ಕರಾವಳಿ

ಪ್ರೋಟೀನ್ ಹಾಗೂ ಮಾಂಸಹಾರಕ್ಕಿಂತ ಉತ್ತಮ “ಸೋಯಾ” ಯಾಕೆ ಗೋತ್ತೆ..?

Pinterest LinkedIn Tumblr

ಹಿಂದೊಮ್ಮೆ ಚೀನಾದಲ್ಲಿ ಪವಿತ್ರಗಿಡವೆಂದು ನಂಬಲಾಗುತ್ತಿದ್ದ ಸೋಯಾ ಅವರೆ ಇತ್ತೀಚಿನ ದಿನಗಳಲ್ಲಿ ಆಹಾರೋದ್ಯಮದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ ಸೋಯಾದಲ್ಲಿರುವ ಅಧಿಕ ಪ್ರೋಟೀನ್ ಅಂಶ ಹಾಗೂ ಐಸೋಪ್ಲೇವಿನ್ ಎಂಬ ಔಷದೀಯ ಅಂಶ ಆರೋಗ್ಯವರ್ಧನೆಯಲ್ಲಿ ಉತ್ತಮವೆಂದು ಸಂಶೋಧನೆಗಳಿಂದ ಸೋಯಾ ಅವರೆ ಉತ್ಪನ್ನಗಳಿಗೆ ಬೆಡಿಕೆ ಹೆಚ್ಚಾಗಿದೆ ಸೋಯಾ ಅವರೆ ಒಂದು ಉತ್ತಮ ಹೇರಳ ಪ್ರೋಟೀನ್ ಯುಕ್ತ ಧಾನ್ಯವಾಗಿದ್ದು ವಿಶ್ವ ಅರೋಗ್ಯ ಸಂಸ್ಥೆ ಹಾಗೂ ಅಮೇರಿಕಾದ ಆಹಾರ ಮತ್ತು ಔಷದೀಯ ಸಂಸ್ಥೆ ಸಹ ಸೋಯಾ ಅವರೆಯನ್ನು ಹಾಲನ್ ಪ್ರೋಟೀನ್ ಹಾಗೂ ಮಾಂಸಹಾರಕ್ಕಿಂತ ಉತ್ತಮ ಎಂದು ಹೇಳಿದೆ.

ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಆರೋಗ್ಯದ ಕಾಳಜಿ ಹೆಚ್ಚಾಗುತ್ತಿದ್ದು ಆರೋಗ್ಯಯುತ ಶರೀರ ಮತ್ತು ಮನಸ್ಸು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮುಂದೆಬರಲು ಅವಶ್ಯಕವಾದ ಅಂಶವಾಗಿದೆ ಆರೋಗ್ಯಯುತ ಜೀವನ ಸಾಗಿಸಲು ಪ್ರೋಟಿನ್ ಯುಕ್ತ ಸಮತೋಲನ ಆಹಾರ ಸೇವಿಸುವುದು ಅವಶ್ಯವಾಗಿದೆ ಅಧಿಕ ಪೌಷ್ಟಿಕತೆ ಹಾಗೂ ಅಧಿಕ ಪ್ರೋಟಿನ್ ಯುಕ್ತ ಉಪಯುಕ್ತ ಸೋಯಾ ಆಹಾರ ಈಗ ಪ್ರಪಂಚದಾದ್ಯಂತ ಉಪಯೋಗಿಸುವ ಪ್ರಮುಖ ಆಹಾರವಾಗಿದೆ ಸೋಯಾ ಉತ್ಪನ್ನಗಳಿಗೆ ಯಾಕಿಷ್ಟು ಪ್ರಾಮುಖ್ಯತೆ? ಇದಕ್ಕೆ ಕಾರಣವಿದೆ.

