ಕರಾವಳಿ

ಶಾಸಕ ವೇದವ್ಯಾಸ್ ಕಾಮಾತ್‌ರಿಂದ ಮನವೊಲಿಕೆ : ಮಂಗಳೂರು- ಮುಂಬೈ ಕೆ‌ಎಸ್‌ಆರ್‌ಟಿಸಿ ಬಸ್ ಸಂಚಾರ ಮತ್ತೆ ಆರಂಭ

Pinterest LinkedIn Tumblr

ಮಂಗಳೂರಿನಿಂದ ಮುಂಬೈ ಹೋಗುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಕಳೆದ ಕೆಲವಾರು ತಿಂಗಳುಗಳಿಂದ ಸಂಚಾರವನ್ನು ಸ್ಥಗಿತಗೊಳಿಸಿದ್ದವು. ಇದರಿಂದ ಜನಸಾಮಾನ್ಯರಿಗೆ ತುಂಬಾ ಅನಾನುಕೂಲತೆಗಳಾಗುತ್ತಿದ್ದವು. ಈ ಬಗ್ಗೆ ನಾಗರಿಕರು ಶಾಸಕರ ಗಮನಕ್ಕೆ ವಿಷಯ ತಂದು ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವಂತೆ ಮನವಿ ಮಾಡಿದ್ದರು.

ಈ ಕುರಿತು ತಕ್ಷಣ ಕ್ರಮ ಕೈಗೊಂಡ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಕೆಎಸ್ ಆರ್ ಟಿಸಿ ಅಧಿಕಾರಿಗಳನ್ನು ಕರೆಸಿ ಮಾತುಕತೆ ನಡೆಸಿದ್ದಾರೆ. ಮಾತುಕತೆ ಫಲಪ್ರದವಾಗಿದ್ದು ಇದೇ ಅಗಸ್ಟ್ 23 ರಿಂದ ಮಂಗಳೂರು-ಮುಂಬೈ ಮಧ್ಯೆ ದಿನಂಪ್ರತಿ ಕೆಎಸ್ ಆರ್ ಟಿಸಿ ಬಸ್ಸುಗಳು ತಮ್ಮ ಓಡಾಟವನ್ನು ಪುನರಾರಂಭಿಸಲಿವೆ. ಇದರ ಪ್ರಯೋಜನವನ್ನು ನಾಗರಿಕರು ಪಡೆದುಕೊಳ್ಳಬೇಕೆಂದು ಶಾಸಕ ಡಿ ವೇದವ್ಯಾಸ ಕಾಮತ್ ವಿನಂತಿಸಿದ್ದಾರೆ.

Comments are closed.