ಉಡುಪಿ: ಎರಡು ದಿನದ ಹಿಂದೆ ಮಣಿಪಾಲ ನಗರದಲ್ಲಿ ಕರಳು ಬಳ್ಳಿ ಸಹಿತ ನವಜಾತ ಹೆಣ್ಣು ಶಿಶು ಪತ್ತೆಯಾಗಿದ್ದು ಬೀದಿಯಲ್ಲಿ ಎಸೆದು ಹೋದ ಆ ತಾಯಿ ಸುಳಿವು ಪತ್ತೆಯಾಗಿಲ್ಲ. ಉಡುಪಿಯ ಮಣಿಪಾಲದ ಮಣ್ಣಪಳ್ಳದಲ್ಲಿ ಈ ಘಟನೆ ನಡೆದಿದ್ದು ಎರಡು ದಿನದ ಹಿಂದೆ ಈ ಶಿಶು ಪತ್ತೆಯಾಗಿದ್ದು ದೂರು ದಾಖಲಾದ ಹಿನ್ನಲೆಯಲ್ಲಿ ಈ ವಿಚಾರ ಬಹಿರಂಗವಾಗಿದೆ.

ಮಣ್ಣಪಳ್ಳದ ವಾಕಿಂಗ್ ಟ್ರ್ಯಾಕ್ ಬಳಿಯಿರುವ ಸಿಮೆಂಟ್ ಸೀಟಿ ಕೆಳಗೆ ಮಣ್ಣಿನ ಮೇಲೆ ಹೆಣ್ಣು ಮಗು ಬಿಟ್ಟು ಹೋದ ಪಾಪಿ ತಾಯಿ ಯಾರೆಂಬುದು ಇನ್ನೂ ನಿಗೂಢವಾಗಿದೆ. ವೈಧ್ಯಕೀಯ ವಿದ್ಯಾರ್ಥಿನಿ ಆ ದಾರಿಯಲ್ಲಿ ತೆರಳುವಾಗ ಈ ಘಟನೆ ಬೆಳಕಿಗೆ ಬಂದಿದೆ.
ಇದೀಗ ಆ ಶಿಶು ಮಣಿಪಾಲ ಕೆಎಂಸಿಯಲ್ಲಿ ಚೇತರಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿಯಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ,
Comments are closed.