ಬೇರೆ ಎಲ್ಲಾ ಧಾನ್ಯಗಳಿಗಿಂತ ಅಂದರೆ ಕಡಲೆಬೇಳೆ, ಹಸಿರು ಬಟಾಣಿ, ಮುಂತಾದ ಪ್ರೋಟಿನ್ ಯುಕ್ತ ಕಾಳುಗಳಿಗೆ ಹೋಲಿಸಿದರೆ ಪ್ರತಿಗ್ರಾಂ ಸೋಯಾ ಅವರೆಯಲ್ಲಿ 50 ಶೇಕಡಾ ಪ್ರೋಟೀನ್ ಅಂದರೆ ಬೇರೆ ಧಾನ್ಯಗಳಾಲ್ಲಿರುವುದಕ್ಕಿಂತ 2 ಪಟ್ಟು, ಮೊಟ್ಟೆಯಲ್ಲಿರುವ ಪ್ರೋಟಿನ್ ಗಿಂತ ಮೂರು ಪಟ್ಟು ಹಾಗೂ ಹಾಲಿನಲ್ಲಿರುವ ಪ್ರೋಟಿನ್ ಗಿಂತ 11 ಪಟ್ಟು ಹೆಚ್ಚಾಗಿದೆ.ಮತ್ತು ಅಧಿಕ “ಬಿ” ಜೀವಸತ್ವವನ್ನು ಹೊಂದಿದೆಯಲ್ಲದೇ ಮೆಗ್ನೀಷಿಯಂ, ಕ್ಯಾಲ್ಸಿಯಂ, ಕಬ್ಬಿಣ, ಪೋಟ್ಯಾಸಿಯಂ ಹಾಗೂ ತಾಮ್ರ ಖನಿಜಗಳು ಸಹ ಇದರಲ್ಲಿ ಅಧಿಕವಗಿದೆ ಪ್ರತಿ 100 ಗ್ರಾಂ ಸೋಯಾ ಅವರೆಯಿಂದ 432 ಕ್ಯಾಲೋರಿಗಳಷ್ಟು ಶಕ್ತಿ ಸಿಗುತ್ತದೆ. ಇದರಲ್ಲಿ 43.2 ಗ್ರಾಂನಷ್ಟು ಪೂರ್ಣ ಪ್ರಮಾಣದ ಪ್ರೋಟೀನ್ , 10.5 ಗ್ರಾಂನಷ್ಟು ಕೊಬ್ಬು, 20.90 ಗ್ರಾಂನಷ್ಟು ಕಾರ್ಬೋಹೈಡ್ರೇಟ್ ಗಳಿದ್ದು 200 ಮಿಲಿಗ್ರಾಂ ಕ್ಯಾಲಿಯಂ 690 ಮಿಲಿಗ್ರಾಂನಷ್ಟು ಫಾಸ್ಫರಸ್ , 11.5 ಮಿಲಿಗ್ರಾಂನಷ್ಟು ಕಬ್ಬಿಣದ ಅಂಶ ಹಾಗೂ 426 ಮಿಲಿಗ್ರಾಂನಷ್ಟು ವಿಟಮಿನ್ “ಎ” ಜೀವಸತ್ವವಿದೆ. ಇವೆಲ್ಲವೂ ಒಬ್ಬ ಆರೋಗ್ಯವಂತ ವ್ಯಕ್ತಿಗೆ ಬೇಕಾದ ದಿನನಿತ್ಯದ ಪೌಷ್ಟಿಕಾಂಶಗಳಾಗಿದೆ.

