ಪ್ರಮುಖ ವರದಿಗಳು

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿವಾದವೇ ಕೇರಳದಲ್ಲಿ ಭೀಕರ ಪ್ರವಾಹಕ್ಕೆ ಕಾರಣ ! ಹೊಸ ವಾದ ಹುಟ್ಟು ಹಾಕಿದ ಹಿಂದೂ ಮಕ್ಕಳ್ ಕಚ್ಚಿ

Pinterest LinkedIn Tumblr

ತಿರುವನಂತಪುರಂ: ಖ್ಯಾತ ಪವಿತ್ರ ಯಾತ್ರಾತಾಣ ಶಬರಿಮಲೆಗೆ ಮಹಿಳೆಯರು ಪ್ರವೇಶ ಮಾಡುವ ವಿವಾದದಿಂದಲೇ ಕೇರಳದಲ್ಲಿ ಭೀಕರ ಪ್ರವಾಹ ಉಂಟಾಗಿದೆ ಎಂದು ಹಿಂದೂ ಪರ ಸಂಘಟನೆಗಳು ಹೊಸದೊಂದು ವಾದವನ್ನು ಹುಟ್ಟುಹಾಕಿವೆ.

ಕೇರಳದಲ್ಲಿ ಪ್ರವಾಹ ಉಂಟಾಗಿರುವುದಕ್ಕೂ, ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೂ ಏನಾದರೂ ಸಂಬಂಧ ಇದೆಯೇ? ಆದರೆ, ಕೆಲವು ಟ್ವೀಟರ್‌ ಬಳಕೆದಾರರು ಹಾಗೂ ಕೆಲ ಹಿಂದೂಪರ ಸಂಘಟನೆಗಳು ಮಾತ್ರ ‘ಮಹಿಳೆಯರು ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯವನ್ನು ಪ್ರವೇಶಿಸಲು ಬಯಸಿದ್ದರಿಂದಲೇ ಕೇರಳದಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಅಯ್ಯಪ್ಪಸ್ವಾಮಿ ಮುನಿಸಿಕೊಂಡಿದ್ದರಿಂದ ಅನಾಹುತ ಸೃಷ್ಟಿಯಾಗಿದೆ’ ಎಂದು ವಾದಿಸಿದ್ದಾರೆ.

ಈ ಬಗ್ಗೆ ಹಿಂದೂ ಮಕ್ಕಳ್ ಕಚ್ಚಿ ತನ್ನ ವಾದ ಮಂಡಿಸಿದ್ದು, ಅತ್ಯಂತ ಪವಿತ್ರ ಕ್ಷೇತ್ರ ಶಬರಿಮಲೆಗೆ ಮಹಿಳೆಯರು ಪ್ರವೇಶ ಬಯಸಿದ್ದರಿಂದಲೇ ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿರುವ ರಾಮೇಶ್ವರಂ ಜಿಲ್ಲೆಯ ಹಿಂದೂ ಮಕ್ಕಳ್ ಸಂಘಟನೆಯ ಜಿಲ್ಲಾಧ್ಯಕ್ಷ ಪ್ರಭಾಕರನ್ ಅವರು, ಸುಪ್ರೀಂ ಕೋರ್ಟ್ ಕೂಡ ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ಉತ್ತೇಜಿಸುತ್ತಿದೆ. ಇದೇ ಕಾರಣಕ್ಕೆ ಶಬರಿಮಲೆಯಲ್ಲಿ ಪ್ರವಾಹ ಸಂಭವಿಸುತ್ತಿದೆ. ಇಂತಹ ಭೀಕರ ಜಲ ಪ್ರಳಯವನ್ನು ಹಿಂದೆಂದೂ ಕಂಡಿರಲ್ಲಿಲ್ಲ. ಹೀಗಾಗಿ ಮುಂದಾಗುವ ಮತಷ್ಟು ಅನಾಹುತವನ್ನು ತಡೆಯಲು ಕೇರಳ ಸರ್ಕಾರ ಕೂಡಲೇ ವಿಧಾನಸಭೆಯಲ್ಲಿ ಶಬರಿ ಮಲೆಗೆ ಮಹಿಳೆಯ ಪ್ರವೇಶ ನಿಷೇಧಿಸುವ ಕುರಿತು ನಿರ್ಣಯ ಮಂಡಿಸಿ ಅನುಮೋದನೆ ಪಡೆಯಬೇಕು ಎಂದು ಹೇಳಿದ್ದಾರೆ.

ಅಚ್ಚರಿ ಎಂದರೆ ಹಿಂದೂ ಮಕ್ಕಳ್ ಕಚ್ಚಿ ವಾದಕ್ಕೆ ಹಲವರು ಬೆಂಬಲ ವ್ಯಕ್ತಪಡಿಸಿದ್ದು, ಆರ್‌ಬಿಐ ಮಂಡಳಿಗೆ ನೇಮಕಗೊಂಡಿರುವ ಹಿರಿಯ ಪತ್ರಕರ್ತ ಎಸ್‌. ಗುರುಮೂರ್ತಿ ಅವರು ಕೂಡ ಇದೇ ರೀತಿ ಅರ್ಥಬರುವ ರೀತಿಯಲ್ಲಿ ಟ್ವೀಟ್‌ ಮಾಡಿದ್ದಾರೆ. ಶಬರಿಮಲೆಯಲ್ಲಿ ಪ್ರವಾಹ ಉಂಟಾಗಿರುವುದಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ಸಂಗತಿಯೂ ಕಾರಣವೇ ಎಂಬ ವಿಚಾರವನ್ನು ಗುರುಮೂರ್ತಿ ಅವರು ತೇಲಿ ಬಿಟ್ಟಿದ್ದಾರೆ. ‘ಈ ವಿಷಯವಾಗಿ ಕೂಡ ಸುಪ್ರೀಂಕೋರ್ಟ್‌ ಪರಿಶೀಲನೆ ನಡೆಸಬಹುದು. ಒಂದು ವೇಳೆ ಲಕ್ಷದಲ್ಲಿ ಒಂದೇ ಒಂದು ಅಂಶದಷ್ಟುಸತ್ಯಾಂಶವಿದ್ದರೂ ಜನರು ಅಯ್ಯಪ್ಪನ ವಿರುದ್ಧವಾಗಿ ನಡೆದುಕೊಳ್ಳಲು ಇಚ್ಛಿಸುವುದಿಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ಗೆ ಭಾರೀ ಟೀಕೆಗಳು ವ್ಯಕ್ತವಾಗಿವೆ.

Comments are closed.