
ಮಂಗಳೂರು : ಮಂಗಳೂರಿನಿಂದ ಗುರುವಾರ ಬೆಳಗ್ಗೆ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರೊಬ್ಬರು ಬೋಟ್ನಿಂದ ಆಯತಪ್ಪಿ ಸಮುದ್ರಕ್ಕೆ ಬಿದ್ದು 6 ಗಂಟೆಗಳ ಕಾಲ ಪ್ರಾಣ ಕೈಯಲ್ಲಿ ಹಿಡಿದು ಕಡಲಿನಲ್ಲಿ ಈಜಿ ಬದುಕಿ ಬಂದ ಘಟನೆ ಗುರುವಾರ ರಾತ್ರಿ ನಡೆದಿದೆ.

ಮೀನುಗಾರಿಕೆಗೆ ಹೊಗಿದ್ದಾಗ ಸಂಜೆಯ ವೇಳೆ ಬೋಟ್ನಲ್ಲಿದ್ದ ತಮಿಳುನಾಡಿನ ಕಾರ್ಮಿಕ ನಾಗರಾಜ್ ಬೋಟ್ನಿಂದ ಆಯತಪ್ಪಿ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದಿದ್ದು. ತಕ್ಷಣವೇ ಆತನ ರಕ್ಷಣೆಗೆ ಮುಂದಾಗಿದ್ದರೂ ಆತ ಸಿಕ್ಕಿರಲಿಲ್ಲ.
ಬೋಟ್ನಲ್ಲಿದ್ದವರು ಇತರ ಬೋಟ್ನವರಿಗೆ ವಿಚಾರ ತಿಳಿಸಿದ್ದು, ಸುಮಾರು 40 ಬೋಟ್ಗಳಲ್ಲಿ ಸಮುದ್ರದಲ್ಲಿ ಹುಡುಕಾಡಿದರೂ ಆತನ ಪತ್ತೆಯಾಗಿರಲಿಲ್ಲ.
ಆದರೆ ಕೊನೆಗೆ ಈ ವಿಚಾರವನ್ನು ಎನ್ಎಮ್ಪಿಟಿಯಲ್ಲಿರುವ ಕೋಸ್ಟ್ ಗಾರ್ಡ್ ಸಿಬಂದಿಗೆ ತಿಳಿಸಿದಾಗ ಎನ್ ಎಂ ಪಿ ಟಿ ಯಿಂದ ಹೊರಟ ಕೋಸ್ಟ್ ಗಾರ್ಡ್ ನೌಕೆಯವರು ಆ ಸ್ಥಳದಲ್ಲಿ ಹುಡುಕಾಡಿ 6 ಗಂಟೆಗಳ ಬಳಿಕ ಸಮುದ್ರಕ್ಕೆ ಬಿದ್ದ ನಾಗರಾಜ್ನನ್ನು ಪತ್ತೆ ಹಚ್ಚಿ ರಕ್ಷಿಸಿ ರಾತ್ರಿ ನವಮಂಗಳೂರಿಗೆ ಕರೆತಂದಿದ್ದಾರೆ. ಸಮುದ್ರದಲ್ಲಿ ಸುಮಾರು 6 ಗಂಟೆಗಳ ಕಾಲ ಈಜಿ ನಾಗರಾಜ್ ಸಾವನ್ನೇ ಗೆದ್ದು ಬಂದಿದ್ದಾನೆ.
Comments are closed.