ಸೋಯಾ ಆಹಾರಗಳಲ್ಲಿ ಮುಖ್ಯವಾದವು ಸೋಯಾ ಹಾಲು ಸೋಯಾ ಹಾಲನ್ನು ಉತ್ತಮ ಗುಣಮಟ್ಟದ ಇಡಿಸೋಯಾ ಅವರೆಯಿಂದ ತಯಾರಿಸಲಾಗುತ್ತದೆ. ಇದರಲ್ಲಿ ಅಧಿಕ ಪ್ರೋಟೀನ್ ಹಾಗೂ ಐಸೋಪ್ಲೇವಿನ್ ಅಂಶವಿರುತ್ತದೆ ಸೋಯಾ ಹಾಲಿನಲ್ಲಿ ಸಕ್ಕರೆ ಅಂಶ ಇರುವುದಿಲ್ಲ. ಇದು “ಲ್ಯಾಕ್ಟೋಸ್ ಇನ್ಟೋಲರೆನ್ಸ್” ಇರುವ ಮಕ್ಕಳಿಗೆ ವರದಾನವಾಗಿದ್ದು ಹಸು ಹಾಗೂ ದನದ ಹಾಲಿಗೆ ಪರ್ಯಾಯವಾಗಿ ಕೊಡಬಹುದು.ದನ ಹಾಗೂ ಹಸುವಿನ ಹಾಲಿನಲ್ಲಿ ಲ್ಯಾಕ್ಟೋಸ್ ಇದ್ದು ಇದು ಕೆಲವು ಮಕ್ಕಳಲ್ಲಿ ಜೀರ್ಣವಾಗದೆ ಬೇದಿಗೆ ಕಾರಣವಾಗುತ್ತದೆ. ಅಂತಹ ಮಕ್ಕಳಿಗೆ ಈ ಸೋಯಾ ಹಾಲು ವರದಾನವಾಗಿದೆಯೆಂದರೆ ತಪ್ಪಾಗಲಾರದು ಸೋಯಾ ಹಾಲು ನೈಸರ್ಗಿಕವಾಗಿರುವುದರಿಂದ ಇದರಲ್ಲಿ ಕೊಬ್ಬಿನಂಶ ಇರುವುದಿಲ್ಲ ಹಸು ಹಾಗೂ ದನದ ಹಾಲಿನಲ್ಲಿ ಕೊಬ್ಬು ಇರುತ್ತದೆ. ಸೋಯಾ ಹಾಲಿನಲ್ಲಿರುವ ಪ್ರೋಟಿನ್ ಗಳು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅಂದರೆ ಕಡಿಮೆ ಸಾಂದ್ರತೆಯ (LOW DENSITY LIPOPROTEINS) ಕೊಲೆಸ್ಟ್ರಾಲನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆಂದು ಸಂಶೋಧನೆಗಳು ತಿಳಿಸುತ್ತದೆ.

“ಲೈಸಿನ್” ಎಂಬ ಅಮೈನೋ ಆಮ್ಲ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಹಾಗೆಯೇ “ಆರ್ಜನೈನ್” ಎಂಬ ಇನ್ನೊಂದು ಅಮೈನೋ ಆಮ್ಲ ರಕ್ತದ ಕೊಬ್ಬನ್ನು ಕಡಿಮೆ ಮಾಡುತ್ತದೆ ಆದ್ದರಿಂದ ರಕ್ತದಲ್ಲಿರುವ ಲೈಸಿನ್ ಹಾಗೂ ಆರ್ಜನೈನ್ ಅನುಪಾತ ರಕ್ತದಲ್ಲಿರುವ ಕೊಬ್ಬಿನ ಮಟ್ಟವನ್ನು ಆಳೆಯಲು ಸಹಾಯ ಮಾಡುತ್ತದೆ ಅಲ್ಲದೇ ಅಥರೋಸ್ಕಿಲೋಸಿಸ್ ರೋಗದ ಪತ್ತೆಗೂ ಸಹಾಯಮಾಡುತ್ತದೆ.ಸೋಯಾ ಹಾಲಿನಲ್ಲಿರುವ ಪ್ರೋಟೀನ್‍ಗಳು ಅಧಿಕ ಲೈಸಿನ್ ಹಾಗೂ ಆರ್ಜನೈನ್ ಅನುಪಾತವನ್ನು ಸೂಚಿಸುತ್ತದೆ. ಇದರ ಅನುಪಾತ ಹಸುವಿನ ಹಾಲಿನಲ್ಲಿರುವ ಲೈಸಿನ್‍ಗಿಂತ ಹೆಚ್ಚಾಗಿರುತ್ತದೆ ಎಂದು ಅಧ್ಯಯನಗಳು ತಿಳಿಸುತ್ತದೆ. ಸೋಯಾ ಹಾಲಿನಲ್ಲಿರುವ ಸುಲಭವಾಗಿ ಕರಗುವ ನಾರಿನಂಶಗಳು ಸ್ಯಾಪೋನಿನ್‍ಗಳು ಹಾಗೂ ಪೈಟಿಕ್ ಆಮ್ಲ ಹೃದಯ ಸಂಬಂಧಿ ಖಾಯಿಲೆಗಳನ್ನು ತಡೆಗಟ್ಟುವುದರಲ್ಲಿ ಸಹಾಯ ಮಾಡುತ್ತದೆ ಸೋಯಾ ಹಾಲಿನಲ್ಲಿ ಅಧಿಕ ಪ್ರಮಾಣದ ಅವಶ್ಯಕ ಪ್ಯಾಟಿ ಆಮ್ಲಗಳಿರುತ್ತದೆ ಆದ್ದರಿಂದಲೇ ಸೋಯಾ ಹಾಲಿನಲ್ಲಿ ಉತ್ಕೃಷ್ಟ ಗುಣಗಳು ಸಮ್ಮಿಳಿತವಾಗಿದೆ.

