ್ಟಾರೆ ಒಂದು ಮನೆ ಸ್ವಚ್ಛಗೊಳಿಸಲು 15-20 ಸಾವಿರ ರೂ. ತಗುಲಿತ್ತಿದೆ.

ಈ ಬಗ್ಗೆ ಟೈಮ್ಸ್‌ ಆಫ್‌ ಇಂಡಿಯಾಗೆ ಮಾಹಿತಿ ನೀಡಿದ ನಗರದಲ್ಲಿ ಐಟಿ ಉದ್ಯೋಗಿಯಾಗಿರುವ ಸುಮೊದ್‌ ಕುಮಾರ್‌, ಮಳಪುಳಸೆರಿಯಲ್ಲಿರುವ ತನ್ನ ಮನೆ ಸ್ವಚ್ಛತೆ ಕೆಲಸಕ್ಕೆ ದಿನಕ್ಕೆ 1,000 ರೂ. ತಗುಲಿದ್ದಾಗಿ ಮತ್ತು ಬಾಯಿ ಸ್ವಚ್ಛಗೊಳಿಸಲು ಹೆಚ್ಚುವರಿ 3,000 ರೂ. ನೀಡಿದ್ದಾಗಿ ವಿವರಿಸಿದ್ದಾರೆ.

ರಾಜ್ಯದಲ್ಲಿ ವಲಸೆ ಕಾರ್ಮಿಕರ ಗುಂಪು ಆಗಮಿಸಿದ್ದು, ಸ್ವಚ್ಛತೆ ಕೆಲಸಕ್ಕೆ ಸಾಕಷ್ಟು ಹಣ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಮೊದಲೇ ಪ್ರವಾಹದ ಹೊಡೆತದಿಂದ ಕಂಗೆಟ್ಟ ಸಂತ್ರಸ್ತರಿಗೆ ಸ್ವಚ್ಛತೆ ಕೆಲಸಕ್ಕೆ ವಿಪರೀತ ವೆಚ್ಛ ಮಾಡಬೇಕಾದ ಪರಿಸ್ಥಿತಿ ಬಂದಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.

ಸ್ಥಳೀಯ ಸಂಸ್ಥೆಗಳು ನೀಡಿದ ಲೆಕ್ಕದ ಪ್ರಕಾರ ರಾಜ್ಯದ 7 ಜಿಲ್ಲೆಗಳಲ್ಲಿ ಸುಮಾರು 5.78 ಲಕ್ಷ ಮನೆಗಳು ಹಾನಿಗೊಂಡಿವೆ. ಸ್ವಯಂ ಸೇವಕ ಗುಂಪುಗಳು ಸುಮಾರು 3.43 ಲಕ್ಷ ಮನೆಗಳನ್ನು ಸ್ವಚ್ಛಗೊಳಿಸಿವೆ. ರಾಜ್ಯ ಸರಕಾರ ಸಧ್ಯ ಪ್ರವಾಹ ಸಂತ್ರಸ್ತರಿಗೆ 10,000 ರೂ. ಹಣ ತತ್‌ ಕ್ಷಣದಂತೆ ನೀಡುವ ಕೆಲಸ ಮಾಡುತ್ತಿದೆ.

Comments are closed.