ಕರಾವಳಿ

ಕುಂದಾಪುರದಲ್ಲಿ ವಾಜಪೇಯಿ ಅಸ್ಥಿ ಕಳಶಕ್ಕೆ ನಮನ

Pinterest LinkedIn Tumblr

ಕುಂದಾಪುರ: ಅಟಲ್ ಬಿಹಾರಿ ವಾಜಪೇಯಿಯವರ ಚಿತಾಭಸ್ಮವುಳ್ಳ ಕಳಶ ಇಂದು ಕುಂದಾಪುರಕ್ಕೆ ಆಗಮಿಸಿದ್ದು ಶಾಸ್ತ್ರೀ ವೃತ್ತದಲ್ಲಿ ನಮನ ಸಲ್ಲಿಸಲಾಯಿತು.

ಈ ಸಂದರ್ಭ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಅಜಾತಶತ್ರುವಾಗಿದ್ದು ಪ್ರಪಂಚಕ್ಕೆ ಶಾಂತಿದೂತನೆಂದು ಕರೆಸಿಕೊಂಡ ವಾಜಪೇಯಿಯವರು ಇಂದು ನಮ್ಮೊಂದಿಗಿಲ್ಲದಿದ್ದರೂ ಕೂಡ ಅವರ ಕೆಲಸಗಳು, ನೆನಪು ಚಿರಸ್ಥಾಯಿಯಾಗಿದೆ. ದೇಶಕ್ಕಾಗಿ ಅವರು ಮಾಡಿದ ಕೆಲಸವನ್ನು ನೆನಪಿಸಿಕೊಳ್ಳಲು ದೇಶದಾದ್ಯಂತ ಎಲ್ಲಾ ಪವಿತ್ರ ನದಿಗಳಲ್ಲಿ ಅವರ ಅಸ್ಥಿ ವಿಸರ್ಜನೆ ಕಾರ್ಯ ನಡೆಯುತ್ತಿದೆ. ಅಂತೆಯೇ ಕರ್ನಾಟಕದ ಎಂಟು ಪವಿತ್ರ ನದಿಗಳಲ್ಲಿ ಅಸ್ಥಿ ವಿಸರ್ಜನೆ ನಡೆಯಲಿದೆ. ನೇತ್ರಾವತಿ-ಕುಮಾರಧಾರ ನದಿಯ ಸಂಗಮವಾದ ಉಪ್ಪಿನಂಗಡಿಯಲ್ಲಿ ಅಟಲ್ ಜೀ ಅಸ್ಥಿ ವಿಸರ್ಜನೆ ಕಾರ್ಯ ನಡೆಯಲಿದೆ ಎಂದರು.

 

ಅಟಲ್ ಜಿಯವರು ದೆಲ್ಲಿಯ ಹಣ ಹಳ್ಳಿಯ ಶಾಲೆಗೆ, ಹಳ್ಳಿಯ ರಸ್ತೆಗೆ ಬರಬಹುದೆಂದು ತೋರಿಸಿಕೊಟ್ಟವರು. ಬೇರೆ ದೇಶದಲ್ಲಿ ಭಾರತದ ಬಗ್ಗೆ ಚರ್ಚೆ ಮಾಡಲು ವಿರೋಧ ಪಕ್ಷದಲ್ಲಿದ್ದರೂ ತೆರಳಿದ ವಾಜಪೇಯಿಯವರನ್ನು ಜನರು ನೆಚ್ಚಿದ್ದಾರೆ. ಮತ್ಸರ ರಾಜಕೀಯ ಮಾಡದೆ ದೇಶದ ಅಭಿವೃದ್ಧಿ ಹಾಗೂ ಏಳಿಗೆಯತ್ತ ಅವರ ಕೊಡುಗೆ ಅಪಾರ. ಅವರ ಪ್ರೇರಣೆ ನಮಗೆ ಶಾಶ್ವತವಾಗಿರುತ್ತದೆ ಎಂದರು.

ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕುಂದಾಪುರ ಕ್ಷೇತ್ರಾಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ರಾಜ್ಯ ಕಾರ್‍ಯಕಾರಿಣಿ ಸದಸ್ಯರಾದ ಉದಯಕುಮಾರ್ ಶೆಟ್ಟಿ, ಕಿರಣಕುಮಾರ್ ಕೊಡ್ಗಿ, ರಾಜ್ಯ ಯುವಮೋರ್ಚಾ ಕಾರ್‍ಯಕಾರಿಣಿ ಸದಸ್ಯ ಮಹೇಶ್ ಕುಮಾರ್ ಪೂಜಾರಿ, ದ.ಕ. ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂದೇಶ ಶೆಟ್ಟಿ, ಹರೀಶ್ ಕೋಟ್ಯಾನ್, ಬಿಜೆಪಿ ಪ್ರ. ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯ್ಕ್, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕುತ್ಯಾರು ನವೀನ್ ಶೆಟ್ಟಿ ಇದ್ದರು.

Comments are closed.