ವೈದ್ಯ ಅಧ್ಯಯನಗಳು ಪುರುಷ ಹಾಗೂ ಮಹಿಳೆಯರಲ್ಲಿ ಸೋಯಾ ಹಾಲು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸಾಬೀತುಮಾಡಿದೆ ಅಲ್ಲದೇ ಸೋಯಾ ಹಾಲಿನಲ್ಲಿರುವ ನೈಸರ್ಗಿಕ ಪ್ಲೇವಿನ್‍ಗಳು ಹಾಗೂ ಐಸೊಪ್ಲೇವಿನ್‍ಗಳು ಮೂಳೆಯ ಖನಿಜಗಳು ಸಾಂದ್ರತೆಯ ಮೇಲೆ ಪ್ರಭಾವ ಬೀರುತ್ತದೆಯಲ್ಲದೇ ಮೂಳೆಸವೆತ (OSTEOPOROSIS) ರೋಗವನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ ಹಾಗೂ ಮಹಿಳೆಯರಲ್ಲಿ ಹೆಚ್ಚಾಗಿ ಬರುವ ಮೂಳೆಸವೆತದ ರೋಗವನ್ನು ಕಡಿಮೆ ಮಾಡುತ್ತದೆ.

ಸೋಯಾ ಪದಾರ್ಥಗಳಲ್ಲಿ ಕಡಿಮೆ ಕ್ಯಾಲೋರಿ ಹಾಗೂ ಕೊಬ್ಬು ಇರುವುದರಿಂದ ಬೊಜ್ಜು ಬೆಳೆಯುವುದನ್ನು ತಡೆಯುತ್ತದೆ ಕ್ಯಲೋರಿ ಕಡಿಮೆ ಇದ್ದರೂ ಸಹ ದೇಹಕ್ಕೆ ಸಮತೋಲನವಾದ ಪೋಷಕಾಂಶಗಳನ್ನು ಒದಗಿಸುವುದರಲ್ಲಿ ಸೋಯಾ ಸಹಕಾರಿಯಗಿದೆಯಲ್ಲದೇ ಹಸಿವನ್ನು ಕಡಿಮೆಮಾಡುತ್ತದೆ ಅಲ್ಲದೇ ನಿತ್ಯ ಸೋಯಾ ಆಹಾರವನ್ನು ಸೇವಿಸುವುದರಿಂದ ಹಲವಾರು ರೀತಿಯ ಅರ್ಬುದ ರೋಗಗಳು ಕಡಿಮೆಯಾಗುತ್ತದೆ ಎಂದು ವೈದ್ಯಕೀಯ ಸಂಶೋಧನೆ ಹೇಳುತ್ತದೆ.

