ಕರಾವಳಿ

ಮಾಜಿ ಪ್ರಧಾನಿ ಅಟಲ್ ಜೀ ನಿಧನಕ್ಕೆ ಸಚಿವ ಖಾದರ್, ಶಾಸಕ ವೇದವ್ಯಾಸ್ ಕಾಮಾತ್ ಸೇರಿದಂತೆ ವಿವಿಧ ಗಣ್ಯರಿಂದ ಸಂತಾಪ

Pinterest LinkedIn Tumblr

ಮಂಗಳೂರು, ಆಗಸ್ಟ್.16: ಅಜಾತಶತ್ರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ನಗರಾಭಿವೃದ್ಧಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಚಿವ ಖಾದರ್ ಸಂತಾಪ

ಅಪ್ರತಿಮ ಸಂಸದೀಯ ಪಟುವಾಗಿದ್ದ ವಾಜಪೇಯಿ ದೇಶದ ಒಳಿತಿಗಾಗಿ ಹಲವಾರು ದಿಟ್ಟ ನಿರ್ಧಾರಗಳನ್ನು ಕೈಗೊಂಡಿದ್ದರು. ಸ್ವಾತಂತ್ರ್ಯೋತ್ತರ ಭಾರತದ ಹಲವು ಪ್ರಮುಖ ಯೋಜನೆಗಳ ಹಿಂದೆ ವಾಜಪೇಯಿ ಒತ್ತಾಸೆ ಇದೆ. ಸರ್ವರನ್ನೂ ಗೌರವಿಸುವ ವಾಜಪೇಯಿ ಅವರ ಗುಣ, ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ. ಅವರ ಅಗಲುವಿಕೆ ದೇಶಕ್ಕೆ ತುಂಬಲಾರದ ನಷ್ಟ ಎಂದು ಸಚಿವ ಖಾದರ್ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮಾತ್ ಸಂತಾಪ :

ದೇಶ ಕಂಡ ಅಪ್ರತಿಮ ನಾಯಕ, ಎಲ್ಲಾ ಪಕ್ಷಗಳ ಮುಖಂಡರಿಂದಲೂ ಹೊಗಳಿಕೆಗೆ ಪಾತ್ರರಾದ, ಮಾಜಿ ಪ್ರಧಾನಿ, ಭಾರತೀಯ ಜನತಾ ಪಾರ್ಟಿಯ ಮಹಾನ್ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸಂತಾಪ :

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸಂತಾಪ ವ್ಯಕ್ತಪಡಿಸಿದ್ದಾರೆ. ವಾಜಪೇಯಿಯವರು ಹಿರಿಯ ಮುತ್ಸದ್ಧಿಯಾಗಿದ್ದು, ನನ್ನ ಸಹಿತ ಅಸಂಖ್ಯಾತ ಕಾರ್ಯಕರ್ತರಿಗೆ ರಾಜಕೀಯ ಬದುಕಿನ ಪ್ರೇರಣಾ ಶಕ್ತಿಯಾಗಿದ್ದವರು. ಬಾಲ್ಯದಿಂದಲೇ ನಮ್ಮೆಲ್ಲರನ್ನೂ ಸಾರ್ವಜನಿಕ ಬದುಕಿನೆಡೆಗೆ ನಡೆಯಲು ಸ್ಫೂರ್ತಿ ತುಂಬಿದ ವಾಜಪೇಯಿಯವರ ನಿಧನದಿಂದ ಪಕ್ಷ ಹಾಗೂ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸಂತಾಪ:

ಅಜಾತಶತ್ರು, ಕವಿ ಹೃದಯಿ, ನವ ಭಾರತದ ಹರಿಕಾರ, ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ನಿಧನಕ್ಕೆ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ಭಾರತವನ್ನು ಅಣು ರಾಷ್ಟ್ರವನ್ನಾಗಿಸಿದ, ಕಾರ್ಗಿಲ್ ಯುದ್ದದ ಸಂದರ್ಭದಲ್ಲಿ ಭಾರತೀಯ ಸೇನೆಗೆ ಸ್ಥೈರ್ಯ ಹಾಗೂ ದೈರ್ಯವನ್ನು ತುಂಬಿದ ಹೆಮ್ಮೆಯ ನಾಯಕನಿಗೆ ಹೃದಯಾಂತರಾಳದ ಶ್ರದ್ಧಾಂಜಲಿಗಳನ್ನು ಸಲ್ಲಿಸಿದ್ದಾರೆ

ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸಂತಾಪ:

ಈ ಶತಮಾನಕಂಡ ಶ್ರೇಷ್ಠ ದಾರ್ಶನಿಕ, ಅಜಾತಶತ್ರು, ಕವಿ ಹೃದಯದವಾಗ್ಮಿ ಶ್ರೇಷ್ಠ ರಾಜಕಾರಣಿ ವಿಶ್ವದ‌ಇತರ ರಾಷ್ಟ್ರಗಳಿಂದಲೂ ಮಾನ್ಯರಾದ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ‌ಅವರ ನಿಧನಕ್ಕೆದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ‌ಅಧ್ಯಕ್ಷ‌ಎಸ್. ಪ್ರದೀಪಕುಮಾರಕಲ್ಕೂರತಮ್ಮತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ಪೂಜ್ಯ ಪೇಜಾವರ ಶ್ರೀ ಗಳ ಬಗ್ಗೆ ಅಪಾರ ಶ್ರದ್ಧಾಗೌರವವನ್ನು ಹೊಂದಿದ್ದ‌ ಅಟಲ್‌ಜಿಯವರು ಪೇಜಾವರ ಶ್ರೀ ಗಳ ೪ನೇಪರ್ಯಾಯ ಸಂದರ್ಭ2001ರಲ್ಲಿ ಉಡುಪಿಗೆ ಆಗಮಿಸಿ ರಾಜಾಂಗಣವನ್ನು ಲೋಕಾರ್ಪಣೆಗೈದಿರುವುದು ಸ್ಮರಣೀಯವಾಗಿದೆ. ಆ ಪ್ರಯುಕ್ತ ವಾಜಪೇಯಿಯವರನ್ನು‌ ಅವರ ನಿವಾಸದಲ್ಲಿ ಭೇಟಿಯಾಗಿರುವ ಕ್ಷಣಗಳನ್ನು ಕಲ್ಕೂರ ಸ್ಮರಿಸಿಕೊಂಡಿದ್ದಾರೆ.

Comments are closed.