
ಮಂಗಳೂರು / ಉಳ್ಳಾಲ, ಆಗಸ್ಟ್.17: ಗುರುವಾರ ಬೀಸಿದ ಜೋರಾದ ಗಾಳಿಮಳೆಗೆ ತುಂಡಾಗಿ ಬಿದ್ದಿದ್ದ ಹೈಟೆನ್ಶನ್ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕನೋರ್ವ ಮೃತಪಟ್ಟ ಘಟನೆ ಗುರುವಾರ ರಾತ್ರಿ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಉಳಿಯ ಧರ್ಮರಸರ ಕ್ಷೇತ್ರದ ಬಳಿ ಸಂಭವಿಸಿದೆ.


ಆಕಸ್ಮಿಕ ವಿದ್ಯುತ್ ಅಪಘಾತಕ್ಕೊಳಕ್ಕಾಗಿ ಮೃತಪಟ್ಟ ದುರ್ದೈವಿಯನ್ನು ಉಳಿಯ ನಿವಾಸಿ ಅಶೋಕ್ ಡಿಸೋಜ (28) ಎಂದು ಗುರುತಿಸಲಾಗಿದೆ.

ಗಾಳಿಮಳೆಯಿಂದ ಹೈಟೆನ್ಶನ್ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಆದರೆ ಈ ಸಂದರ್ಭ ವಿದ್ಯುತ್ ಸಂಪರ್ಕ ಕಡಿತಗೊಂಡಿರಲಿಲ್ಲ. ಇದರ ಅರಿವಿಲ್ಲದೆ ಆ ದಾರಿಯಾಗಿ ಸಂಚರಿಸಿದ ಅಶೋಕ್ ಡಿಸೋಜ ಅವರು ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯನ್ನು ಆಕಸ್ಮಿಕವಾಗಿ ಸ್ಪರ್ಶಿಸಿದ್ದರಿಂದ ವಿದ್ಯುತ್ ಆಘಾತಕ್ಕೊಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
Comments are closed.