ವಿವಿಧ ರೀತಿಯ ಸಂಸ್ಕರಿಸಿದ ಸೋಯಾ ಚಿಪ್ಸ್‍ಗಳು ಫ್ಲೇಕ್ಸ್‍ಗಳು ಕರಿದ ತಿಂಡಿಗಳು ವಿವಿಧ ಪರಿಮಳದ ಸಂಸ್ಕರಿಸಿದ ಸೋಯಾ ಹಾಲು ಈಗ ಮಾರುಕಟ್ಟೆಯಲ್ಲಿ ಲಭ್ಯ ಅಧಿಕ ಪ್ರೋಟೀನ್‍ಯುಕ್ತ ಈ ಹಾಲನ್ನು ಲಘು ಪಾನೀಯವಾಗಿ ಸೇವಿಸಬಹುದು ಟೆಟ್ರಪ್ಯಾಕ್‍ನಲ್ಲಿ ದೊರೆಯುವ ಈ ಸಂಸ್ಕರಿಸಿದ ಹಾಲನ್ನು 9 ತಿಂಗಳ ಕಾಲ ಹೊರಗಿನ ವಾತಾವರಣದಲ್ಲಿ ಶೇಖರಿಸಬಹುದು ಪಟ್ಟಣವನ್ನು ತೆರೆದ ಮೇಲೆ 3 ದಿನಗಳ ಕಾಲ ರೆಫ್ರಿಜರೇಟರ್ ನಲ್ಲಿ ಸಂಗ್ರಹಿಸಿಡಬಹುದು. ದನದ ಹಾಲಿಗೆ ಪರ್ಯಾಯವಾಗಿ ಸೋಯಾ ಹಾಲನ್ನು ಐಸ್‍ಕ್ರೀಂ, ಬಾದಾಮಿ ಹಾಲು ಮುಂತಾದ ಹಾಲಿನಿಂದ ತಯಾರಿಸುವ ಉತ್ಪನ್ನಗಳನ್ನು ತಯಾರಿಸಲು ಸೋಯಾ ಹಾಲನ್ನು ಬಳಸಬಹುದು ಸೋಯಾ ಹಾಲನ್ನು ಹೆಪ್ಪು ಹಾಕಿ ಮೊಸರನ್ನು ಮಾಡಿ ಉಪಯೋಗಿಸಬಹುದು. ಸೋಯಾ ಮೊಸರು ಬೇಕಾದರೆ 1 ಲೋಟ ಸೋಯಾ ಹಾಲಿಗೆ 2 ಚಮಚ ಸಾಮಾನ್ಯ ಡೈರಿ ಮೊಸರನ್ನು ಹಾಕಿ 1 ಚಿಟಿಕೆ ಉಪ್ಪು ಹಾಗೂ 1 ಚಮಚ ಸಕ್ಕರೆಯನ್ನು ಹಾಕಿದರೆ ಗಟ್ಟಿ ಸೋಯಾ ಮೊಸರು ರೆಡಿ. ಕಡಿಮೆ ಕ್ಯಾಲೋರಿಯುಕ್ತ ಸುಲಭವಾಗಿ ಜೀರ್ಣವಾಗಬಲ್ಲ ಸೋಯಾ ಹಾಲನ್ನು ಹಾಗೂ ಸೋಯಾ ಪದಾರ್ಥಗಳನ್ನು ನಮ್ಮ ದಿನ ನಿತ್ಯದ ಅಡುಗೆಯಲ್ಲಿ ಉಪಯೋಗಿಸಬಹುದು.

ನೀವು ಸೋಯಾ ಹಾಲನ್ನು ಮಾರುಕಟ್ಟೆಯಲ್ಲಿ ಖರೀದಿಸುವಾಗ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಡಿ. ಅದರಲ್ಲಿರುವ ಪದಾರ್ಥಗಳು ಕ್ಯಾಲೋರಿಗಳು ಪ್ರೋಟೀನ್ ಅಂಶ ಹಾಗೂ ಕ್ಯಾಲೋರಿ ಅಂಶವನ್ನು ಪ್ರೋಟೀನ್ ಅಂಶದಿಂದ ಭಾಗಿಸಿರಿ ಕಡಿಮೆ ಅಂಕ ಬಂದಷ್ಟು ಪದಾರ್ಥ ಉತ್ತಮವಾಗಿದೆ ಎಂದು ಅರ್ಥ, ಪ್ರತಿನಿತ್ಯ ನಿಮ್ಮ ಆಡುಗೆಯಲ್ಲಿ ಸೋಯಾ ಬಳಸಿರಿ ಆರೋಗ್ಯವನ್ನು ಹೊಂದಿರಿ.

Comments are closed.